ಯೂರಿಯಾ ಸಿಗುತ್ತಿಲ್ಲವೆಂದು ಮಣ್ಣು ತಿಂದ ರೈತನ ಮನೆಗೆ ಎರಡು ಚೀಲ ರಸಗೊಬ್ಬರ ತಂದುಕೊಟ್ಟ ಬಿಜೆಪಿ ರೈತ ಮೋರ್ಚಾ
ರಾಜ್ಯದೆಲ್ಲೆಡೆ ಈ ಬಾರಿ ಉತ್ತಮ ಮಳೆಯಾಗಿ ರೈತ ಸಮುದಾಯ ಸಂತಸದಿಂದ ಬೀಗುತ್ತಿರುವಾಗಲೇ ಯೂರಿಯಾದ ಕೊರತೆಯಿಂದ ಸಮಸ್ಯೆ ತಲೆದೋರಿದೆ. ಜಿಲ್ಲಾ, ತಾಲೂಕು ಕೇಂದ್ರ ಮತ್ತು ಹೋಬಳಿಗಳಲ್ಲಿರುವ ಎಪಿಎಂಸಿ ಮತ್ತು ಫರ್ಟಿಲೈಜರ್ ಅಂಗಡಿಗಳ ಮುಂದೆ ರೈತರ ಉದ್ದುದ್ದ ಸಾಲುಗಳು ಕಾಣುತ್ತವೆಯೇ ಹೊರತು ರಸಗೊಬ್ಬರದ ಸ್ಟಾಕ್ ಮಾತ್ರ ಕಾಣಿಸುವುದಿಲ್ಲ.
ಕೊಪ್ಪಳ, ಜುಲೈ 28: ರಸಗೊಬ್ಬರ ಯೂರಿಯಾ ಸಿಗದ ಕಾರಣ ಬೇಸತ್ತು ಹತಾಷೆಯಿಂದ ಎಪಿಎಂಸಿ ಎದುರು ಮಣ್ಣುತಿಂದ ಕುಣಿಕೇರಿ ಗ್ರಾಮದ ರೈತ ಚಂದ್ರಪ್ಪ ಬಡಿಗಿ ಅವರ ಮನೆಗೆ ಇಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮತ್ತು ಮಾಜಿ ಶಾಸಕ ಎಎಸ್ ಪಾಟೀಲ್ ನೇತೃತ್ವದ ನಿಯೋಗವೊಂದು ಭೇಟಿ ಮಾತುಕತೆ ನಡೆಸಿತಲ್ಲದೆ ಅವರಿಗೆ ಎರಡು ಚೀಲ ಯೂರಿಯಾವನ್ನು ನೀಡಿತು. ನಡಹಳ್ಳಿ ಮತ್ತು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಬಿಜೆಪಿ ಮುಖಂಡರು ಕುಣಿಕೇರಿ ಗ್ರಾಮದಲ್ಲಿ ಚಂದ್ರಪ್ಪನವರೊಂದಿಗೆ ಮಾತಾಡುವದನ್ನು ವಿಡಿಯೋದಲ್ಲಿ ನೋಡಬಹುದು. ಇದು ಟಿವಿ9 ವರದಿಯ ಇಂಪ್ಯಾಕ್ಟ್. ಬೆಳೆಗೆ ಗೊಬ್ರ ಕೊಟ್ಟಿಲ್ಲಂದ್ರ ಅದು ನಾಶ ಆಗ್ತದ, ನಾವು ಮಣ್ಣ್ ತಿಂದ್ ಸಾಯ್ಬೇಕೇನು? ಅಂತ ಹೇಳಿದ್ದ ಚಂದ್ರ ಹಿಡಿಮಣ್ಣು ಬಾಯಿಗೆ ಹಾಕಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕದಾದ್ಯಂತ ರಸಗೊಬ್ಬರದ ಬರ: ರೈತರು ಕಂಗಾಲು, ಎಲ್ಲಿಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಬೋರ್ಡ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

