AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ಕಿನ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಾಣ: ಜಿಂದಾಲ್ ಸ್ಟೀಲ್ ಹೊಸ ಗಿನ್ನೆಸ್ ದಾಖಲೆ

ಜಿಂದಾಲ್ ಸ್ಟೀಲ್ ಲಿ ಸಂಸ್ಥೆಯ ಹೆಸರು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ಸಂಸ್ಕರಿಸಿದ ಉಕ್ಕಿನ ತ್ಯಾಜ್ಯಗಳನ್ನು ಬಳಸಿ 1.85 ಕಿಮೀ ಉದ್ದದ ರಸ್ತೆಯನ್ನು ಸಂಸ್ಥೆ ನಿರ್ಮಿಸಿದೆ. ಈ ರೀತಿ ಸ್ಟೀಲ್ ಸ್ಲ್ಯಾಗ್ ಬಳಸಿ ಅತಿ ಉದ್ದದ ರಸ್ತೆ ನಿರ್ಮಿಸಿದ ದಾಖಲೆ ಇದಾಗಿದೆ. ಛತ್ತೀಸ್​ಗಡದ ರಾಯಗಡದಲ್ಲಿರುವ ಈ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಎರಡು ಲಕ್ಷ ಟನ್​ಗಳಷ್ಟು ಉಕ್ಕು ತ್ಯಾಜ್ಯvನ್ನು ಬಳಸಲಾಗಿದೆ.

ಉಕ್ಕಿನ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಾಣ: ಜಿಂದಾಲ್ ಸ್ಟೀಲ್ ಹೊಸ ಗಿನ್ನೆಸ್ ದಾಖಲೆ
ಜಿಂದಾಲ್ ಸ್ಟೀಲ್ ಲಿಮಿಟೆಡ್ 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 13, 2026 | 7:23 PM

Share

ಮುಖ್ಯಾಂಶಗಳು

  • ಜಿಂದಾಲ್ ಸ್ಟೀಲ್ ಲಿ ಸಂಸ್ಥೆಯ ಹೆಸರು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ದಾಖಲಾಗಿದೆ.
  • ಸಂಸ್ಕರಿಸಿದ ಉಕ್ಕಿನ ತ್ಯಾಜ್ಯಗಳನ್ನು ಬಳಸಿ 1.85 ಕಿಮೀ ಉದ್ದದ ರಸ್ತೆಯನ್ನು ಸಂಸ್ಥೆ ನಿರ್ಮಿಸಿದೆ.
  • ಈ ರೀತಿ ಸ್ಟೀಲ್ ಸ್ಲ್ಯಾಗ್ ಬಳಸಿ ಅತಿ ಉದ್ದದ ರಸ್ತೆ ನಿರ್ಮಿಸಿದ ದಾಖಲೆ ಇದಾಗಿದೆ.

ರಾಯಗಡ್, ಸೆಪ್ಟೆಂಬರ್ 13: ಛತ್ತೀಸ್‌ಗಢದ ರಾಯ್‌ಗಢದಲ್ಲಿ ಸಂಸ್ಕರಿಸಿದ ಉಕ್ಕಿನ ತ್ಯಾಜ್ಯ (Steel Slag Aggregates) ಬಳಸಿ ವಿಶ್ವದ ಅತಿ ಉದ್ದದ ರಸ್ತೆಯನ್ನು ನಿರ್ಮಿಸುವ ಮೂಲಕ ಜಿಂದಾಲ್ ಸ್ಟೀಲ್ ಲಿಮಿಟೆಡ್ ಸಂಸ್ಥೆಯು ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್’ ಸಾಧನೆ ಮಾಡಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ಸಹಯೋಗದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ.

ರಾಯ್‌ಗಢದಲ್ಲಿ ನಿರ್ಮಿಸಲಾದ ಈ 4-ಪಥದ (4-lane) ರಸ್ತೆಯು 1.85 ಕಿಲೋಮೀಟರ್ ಉದ್ದವಿದ್ದು, ರಾಷ್ಟ್ರೀಯ ಹೆದ್ದಾರಿ-49 ಗೆ ಸಂಪರ್ಕ ಕಲ್ಪಿಸುತ್ತದೆ.

ತ್ಯಾಜ್ಯದಿಂದ ಸಂಪತ್ತು: ಉಕ್ಕು ತಯಾರಿಕಾ ಪ್ರಕ್ರಿಯೆಯಲ್ಲಿ ಹೊರಬರುವ ಸುಮಾರು 2 ಲಕ್ಷ ಟನ್‌ಗಳಷ್ಟು ಇಎಎಫ್ (EAF) ಸ್ಟೀಲ್ ಸ್ಲ್ಯಾಗ್ ತ್ಯಾಜ್ಯವನ್ನು ಸಂಸ್ಕರಿಸಿ ಈ ರಸ್ತೆ ನಿರ್ಮಾಣಕ್ಕೆ ಸಂಪೂರ್ಣವಾಗಿ ಬಳಸಲಾಗಿದೆ.

ಇದನ್ನೂ ಓದಿ: ಎಐ ಕೈಮೀರುವ ಮುನ್ನ ವೇಗಕ್ಕೆ ಬ್ರೇಕ್ ಹಾಕಬೇಕು ಎಂದ ಆಂಥ್ರೋಪಿಕ್ ಸಿಇಒ; ಹೌದೆಂದ ಸ್ಯಾಮ್ ಆಲ್ಟ್​ಮನ್, ಇಲಾನ್ ಮಸ್ಕ್

ನೈಸರ್ಗಿಕ ಕಲ್ಲು ಹಾಗೂ ಜಲ್ಲಿಕಲ್ಲುಗಳ ಬಳಕೆಯನ್ನು ಶೇ.100 ರಷ್ಟು ತಡೆಗಟ್ಟಲಾಗಿದ್ದು, ಪರಿಸರ ನಾಶವನ್ನು ತಪ್ಪಿಸಲಾಗಿದೆ. ಸಾಮಾನ್ಯ ರಸ್ತೆಗಳಿಗೆ ಹೋಲಿಸಿದರೆ ಈ ತಂತ್ರಜ್ಞಾನದಿಂದ ರಸ್ತೆ ನಿರ್ಮಾಣ ವೆಚ್ಚವು ಶೇಕಡಾ ೪೦ ರಷ್ಟು ಕಡಿಮೆಯಾಗಲಿದ್ದು, ರಸ್ತೆಯ ದಪ್ಪ ಶೇಕಡಾ 35 ರಷ್ಟು ಕಡಿಮೆಯಾಗಲಿದೆ.

ಈ ರಸ್ತೆಯು ಸಾಮಾನ್ಯ ರಸ್ತೆಗಳಿಗಿಂತ ಸುಮಾರು 4 ಪಟ್ಟು ಹೆಚ್ಚು ಗಟ್ಟಿಮುಟ್ಟಾಗಿದ್ದು, ಭಾರಿ ವಾಣಿಜ್ಯ ವಾಹನಗಳ ಸಂಚಾರಕ್ಕೆ ಸೂಕ್ತವಾಗಿದೆ.

ಸ್ಟೀಲ್ ಗ್ರಿಟ್ ಉತ್ಪನ್ನ ಬಿಡುಗಡೆ: ಇದೇ ಸಂದರ್ಭದಲ್ಲಿ ಜಿಂದಾಲ್ ಸ್ಟೀಲ್ ಸಂಸ್ಥೆಯು ತಾನು ಸಂಸ್ಕರಿಸಿದ ಸ್ಟೀಲ್ ಸ್ಲ್ಯಾಗ್ ಉತ್ಪನ್ನಕ್ಕೆ “SteelGrit” ಎಂಬ ಬ್ರ್ಯಾಂಡ್ ಹೆಸರನ್ನು ಅನಾವರಣಗೊಳಿಸಿದೆ.

ಇದನ್ನೂ ಓದಿ: ನೀವು ಆಡಿದ ಮಾತನ್ನು ಫೋನ್‌ ಅಕ್ಷರಗಳಾಗಿ ಹೇಗೆ ಬದಲಿಸುತ್ತದೆ?

ಈ ಸಾಧನೆಯು ಭಾರತದ ವೃತ್ತಾಕಾರದ ಆರ್ಥಿಕತೆಗೆ (Circular Economy) ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಾರಿದೀಪವಾಗಿದೆ ಎಂದು ಜಿಂದಾಲ್ ಸ್ಟೀಲ್ ಲಿಮಿಟೆಡ್ ಅಧ್ಯಕ್ಷ ನವೀನ್ ಜಿಂದಾಲ್ ಹಾಗೂ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 13 September 26

Follow Us