Threads App: ಸಮಸ್ಯೆಗಳ ತೊಟ್ಟಿಯಾದ ಟ್ವಿಟ್ಟರ್: ಗುರುವಾರ ಮೆಟಾದಿಂದ ಟ್ವಿಟ್ಟರ್ ಮಾದರಿಯ ಥ್ರೆಡ್ಸ್‌ ಆ್ಯಪ್ ಬಿಡುಗಡೆ

ಮೆಟಾ ಸಂಸ್ಥೆಯ ''ಥ್ರೆಡ್ಸ್'' ಎಂಬ ನೂತನ ಅಪ್ಲಿಕೇಷನ್ ಸಂವಾದಕ್ಕೆ ಅವಕಾಶವಿರುವ ಆ್ಯಪ್‌ ಆಗಿದೆ. ಇದು ಇದೇ ಗುರುವಾರ ಜುಲೈ 6 ರಂದು ಬಿಡುಗಡೆ ಆಗಲಿದೆ. ಇದು ಟ್ವಿಟ್ಟರ್‌ಗೆ ಪರ್ಯಾಯವಾದ ಹೊಸ ಆ್ಯಪ್‌ ಎನ್ನಲಾಗುತ್ತಿದೆ.

Threads App: ಸಮಸ್ಯೆಗಳ ತೊಟ್ಟಿಯಾದ ಟ್ವಿಟ್ಟರ್: ಗುರುವಾರ ಮೆಟಾದಿಂದ ಟ್ವಿಟ್ಟರ್ ಮಾದರಿಯ ಥ್ರೆಡ್ಸ್‌ ಆ್ಯಪ್ ಬಿಡುಗಡೆ
threads vs twitter
Follow us
Vinay Bhat
|

Updated on: Jul 04, 2023 | 11:20 AM

ಟ್ವಿಟರ್, ಟೆಸ್ಲಾ ಸಿಎಒ ಎಲಾನ್ ಮಸ್ಕ್ (Elon Musk) ತೆಕ್ಕೆಗೆ ಹೋದ ಬಳಿಕ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇದರ ನುಡವೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಹೊಸ ಹೊಸ ನಿಯಮ ತಂದು ತನ್ನ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿ ಖಾತೆದಾರರನ್ನು ಕಳೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಟ್ವಿಟ್ಟರ್ (Twitter) ಪ್ರತಿ ನಿತ್ಯ ನಿಗದಿತ ಪೋಸ್ಟ್‌ಗಳ ವೀಕ್ಷಣೆ ಮಾಡುವ ಮಿತಿಯನ್ನು ಹೇರಿದೆ. ಇದು ಅನೇಕರಿಗೆ ಕೋಪ ತರಿಸಿದ್ದು ಟ್ವಿಟ್ಟರ್​ನಲ್ಲಿ ಟ್ವಿಟ್ಟರ್ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಮೆಟಾ (Meta) ಸಂಸ್ಥೆ ಥೇಟ್ ಟ್ವಿಟ್ಟರ್ ಮಾದರಿಯ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಮೆಟಾ ಸಂಸ್ಥೆಯ ”ಥ್ರೆಡ್ಸ್” ಎಂಬ ನೂತನ ಅಪ್ಲಿಕೇಷನ್ ಸಂವಾದಕ್ಕೆ ಅವಕಾಶವಿರುವ ಆ್ಯಪ್‌ ಆಗಿದೆ. ಇದು ಇದೇ ಗುರುವಾರ ಜುಲೈ 6 ರಂದು ಬಿಡುಗಡೆ ಆಗಲಿದೆ. ಇದು ಟ್ವಿಟ್ಟರ್‌ಗೆ ಪರ್ಯಾಯವಾದ ಹೊಸ ಆ್ಯಪ್‌ ಎನ್ನಲಾಗುತ್ತಿದೆ. ಥ್ರೆಡ್ಸ್‌ ಅನ್ನು ಬಳಕೆದಾರರು ‌ಇನ್​ಸ್ಟಾಗ್ರಾಮ್ ಅಕೌಂಟ್​ಗೆ ಲಿಂಕ್ ಮಾಡುವ ಮೂಲಕ ಉಪಯೋಗಿಸಬಹುದು. ಇನ್​ಸ್ಟಾದ ಯೂಸರ್‌ ನೇಮ್‌ ನಲ್ಲೇ ಥ್ರೆಟ್ಸ್​ನಲ್ಲೂ ಮುಂದುವರೆಸಬಹುದು. ಆದರೆ, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬದಲಾಗಿ ಆ್ಯಪಲ್​ನ ಆ್ಯಪ್ ಸ್ಟೋರ್‌ನ ಪಟ್ಟಿಯಲ್ಲಿ ಇದು ಕಾಣಿಸಿಕೊಂಡಿದೆ.

Asus Zenfone 10: ಗ್ಯಾಜೆಟ್​ ಮಾರುಕಟ್ಟೆಗೆ ಪ್ರೀಮಿಯಂ ಗೇಮಿಂಗ್ ಏಸಸ್ ಝೆನ್​ಫೋನ್

ಇದನ್ನೂ ಓದಿ
Image
Nothing Phone 2: ಬಿಡುಗಡೆಗೂ ಮುನ್ನ ಬುಕಿಂಗ್ ಮಾಡಿದರೆ ₹2,000 ಸ್ಪೆಶಲ್ ಡಿಸ್ಕೌಂಟ್
Image
Tecno Pova 5: ಬಜೆಟ್ ದರಕ್ಕೆ ಬೆಸ್ಟ್ ಹೊಸ ಟೆಕ್ನೋ ಫೋನ್ ಲಾಂಚ್
Image
iQoo Neo 7 Pro: ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟಿರಬಹುದು?
Image
Fire-Boltt Grenade: ಸಖತ್ ಸ್ಟೈಲಿಶ್ ವಿನ್ಯಾಸದಲ್ಲಿ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಥ್ರೆಡ್ಸ್ ಎಂಬ ಆ್ಯಪ್ ಟ್ವಿಟ್ಟರ್ ಮಾದರಿಯಲ್ಲೇ ಇರಲಿದೆ ಎನ್ನಲಾಗಿದೆ. ಅಂದರೆ ಇದರಲ್ಲಿ ಲೈಕ್ಸ್, ಕಮೆಂಟ್, ಶೇರ್, ಬರಹಗಳನ್ನು ಬರೆಯಬಹುದು. ಬೇರೆಯವರನ್ನು ಫಾಲೋ ಮಾಡಬಹುದು. ಟ್ವಿಟ್ಟರ್​ನಲ್ಲಿ ಟ್ವೀಟ್, ರೀಟ್ವೀಟ್ ಎಂಬ ಆಯ್ಕೆ ಇತ್ತು. ಥ್ರೆಡ್ಸ್​ನಲ್ಲಿ ಇದೇ ಮಾದರಿಯಲ್ಲಿ ಬೇರೆ ಆಯ್ಕೆ ಇರಲಿದೆ. ಟ್ರೆಂಡಿಂಗ್ ಸುದ್ದಿ ಬಗ್ಗೆ ವಿಶೇಷ ಕಾಲಂ ಇರುವ ಸಾಧ್ಯತೆ ಇದೆ. ಇದರಲ್ಲೂ ವೆರಿಫೈಡ್ ಬ್ಯಾಡ್ಜ್ ಬರಲಿದೆ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಎಲಾನ್ ಮಸ್ಕ್ ನೂತನ ನಿಯಮಗಳನ್ನು ರೂಪಿಸಿ ಅನೇಕ ಆಯ್ಕೆಗಳಿಗೆ ಕಡಿವಾಣ ಹಾಕುತ್ತಿದ್ದಾರೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಮೊನ್ನೆಯಷ್ಟೆ ಎಲಾನ್‌ ಮಸ್ಕ್‌ ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂಬ ಮಿತಿ ವಿಧಿಸಿದ್ದರು. ಇದರಿಂದ ಟ್ವಿಟ್ಟರ್‌ ಡೌನ್ ಆಗಿ ತನ್ನ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಕೂಡ ಹೊರಹಾಕಿದ್ದರು.

ಮಸ್ಕ್ ಅವರ ಈ ನಿರ್ಧಾರ ಅನೇಕರ ಕೆಂಗಣ್ಣಿಗೆ ಗುರಿಯಾದ ಬಳಿಕ ಮಸ್ಕ್‌ ಈ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿದ್ದರು. ಅನಗತ್ಯ ಡೇಟಾ ಬಳಕೆ ಮಾಡೋದನ್ನ ತಪ್ಪಿಸುವುದು, ಕೆಲ ಪೋಸ್ಟ್‌ಗಳ ಮೂಲಕ ಕೆರಳಿಸುವ ಪ್ರಯತ್ನ ಮಾಡುತ್ತಿರುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್‌ ಪ್ರತಿದಿನದ ಪೋಸ್ಟ್‌ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ ಎಂಬ ಹೇಳಿಕೆ ನೀಡಿದ್ದರು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್