AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೆಸ್ಟ್ ಸರಣಿ ಡ್ರಾ ಆದರೆ ಯಾವ ತಂಡದ ಪಾಲಾಗಲಿದೆ ಟ್ರೋಫಿ?

Anderson-Tendulkar Trophy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಆಂಡರ್ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆಯಲ್ಲಿದೆ. ಕೊನೆಯ ಪಂದ್ಯ ಓವಲ್‌ನಲ್ಲಿ ನಡೆಯಲಿದೆ. ಒಂದು ವೇಳೆ ಸರಣಿ ಡ್ರಾ ಆದರೆ ಈ ಟ್ರೋಫಿ ಯಾವ ತಂಡದ ಪಾಲಾಗಲಿದೆ ಎಂಬುದು ಇದೀಗ ಹುಟ್ಟಿರುವ ಪ್ರಶ್ನೆಯಾಗಿದೆ.

IND vs ENG: ಟೆಸ್ಟ್ ಸರಣಿ ಡ್ರಾ ಆದರೆ ಯಾವ ತಂಡದ ಪಾಲಾಗಲಿದೆ ಟ್ರೋಫಿ?
Ind Vs Eng
ಪೃಥ್ವಿಶಂಕರ
|

Updated on:Jul 28, 2025 | 10:11 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ (Anderson-Tendulkar Trophy) ಹೆಸರಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ . ಈ ಸರಣಿಯನ್ನು ಮೊದಲು ಪಟೌಡಿ ಟ್ರೋಫಿ  ಎಂದು ಕರೆಯಲಾಗುತ್ತಿತ್ತು . ಎರಡೂ ತಂಡಗಳ ನಡುವಿನ ಈ ಸರಣಿ ಪ್ರಸ್ತುತ ರೋಚಕ ಹಂತವನ್ನು ತಲುಪಿದೆ. ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈಗ ಕೊನೆಯ ಪಂದ್ಯವು ಜುಲೈ 31 ರಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಸರಣಿಯನ್ನು ನಿರ್ಧರಿಸುತ್ತದೆ . ಆದರೆ ದೊಡ್ಡ ಪ್ರಶ್ನೆಯೆಂದರೆ ಸರಣಿ ಡ್ರಾದಲ್ಲಿ ಕೊನೆಗೊಂಡರೆ , ಟ್ರೋಫಿ ಯಾರಿಗೆ ಸಿಗುತ್ತದೆ? ಎಂಬುದು. ಅದಕ್ಕೆ ಉತ್ತರ ಇಲ್ಲಿದೆ.

ಓವಲ್‌ನಲ್ಲಿ ಸರಣಿ ನಿರ್ಧಾರ

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡರೆ, ಎರಡನೇ ಪಂದ್ಯದಲ್ಲಿ, ಟೀಂ ಇಂಡಿಯಾ ಭಾರಿ ಗೆಲುವು ಸಾಧಿಸಿತು. ಆದರೆ ಇಂಗ್ಲೆಂಡ್ ಮೂರನೇ ಪಂದ್ಯವನ್ನು ಗೆದ್ದು 2-1 ಅಂತರದಿಂದ ಮುನ್ನಡೆ ಸಾಧಿಸಿತು. ಇದೀಗ ಟೀಂ ಇಂಡಿಯಾ ನಾಲ್ಕನೇ ಪಂದ್ಯವನ್ನು ಡ್ರಾ ಮಾಡಿಕೊಂಡಿರಬಹುದು. ಆದರೆ ಇಂಗ್ಲೆಂಡ್ ತಂಡವು ಸರಣಿಯನ್ನು ಗೆಲ್ಲಲು ಕೇವಲ ಒಂದು ಡ್ರಾ ಅಗತ್ಯವಿದೆ. ಅದು ಪಂದ್ಯವನ್ನು ಗೆದ್ದರೆ, ಗೆಲುವಿನ ಅಂತರವು 3-1 ಆಗಿರುತ್ತದೆ.

ಮತ್ತೊಂದೆಡೆ, ಟೀಂ ಇಂಡಿಯಾ ಈಗ ಈ ಸರಣಿಯನ್ನು ಗೆಲ್ಲಲು ಸಾಧ್ಯವಿಲ್ಲ , ಆದರೆ ಡ್ರಾ ಮಾಡಿಕೊಳ್ಳುವ ಉತ್ತಮ ಅವಕಾಶವಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ 5 ನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ ಗೆದ್ದರೆ , ಸರಣಿ ಡ್ರಾದಲ್ಲಿ ಕೊನೆಗೊಳ್ಳುತ್ತದೆ. ಆದರೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ, ಟೀಂ ಇಂಡಿಯಾ ಸರಣಿಯನ್ನು ಕಳೆದುಕೊಳ್ಳುತ್ತದೆ .  ಒಂದು ವೇಳೆ ಸರಣಿಯು ಎರಡು ತಂಡಗಳ ನಡುವೆ 2-2 ರಿಂದ ಡ್ರಾದಲ್ಲಿ ಕೊನೆಗೊಂಡರೆ, ಟ್ರೋಫಿ ಇಂಗ್ಲೆಂಡ್‌ ಪಾಲಾಗುತ್ತದೆಯೇ ಅಥವಾ ಟೀಂ ಇಂಡಿಯಾ ಪಾಲಾಗುತ್ತದೆಯೇ ಎಂಬುದು ಪ್ರಶ್ನೆ.

IND vs ENG: ಮೂವರು ಔಟ್; 5ನೇ ಟೆಸ್ಟ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾ

ಸರಣಿ ಡ್ರಾ ಆದರೆ ಟ್ರೋಫಿ ಯಾರ ಪಾಲಾಗಲಿದೆ?

ಎರಡು ತಂಡಗಳ ನಡುವೆ ಟೆಸ್ಟ್ ಸರಣಿ ಡ್ರಾ ಆದಾಗ, ಕಳೆದ ಬಾರಿ ಈ ಟ್ರೋಫಿಯನ್ನು ಗೆದ್ದ ತಂಡಕ್ಕೆ ಟ್ರೋಫಿಯನ್ನು ನೀಡಲಾಗುತ್ತದೆ. ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಬಗ್ಗೆ ಹೇಳುವುದಾದರೆ , ಇದನ್ನು ಮೊದಲು ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು, ಈ ಸರಣಿಯನ್ನು ಕೊನೆಯ ಬಾರಿಗೆ ಆಡಿದ್ದು 2021-22ರಲ್ಲಿ. ಆ ಸರಣಿ ಡ್ರಾದಲ್ಲಿ ಕೊನೆಗೊಂಡಿತ್ತು. ಅದಕ್ಕೂ ಮೊದಲು ಈ ಸರಣಿಯನ್ನು 2018 ರಲ್ಲಿ ಆಡಲಾಗಿತ್ತು. ಆ ಸರಣಿಯನ್ನು ಇಂಗ್ಲೆಂಡ್ 4-1 ಅಂತರದಲ್ಲಿ ಗೆದ್ದುಕೊಂಡಿತ್ತು. ಅಂದಿನಿಂದ ಈ ಟ್ರೋಫಿ ಇಂಗ್ಲೆಂಡ್ ಬಳಿಯೇ ಇದೆ. ಇದೀಗ ಈ ಬಾರಿಯೂ ಸರಣಿ ಡ್ರಾ ಆದಲ್ಲಿ ಟ್ರೋಫಿ ಇಂಗ್ಲೆಂಡ್ ಬಳಿಯೇ ಉಳಿಯುತ್ತದೆ.

ಆದಾಗ್ಯೂ ಇದು ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಮೊದಲ ಆವೃತ್ತಿಯಾಗಿರುವ ಕಾರಣ ಉಭಯ ತಂಡಗಳು ಈ ಟ್ರೋಫಿಯನ್ನು ಹಂಚಿಕೊಳ್ಳುವ ಸಾಧ್ಯತೆಯೂ ಇದೆ. ಆದಾಗ್ಯೂ, ಸರಣಿಯು ಡ್ರಾದಲ್ಲಿ ಕೊನೆಗೊಂಡರೆ ಟ್ರೋಫಿ ಯಾರ ಬಳಿ ಉಳಿಯಲಿದೆ ಎಂಬುದರ ಬಗ್ಗೆ ಇಸಿಬಿ ಅಥವಾ ಬಿಸಿಸಿಐ ಇದುವರೆಗೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಹೀಗಾಗಿ ಸರಣಿಯ ಬಳಿಕವಷ್ಟೇ ಟ್ರೋಫಿ ಯಾರ ಬಳಿ ಉಳಿಯುತ್ತದೆ ಎಂಬುದು ತಿಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Mon, 28 July 25