AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Bharat 4G: ಯಾವುದೇ ಸೂಚನೆಯಿಲ್ಲದೆ ಕೇವಲ 999 ರೂ. ಗೆ ಜಿಯೋ ಭಾರತ್ 4G ಫೋನ್ ಬಿಡುಗಡೆ ಮಾಡಿದ ಜಿಯೋ

ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ.

Jio Bharat 4G: ಯಾವುದೇ ಸೂಚನೆಯಿಲ್ಲದೆ ಕೇವಲ 999 ರೂ. ಗೆ ಜಿಯೋ ಭಾರತ್ 4G ಫೋನ್ ಬಿಡುಗಡೆ ಮಾಡಿದ ಜಿಯೋ
Jio Bharat 4G phone
Follow us
Vinay Bhat
|

Updated on: Jul 04, 2023 | 12:53 PM

ರಿಲಯನ್ಸ್ ಜಿಯೋ (Reliance Jio) ಭಾರತದಲ್ಲಿ ಯಾವುದೇ ಸೂಚನೆಯಿಲ್ಲದೆ ದಿಢೀರ್ ಆಗಿ ಜಿಯೋ ಭಾರತ್ (Jio Bharat 4G) ಹೆಸರಿನ ಫೋನನ್ನು ಲಾಂಚ್ ಮಾಡಿದೆ. ವಿಶೇಷ ಎಂದರೆ ಈ ಫೋನ್ 4ಜಿ ಬೆಂಬಲ ಪಡೆದುಕೊಂಡಿದ್ದು, ಬೆಲೆ ಮಾತ್ರ ಕೇವಲ 999 ರೂ.. ಭಾರತವನ್ನು ‘2G-ಮುಕ್ತ್ ಭಾರತ್’ ಮಾಡುವ ನಿಟ್ಟಿನಲ್ಲಿ ಜಿಯೋ ಈ ಮಹತ್ವದ ಫೋನನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈಗ ಕೂಡ 250 ಮಿಲಿಯನ್ ಮೊಬೈಲ್‌ (Mobile) ಬಳಕೆದಾರರು 2G ಬಳಸುತ್ತಿದ್ದಾರೆ. ಇದನ್ನು ಕೊನೆಗೊಳಿಸಿ 4G ಉಪಯೋಗಿಸುವಂತೆ ಮಾಡುವುದು ಜಿಯೋದ ಉದ್ದೇಶವಾಗಿದೆ. ಹೀಗಾಗಿ ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನನ್ನು ರಿಲೀಸ್ ಮಾಡಿದೆ.

ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ. ಭಾರತದಲ್ಲಿ ಎಲ್ಲಿಗೆ ಬೇಕಾದರೂ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

iQoo Neo 7 Pro: ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟಿರಬಹುದು?

ಇದನ್ನೂ ಓದಿ
Image
Driving Licence: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Image
Threads App: ಸಮಸ್ಯೆಗಳ ತೊಟ್ಟಿಯಾದ ಟ್ವಿಟ್ಟರ್: ಗುರುವಾರ ಮೆಟಾದಿಂದ ಟ್ವಿಟ್ಟರ್ ಮಾದರಿಯ ಥ್ರೆಡ್ಸ್‌ ಆ್ಯಪ್ ಬಿಡುಗಡೆ
Image
Nothing Phone 2: ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದರೆ ₹2,000 ಸ್ಪೆಶಲ್ ಡಿಸ್ಕೌಂಟ್
Image
Tecno Pova 5: ಬಜೆಟ್ ದರಕ್ಕೆ ಬೆಸ್ಟ್ ಹೊಸ ಟೆಕ್ನೋ ಫೋನ್ ಲಾಂಚ್

ವಿಶೇಷ ಎಂದರೆ ಈ ಫೋನ್​ನಲ್ಲಿ ಜಿಯೋ ಪೇ ಮೂಲಕ ಯುಪಿಐ ವಹಿಪಾಟು ನಡೆಸಬಹುದು. ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಎಫ್​ಎಮ್ ರೆಡಿಯೋ ಸಪೋರ್ಟ್ ಮಾಡುತ್ತದೆ. ಒಂದು ಮಿಲಿಯನ್ ಜಿಯೋ ಭಾರತ್ ಫೋನ್ ತಯಾರಾಗಿದ್ದು, ಜುಲೈ 7 ರಿಂದ ಎಲ್ಲ ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಜಿಯೋ ಭಾರತ್ ಫೋನ್​ಗಳಿಗೆ ಬೇಸ್‌ ರೀಚಾರ್ಜ್‌ ಪ್ಲಾನ್‌ ಅನ್ನು ಕೂಡ ಘೋಷಣೆ ಮಾಡಲಾಗಿದೆ. ಈ ರೀಚಾರ್ಜ್ ಪ್ಲಾನ್‌ ಬೆಲೆ ಕೇವಲ 123 ರೂ. ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದರ ಜೊತೆಗೆ 1234 ರೂ. ವಿನ ಒಂದು ವರ್ಷದ ಪ್ಲಾನ್ ಕೂಡ ಇದ್ದು, ಇದರಲ್ಲಿ 168GB ಡೇಟಾ ನೀಡಲಾಗಿದೆ. ಅನಿಯಮಿತ ಕರೆ ಅವಕಾಶ ಕೂಡ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ