Driving Licence: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್​ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಮನೆಯಿಂದ ಹೊರಹೋಗದೆ ಕೂತಲ್ಲಿಂದಲೇ ಆನ್‌ಲೈನ್‌ನಲ್ಲಿ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ.

Driving Licence: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Driving Licence
Follow us
Vinay Bhat
|

Updated on: Jul 04, 2023 | 12:02 PM

ಡ್ರೈವಿಂಗ್ ಲೈಸೆನ್ಸ್ (Driving Licence) ಭಾರತದಲ್ಲಿ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ವಾಹನವನ್ನು ಚಲಾಯಿಸ ಬೇಕೆಂದರೆ ಕಾನೂನುಬದ್ಧವಾಗಿ ಲೈಸೆನ್ಸ್ ಬೇಕೇಬೇಕು. ಡ್ರೈವಿಂಗ್ ಲೈಸೆನ್ಸ್ ಪಡೆಯಲು, ನೀವು ಸರ್ಕಾರದ (Government) ನಿಯಮದ ಮೂಲಕ ಹೋಗಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿದು ನಂತರ ಪರವಾನಗಿ ಸಿಗುತ್ತದೆ. ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ, ನೀವು ಮೊದಲು ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು. ಇದು ಸರ್ಕಾರದ ವಾಹನ (Vehicle) ಪರವಾನಿಗಿಯ ನಿಯಮ. ಇದಕ್ಕೂ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ.

ಆದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್​ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಮನೆಯಿಂದ ಹೊರಹೋಗದೆ ಕೂತಲ್ಲಿಂದಲೇ ಆನ್‌ಲೈನ್‌ನಲ್ಲಿ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ. ಆದರೆ ನೀವಿಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರೂ, ನಿಮ್ಮ ಲೈಸೆನ್ಸ್ ಪಡೆಯಲು ನೀವು ಹತ್ತಿರದ ಆರ್​ಟಿಒ ಆಫೀಸಿಗೆ ಹೋಗಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು. ನಿಮ್ಮ ವಯಸ್ಸು ಮತ್ತು ಇತರ ಅವಶ್ಯಕತೆಕ ದಾಖಲೆಗಳನ್ನು ಹೊಂದಿರಬೇಕು.

Fire-Boltt Grenade: ಸಖತ್ ಸ್ಟೈಲಿಶ್ ವಿನ್ಯಾಸದಲ್ಲಿ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್​ನಲ್ಲಿ ಅಧಿಕೃತ ಸರ್ಕಾರಿ ವೆಬ್‌ಸೈಟ್ https://parivahan.gov.in/parivahan/ ಗೆ ಹೋಗಿ.
  • ಆನ್​ಲೈನ್ ಸರ್ವಿಸ್ ಆಯ್ಕೆಗೆ ಹೋಗಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.
  • ನೀವು ವಾಸಿಸುವ ರಾಜ್ಯವನ್ನು ಆರಿಸಿ.
  • ಬಳಿಕ ‘Learner’s Licence Application’ ಆಯ್ಕೆಯನ್ನು ಆರಿಸಬೇಕು.
  • ಇಲ್ಲಿ ಪಟ್ಟಿ ಮಾಡಲಾದ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ಲರ್ನಿಂಗ್ ಲೈಸೆನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಕೊನೆಯದಾಗಿ ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಮತ್ತು ಪಾವತಿ ಮಾಡಿ.

ಈ ಅಂಶಗಳೂ ನಿಮ್ಮ ಗಮನದಲ್ಲಿರಲಿ

ಯಾರೇ ಆದರು ಡ್ರೈವಿಂಗ್ ಲೈಸೆನ್ಸ್ ಅವಧಿ ಮುಕ್ತಾಯದ ಒಂದು ವರ್ಷದ ಮುಂಚೆ ಅಥವಾ ಅವಧಿ ಮುಗಿದ ಒಂದು ವರ್ಷದ ಅವಧಿಯೊಳಗೆ ಅಪ್ಲೈ ಮಾಡಬೇಕು. ಒಂದು ವೇಳೆ ಲೈಸೆನ್ಸ್ ಅವಧಿ ಮುಗಿದ ಒಂದು ವರ್ಷದ ಮೇಲೆ ರಿನೀವಲ್ ಅರ್ಜಿ ಫೈಲ್ ಮಾಡಿದರೆ ಮತ್ತೊಮ್ಮೆ ಲರ್ನರ್ಸ್ ಡ್ರೈವಿಂಗ್ ಪರೀಕ್ಷೆ ತೆಗೆದುಕೊಳ್ಳಬೇಕು. ಆಗ ಹೊಸ ಅರ್ಜಿದಾರ ಎಂದು ಪರಿಗಣಿಸಲಾಗುತ್ತದೆ. ಅವಧಿ ಮುಗಿದ ಲೈಸೆನ್ಸ್ ಅಥವಾ ಡಿಎಲ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 5000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನೀವು ನವೀಕರಣಕ್ಕೆ ಅರ್ಜಿ ಹಾಕಿದ್ದಲ್ಲಿ ಲೈಸೆನ್ಸ್ ಬದಲಿಗೆ ಅರ್ಜಿ ಸಲ್ಲಿಸಿದ ದೃಢೀಕರಣ ಪತ್ರದೊಂದಿಗೆ ವಾಹನ ಚಲಾಯಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ