ವಿಭಿನ್ನ ದೃಷ್ಟಿಕೋನದಿಂದ ಯಶಸ್ಸಿನತ್ತ: ಜಿಬನ್ ಕುಮಾರ್ ಅವರ ವೇಸ್ಟ್ ಮ್ಯಾನೇಜ್‌ಮೆಂಟ್‌ ಬ್ಯುಸಿನೆಸ್‌ಗೆ ಸಾಥ್ ಕೊಟ್ಟ ಟಾಟಾ ಏಸ್‌

ಜೆಎಸ್ ಎನ್ವಿರೋ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ಜಿಬನ್ ಕುಮಾರ್ ಉಪಾಧ್ಯಾಯ ನಿರಂತರತೆ ಮತ್ತು ಟಾಟಾ ಏಸ್‌ನಿಂದ ಯಶಸ್ವಿ ತ್ಯಾಜ್ಯ ನಿರ್ವಹಣಾ ವ್ಯವಹಾರವಾಗಿ ಪರಿವರ್ತಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರ ಯಶಸ್ಸಿಗೆ ಟಾಟಾ ಏಸ್‌ನ ಹೇಗೆ ಕೈ ಜೋಡಿಸಿತು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಜೀವನದಲ್ಲಿ ವಿಭಿನ್ನವಾಗಿ ಏನನ್ನಾದರೂ ಸಾಧಿಸಬೇಕಾದರೆ ವಿಭಿನ್ನ ದೃಷ್ಟಿಕೋನವಿರಲೇಬೇಕು. ಹೀಗಾಗಿದ್ದಾಗ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇಂತಹ ಅಲೋಚನೆ ಜಿಬನ್ ಕುಮಾರ್ ಉಪಾಧ್ಯಾಯ (Jiban Kumar Upadhyaya) ಅವರಿಗೆ ಇತ್ತು. ಹೀಗಾಗಿ 2017 ರಲ್ಲಿ ಉನ್ನತ ಮಟ್ಟದ ಕಾರ್ಪೊರೇಟ್ ಉದ್ಯೋಗವನ್ನು ತೊರೆದ ಜಿಬನ್ ಕುಮಾರ್ ಉಪಾಧ್ಯಾಯ ಆಹಾರ ವಿತರಣಾ ವಿಭಾಗ ಹಾಗೂ ತ್ಯಾಜ್ಯ ನಿರ್ವಹಣೆಯತ್ತ ತಮ್ಮ ಮೊದಲ ಹೆಜ್ಜೆ ಇಟ್ಟರು.

ಆದರೆ ಜಿಬನ್ ಅವರ ಪ್ರಯಾಣವು ಅಷ್ಟು ಸುಲಭವಾಗಿರಲಿಲ್ಲ,  ಧ್ಯೇಯ ಏನು ಹಾಗೂ ಯಶಸ್ಸು ಹೇಗೆ ಸಾಧ್ಯ ಎಂಬ ಅವರಿಗಿದ್ದ ಸ್ಪಷ್ಟ ನಿಲುವು ಕೆಲವು ಕಠಿಣ ಪ್ರಶ್ನೆಗಳಿಗೆ ಬಲವಾದ ಉತ್ತರಗಳನ್ನು ಕಂಡುಹಿಡಿಯಲು ಸಹಾಯ ಮಾಡಿತು. ಹೀಗಾಗಿ 2022 ರಲ್ಲಿ ಮನೆ-ಮನೆಯಲ್ಲಿನ ಕಸ ಸಂಗ್ರಹಣೆಗಾಗಿ ಸರ್ಕಾರಿ ಒಪ್ಪಂದವನ್ನು ಪಡೆದಾಗ ಅಲ್ಲಿಂದ ಯಶಸ್ಸು ಆರಂಭವಾಯಿತು.

ಜಿಬನ್ ಅವರ ಸ್ಪಷ್ಟ ನಿಲುವಿಗೆ ಜೊತೆಯಾಗಿದ್ದು ಟಾಟಾ ಏಸ್. ಇವರ ವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಟಾಟಾ ಏಸ್ ಸಾಟಿಯಿಲ್ಲದ ವಿಶ್ವಾಸಾರ್ಹತೆ, ದಕ್ಷತೆ ಮತ್ತು ವಿಶ್ವಾಸವನ್ನು ತಂದುಕೊಟ್ಟಿತು. ಟಾಟಾ ಏಸ್ ಜೊತೆಯಲ್ಲಿದ್ದಾಗ, ಜಿಬನ್ ಹೆಮ್ಮೆಯಿಂದ “ಅಬ್ ಮೇರಿ ಬಾರಿ” ಎಂದು ಘೋಸಿದ್ದರು. ಆದಾದ ಬಳಿಕ ಹಿಂತಿರುಗಿ ನೋಡಿದ್ದೆ ಇಲ್ಲ.

ಇಂದು, ಜೆಎಸ್ ಎನ್ವಿರೋ ಸರ್ವೀಸಸ್ ಪ್ರೈ. ಲಿಮಿಟೆಡ್ ಸುಸ್ಥಿರ ತ್ಯಾಜ್ಯ ನಿರ್ವಹಣೆಯಲ್ಲಿ ಬೆಳೆಯುತ್ತಿರುವ ಪ್ರಮುಖ ಹೆಸರಿದ್ದು, ಈ ಬೆಳವಣಿಗೆಗೆ ಟಾಟಾ ಏಸ್ ಮುಖ್ಯ ಕಾರಣ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ`

Published On - 7:09 pm, Mon, 4 August 25