Jio Phone 5G: ಬಹುನಿರೀಕ್ಷಿತ ಜಿಯೋ ಫೋನ್ 5G ಯ ಮೊದಲ ಫೋಟೋ ಸೋರಿಕೆ: ಬೆಲೆ ಎಷ್ಟು ಗೊತ್ತೇ?

ನೂತನ ಜಿಯೋ ಫೋನ್ 5ಜಿ (Jio Phone 5G) ಸ್ಮಾರ್ಟ್​ಫೋನ್​ನ ಫೋಟೋ ಒಂದು ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಜಿಯೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕಾಣಬಹುದು. ಇದು ಕಡು ನೀಲಿ ಬಣ್ಣದಲ್ಲಿದೆ.

Jio Phone 5G: ಬಹುನಿರೀಕ್ಷಿತ ಜಿಯೋ ಫೋನ್ 5G ಯ ಮೊದಲ ಫೋಟೋ ಸೋರಿಕೆ: ಬೆಲೆ ಎಷ್ಟು ಗೊತ್ತೇ?
Jio Phone 5G
Follow us
Vinay Bhat
|

Updated on: Jun 23, 2023 | 12:44 PM

ರಿಲಯನ್ಸ್ (Reliance) ಒಡೆತನದ ಜಿಯೋ ಕಂಪನಿ ತನ್ನ ಚೊಚ್ಚಲ ಜಿಯೋ ಫೋನ್ 5G ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಇದರ ಬಗ್ಗೆ ಯಾವುದೇ ಫೀಚರ್ಸ್, ಫೋಟೋ ಏನನ್ನೂ ರಿವೀಲ್ ಮಾಡಿರಲಿಲ್ಲ. ಆದರೀಗ ನೂತನ ಜಿಯೋ ಫೋನ್ 5ಜಿ (Jio Phone 5G) ಸ್ಮಾರ್ಟ್​ಫೋನ್​ನ ಫೋಟೋ ಒಂದು ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಅರ್ಪಿತ್ ಪಟೇಲ್ ಎಂಬವರು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಜಿಯೋ ಫೋನ್ 5G ಯ ಫೋಟೋವನ್ನು ಹಂಚಿಕೊಂಡಿದ್ದು, ಕೆಲ ಫೀಚರ್ಸ್ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. ಇದರ ಬೆಲೆ ಕೂಡ ಅತಿ ಕಡಿಮೆ ಆಗಿದ್ದು, ಗ್ರಾಹಕರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.

ಜಿಯೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕಾಣಬಹುದು. ಇದು ಕಡು ನೀಲಿ ಬಣ್ಣದಲ್ಲಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್​ಗಾಗಿ ಕ್ಯಾಮೆರಾದ ಕೆಳಭಾಗದಲ್ಲಿ ಆಯ್ಕೆ ನೀಡಲಾಗಿದೆ. ಮುಂಭಾಗ ವಾಟರ್‌ಡ್ರಾಪ್ ನಾಚ್ ಹೊಂದಿರಬಹುದು ಎನ್ನಲಾಗಿದೆ. ಜಿಯೋ ಫೋನ್ 5G ಯ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 10,000 ಕ್ಕಿಂತ ಕಡಿಮೆ ದರ ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಡೈಮೆನ್ಸಿಟಿ 700 SoC ಅಥವಾ Unisoc 5G ಚಿಪ್‌ಸೆಟ್ ಅನ್ನು ಒಳಗೊಂಡಿರಬಹುದು ಎಂದು ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ
Image
Pink WhatsApp: ಎರಡು ವರ್ಷಗಳ ಬಳಿಕ ಮತ್ತೆ ಬಂದ ಪಿಂಕ್ ವಾಟ್ಸ್​ಆ್ಯಪ್: ತಪ್ಪಿಯೂ ಆ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
Image
Fridge Door: ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಈ ಸರಳ ವಿಧಾನದಿಂದ ನಿಮಿಷಗಳಲ್ಲಿ ಕ್ಲೀನ್ ಮಾಡಿ
Image
SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್
Image
Nothing Phone 2: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಹೊಸ ನಥಿಂಗ್ ಫೋನ್

Fire-Boltt Ultimate: ಕ್ರೇಜಿ ಫೀಚರ್ಸ್ ಜತೆಗೆ ₹1,999ಕ್ಕೆ ಲಭ್ಯ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

ಉಳಿದಂತೆ ಈ ಫೋನ್ 1,600 x 720 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇಯೊಂಧಿಗೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಇದು ಬಜೆಟ್ ಬೆಲೆಗೆ ಸಿಗುವುದರಿಂದ 60Hz ಪ್ರಮಾಣಿತ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿರಲಿದೆ. ಜಿಯೋ ಗೂಗಲ್ ಜೊತೆ ಪಾಲುದಾರಿಕೆ ಹೊಂದಿರುವುದರಿಂದ ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನಿರೀಕ್ಷಿಸಲಾಗಿದೆ. ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿರುವ ಸಾಧ್ಯತೆ ಇದ್ದು 18W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದಿರುತ್ತದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್, ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ಈ ಫೋನ್ ದೀಪಾವಳಿಗೆ ಅಥವಾ ಹೊಸ ವರ್ಷಕ್ಕೆ ಬಿಡುಗಡೆ ಆಗಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್