ನವದೆಹಲಿ: ರಿಲಾಯನ್ಸ್ ಜಿಯೋ 2 ಜಿ ಗ್ರಾಹಕರನ್ನು ಸೆಳೆಯುವ ಕಸರತ್ತಿನಲ್ಲಿ ಹೊಸ ಪ್ರಯೋಗ ಮಾಡಿದೆ. ಸ್ಮಾರ್ಟ್ಫೋನ್ನಲ್ಲಿಯಂತೆ ಸೌಲಭ್ಯಗಳಿರುವ ಫೀಚರ್ ಫೋನ್ ಅನ್ನು ಜಿಯೋ ಹಿಂದೆ (2018ರಲ್ಲಿ) ಬಿಡುಗಡೆ ಮಾಡಿತ್ತು. ಇದು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಇದೀಗ ಪ್ರಯತ್ನ ಮುಂದುವರಿಸಿರುವ ರಿಲಾಯನ್ಸ್, ಜಿಯೋ ಭಾರತ್ (Jio Bharat) ಎಂಬ ಹೊಸ ಫೋನ್ ಅನ್ನು ಅನಾವರಣಗೊಳಿಸಿದೆ. ಇದರ ಬೆಲೆ ಕೇವಲ 999 ರೂ ಆಗಿದೆ. ತಜ್ಞರ ಪ್ರಕಾರ ಟೆಲಿಕಾಂ ಮಾರುಕಟ್ಟೆಯಲ್ಲಿ ಈ ಫೋನ್ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಜಿಯೋ ಪ್ರತಿಸ್ಪರ್ಧಿ ಭಾರ್ತಿ ಏರ್ಟೆಲ್ (Bharti Airtel) ಕಂಪನಿಯ ಷೇರುಗಳ ಬೆಲೆ ದಿಢೀರನೇ ಕುಸಿಯತೊಡಗಿದೆ.
ಜಿಯೋ ಭಾರತ್ ಫೋನ್ 4ಜಿ ಶಕ್ತವಾಗಿದ್ದು, 2ಜಿ ಬೆಲೆಗೆ 4ಜಿ ಸೇವೆಗಳನ್ನು ನೀಡಬಲ್ಲುದು. 28 ದಿನಗಳ ರೀಚಾರ್ಜ್ ಪ್ಲಾನ್ 123 ರೂ ಇದ್ದು, ಇದರಲ್ಲಿ 14ಜಿಬಿಯಷ್ಟು 4ಜಿ ಡಾಟಾ ಕೊಡಲಾಗುತ್ತದೆ. ಜಿಯೋಯೇತರ ಯಾವುದೇ ಟೆಲಿಕಾಂ ಕಂಪನಿಗಳಿಗಿಂತ ತೀರಾ ಅಗ್ಗದ ದರದಲ್ಲಿ ರೀಚಾರ್ಜ್ ಪ್ಲಾನ್ಗಳನ್ನು ಜಿಯೋ ಭಾರತ್ಗೆ ಒದಗಿಸಲಾಗುತ್ತಿದೆ.
ಇದನ್ನೂ ಓದಿ: Jio Bharat 4G: ಯಾವುದೇ ಸೂಚನೆಯಿಲ್ಲದೆ ಕೇವಲ 999 ರೂ. ಗೆ ಜಿಯೋ ಭಾರತ್ 4G ಫೋನ್ ಬಿಡುಗಡೆ ಮಾಡಿದ ಜಿಯೋ
2018ರಲ್ಲಿ ಬಂದ ಜಿಯೋ ಫೋನ್ಗಿಂತಲೂ ಈಗ ಬಿಡುಗಡೆ ಆಗಿರುವ ಜಿಯೋ ಭಾರತ್ ಫೋನ್ ಹೆಚ್ಚು ಯಶಸ್ಸು ಸಾಧಿಸುವ ನಿರೀಕ್ಷೆ ಇದೆ. 2ಜಿ ಗ್ರಾಹಕರೇ ಈ ಫೋನ್ನ ಟಾರ್ಗೆಟ್ ಆಗಿದೆ. ವೊಡಾಫೋನ್ ಐಡಿಯಾ ಸುಮಾರು 10.3 ಕೋಟಿಯಷ್ಟು 2ಜಿ ಗ್ರಾಹಕರನ್ನು ಹೊಂದಿದೆ. ಏರ್ಟೆಲ್ 11.1 ಕೋಟಿ 2ಜಿ ಗ್ರಾಹಕರನ್ನು ಹೊಂದಿದೆ. ಈಗ 1,000 ರೂ ಒಳಗಿನ ಜಿಯೋ ಭಾರತ್ ಫೋನ್ ಬಂದ ಬಳಿಕ ವೊಡಾಫೋನ್ ಮತ್ತು ಏರ್ಟೆಲ್ನಿಂದ ಬಹಳಷ್ಟು 2ಜಿ ಬಳಕೆದಾರರು ಜಿಯೋಗೆ ವಲಸೆ ಹೋಗುವ ಸಾಧ್ಯತೆ ದಟ್ಟವಾಗಿದೆ. ತಜ್ಞರ ಅಂದಾಜಿನ ಪ್ರಕಾರ 10 ಕೋಟಿಯಷ್ಟು 2ಜಿ ಗ್ರಾಹಕರನ್ನು ಜಿಯೋ ಸೆಳೆಯಬಹುದು ಎನ್ನಲಾಗಿದೆ.
ಇದನ್ನೂ ಓದಿ: Stock Market Advice: ಈಗ ಷೇರುಪೇಟೆ ಚಿಂತೆ ಬೇಡ; ನಿಯಮಿತ ಹೂಡಿಕೆಯತ್ತ ಗಮನ ಕೊಡಿ: ದೇವೇನ್ ಚೋಕ್ಸಿ ಸಲಹೆಗಳಿವು
ಜಿಯೋ ಭಾರತ್ ಫೋನ್ನಿಂದಾಗಿ ಏರ್ಟೆಲ್ನ ಶೇ. 40ರಷ್ಟು 2ಜಿ ಗ್ರಾಹಕರು ನಿರ್ಗಮಿಸಿದರೂ ಅದು ಆದಾಯಕ್ಕೆ ತಕ್ಕಮಟ್ಟಕ್ಕಾದರೂ ಕುತ್ತು ಕೊಟ್ಟಂತಾಗುತ್ತದೆ. ಈ ಸಾಧ್ಯತೆ ಗೋಚರಿಸುತ್ತಲೇ ಷೇರುಪೇಟೆಯಲ್ಲಿ ಭಾರ್ತಿ ಏರ್ಟೆಲ್ ಕಂಪನಿಯ ಷೇರು ಬೆಲೆ ಜುಲೈ 4ರಂದು ಸುಮಾರು 13 ರುಪಾಯಿಯಷ್ಟು ಕುಸಿದಿದೆ. 879.15 ರೂ ಇದ್ದ ಅದರ ಷೇರುಬೆಲೆ ಇದೀಗ 866 ರೂಗೆ ಇಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ