SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್

ಮೊದಲ ಇಂಟರ್ ಆ್ಯಕ್ಟೀವ್ ಎಆರ್ ಲೆನ್ಸ್​ಗೆ ‘India’s Top Nicknames’ ಎಂದು ಕರೆಯಲಾಗಿತ್ತು. ಇದರಲ್ಲಿ ಭಾರತದ ಐದು ಅತ್ಯಂತ ಜನಪ್ರಿಯ ಅಡ್ಡ ಹೆಸರುಗಳನ್ನು ಆಯ್ಕೆ ಮಾಡಲಾಯಿತು.

SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್
Snapchat
Follow us
Vinay Bhat
|

Updated on: Jun 23, 2023 | 6:55 AM

ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆಂದು ಇರುವ ವಿಶ್ಯುವಲ್ ಮೆಸೇಜಿಂಗ್ ಆ್ಯಪ್ ಆಗಿರುವ ಸ್ನ್ಯಾಪ್ ಚಾಟ್ (SnapChat) YouGov ನ ಸಹಭಾಗಿತ್ವದಲ್ಲಿ ಭಾರತೀಯ ಅಡ್ಡ ಹೆಸರಿನ ಸಂಸ್ಕೃತಿಯನ್ನು ಅನಾವರಣ ಮಾಡಿದೆ. ಸ್ನ್ಯಾಪ್ ಚಾಟ್ ಮತ್ತು YouGov ಸಹಭಾಗಿತ್ವದಲ್ಲಿ ಈ ಅಡ್ಡ ಹೆಸರಿನ ಸಂಶೋಧನೆ ನಡೆದಿದ್ದು, ದೇಶಾದ್ಯಂತ ಇರುವ ವಿಭಿನ್ನ ಬಗೆಯ ಅಡ್ಡ ಹೆಸರುಗಳನ್ನು ಬಹಿರಂಗಪಡಿಸಲಾಗಿದೆ. ದೇಶಾದ್ಯಂತ ಸೋನು, ಬಾಬು, ಮಚ್ಚ, ಶೋನಾ ಮತ್ತು ಪಿಂಕಿ ಎಂಬ ಅಡ್ಡ ಹೆಸರುಗಳು ಅತ್ಯಂತ ಜನಪ್ರಿಯವಾಗಿವೆ. ಸ್ನ್ಯಾಪ್ ಚಾಟ್​ನ ಲೆನ್ಸ್​ನಲ್ಲಿ ಆಗ್ಮೆಂಟೆಡ್ ರಿಯಾಲಿಟಿಯಲ್ಲಿ(AR) ಭಾರತದ ಟಾಪ್ ಅಡ್ಡ ಹೆಸರುಗಳು ಮತ್ತು ನನ್ನ ಅಡ್ಡ ಹೆಸರು (Nick Name) ಎಂಬ ಎರಡು ಬಗೆಯ ಅಡ್ಡ ಹೆಸರುಗಳ ಬಗ್ಗೆ ಅಧ್ಯಯನ ನಡೆಸಿದೆ.

ಮೊದಲ ಇಂಟರ್ ಆ್ಯಕ್ಟೀವ್ ಎಆರ್ ಲೆನ್ಸ್​ಗೆ ‘India’s Top Nicknames’ ಎಂದು ಕರೆಯಲಾಗಿತ್ತು. ಇದರಲ್ಲಿ ಭಾರತದ ಐದು ಅತ್ಯಂತ ಜನಪ್ರಿಯ ಅಡ್ಡ ಹೆಸರುಗಳನ್ನು ಆಯ್ಕೆ ಮಾಡಲಾಯಿತು. ಭಾರತೀಯ Gen Z ಮತ್ತು ಯುವ ಮಿಲೇನಿಯಲ್​ಗಳು ಆನ್ಲೈನ್​ನಲ್ಲಿ ತಮ್ಮ ಅಡ್ಡ ಹೆಸೆರುಗಳನ್ನು ಬಳಸುವುದನ್ನು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ವಿಶೇಷವೆಂದರೆ ಶೇ.96 ರಷ್ಟು ಜನರು ತಮ್ಮ ಜೀವನದ ಒಂದಲ್ಲಾ ಒಂದು ಹಂತದಲ್ಲಿ ತಮ್ಮ ಅಡ್ಡ ಹೆಸರನ್ನು ಬಳಸುತ್ತಿದ್ದಾರೆ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಅಡ್ಡಹೆಸರು- ಭಾರತೀಯ ಗುರುತಿನ ಸಂಕೇತ

ಭಾರತದಲ್ಲಿ, ಅಡ್ಡ ಹೆಸರುಗಳು ಕೇವಲ ಲೇಬಲ್​ಗಳಾಗಿಲ್ಲ. ಇವುಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಗುರುತುಗಳನ್ನು ಹೇಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾನ್ಯವಾಗಿ ಸಾಕುಪ್ರಾಣಿಗಳ ಹೆಸರುಗಳು, ಮನೆಯ ಹೆಸರು ಅಥವಾ ದಾಕ್ ನಾಮ್ ಎಂದು ಕರೆಯಲಾಗುತ್ತದೆ. ಈ ಅಡ್ಡ ಹೆಸರುಗಳು ನಮ್ಮ ಸಂಸ್ಕೃತಿಯಲ್ಲೇ ಸಮ್ಮಿಳಿತವಾಗಿಬಿಟ್ಟಿವೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಮಟ್ಟಿಗೆ ಹೇಳುವುದಾದರೆ, ಇಲ್ಲಿ ಹತ್ತು ಹಲವಾರು ಅಡ್ಡ ಹೆಸರುಗಳು ಕಂಡುಬರುತ್ತವೆ. ಅವುಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಅಡ್ಡ ಹೆಸರುಗಳೆಂದರೆ ಮಚ್ಚ, ಚಿನ್ನು, ಅನು, ಅಮ್ಮು ಮತ್ತು ಮಗಾ.

ಇದನ್ನೂ ಓದಿ
Image
iQoo Neo 7 Pro: ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಚಾಯ್ಸ್ ಸ್ಮಾರ್ಟ್​ಫೋನ್ ಐಕ್ಯೂ ನಿಯೋ
Image
ಭಾರತದಲ್ಲಿ ವಿವೋ Y36 ಸ್ಮಾರ್ಟ್​ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ ಬಲಿಷ್ಠ ಫೋನ್
Image
Redmi 12C: ಹೊಸ ವೇರಿಯೆಂಟ್​ನಲ್ಲಿ ರೆಡ್ಮಿ 12C ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 9,999 ರೂ.
Image
Infinix Note 30 5G: ಇಂದಿನಿಂದ 108MP ಕ್ಯಾಮೆರಾದ ಈ ಫೋನ್ ಖರೀದಿಗೆ ಲಭ್ಯ: ಬೆಲೆ ಕೇವಲ 13,999ರೂ.

Zero Electricity Bill: ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?: ಹಾಗಿದ್ರೆ ಹೀಗೆ ಮಾಡಿ

ಆದರೆ, ಈ ಜನಪ್ರಿಯತೆಯನ್ನು ಬದಿಗಿಟ್ಟು ನೋಡಿದರೆ, ಈ ಪ್ರೀತಿಯ ಅಡ್ಡ ಹೆಸರುಗಳು ಭಾರತೀಯರು ತಮ್ಮನ್ನು ತಾವು ಗ್ರಹಿಸಿಕೊಳ್ಳುವ ಮತ್ತು ಇತರೊಂದಿಗೆ ಸಂವಹನ ನಡೆಸುವ ವಿಧಾನದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಡ್ಡ ಹೆಸರುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಜನಪ್ರಿಯತೆಯ ಜತೆಯಲ್ಲಿ ಅಡ್ಡಹೆಸರುಗಳು ಹೆಮ್ಮೆಯ ವಿಚಾರವಾಗಿವೆ. ಅಡ್ಡ ಹೆಸರುಗಳ ಬಗ್ಗೆ ಬಹುತೇಕ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಕೇವಲ ಶೇ.15 ರಷ್ಟು ಜನರು ತಮ್ಮ ಅಡ್ಡ ಹೆಸರುಗಳನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ವಿದೇಶಿ ಸಂಪರ್ಕಗಳನ್ನು ಹೊಂದಲು ಅಡ್ಡ ಹೆಸರುಗಳ ನೆರವು

ಭಾರತೀಯರು ಬಳಸುವ ಅಡ್ಡ ಹೆಸರುಗಳು ಆಳವಾದ ಸಂಪರ್ಕಗಳು ಮತ್ತು ಮೌಲ್ಯಾಧಾರಿತವಾದ ಸಂಬಂಧಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ. ಅಡ್ಡ ಹೆಸರುಗಳನ್ನು ಬಳಸುವುದರಿಂದ ಮತ್ತೊಬ್ಬರಿಗೆ ತುಂಬಾ ಸನಿಹದಲ್ಲಿರುವಂತಹ ಅನುಭವವಾಗುತ್ತದೆ ಎಂದು ಶೇ. 67 ರಷ್ಟು ಭಾರತೀಯರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಅಡ್ಡ ಹೆಸರುಗಳ ಪರಿಕಲ್ಪನೆಯಲ್ಲಿ ಭಾವನಾತ್ಮಕ ಸಂಬಂಧ ಮತ್ತು ಸಾಂಸ್ಕೃತಿಕ ಬಾಂಧವ್ಯ ಅಡಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇದುವರೆಗೆ ಅಡ್ಡ ಹೆಸರನ್ನು ಹೊಂದಿರುವ ಜನರ ಪೈಕಿ ಶೇ. 60 ರಷ್ಟು ಜನರು ತಮ್ಮ ಬಾಲ್ಯ ಅಥವಾ ಶಾಲಾ ವ್ಯಾಸಂಗದ ಸಂದರ್ಭದಲ್ಲಿ ಅಡ್ಡ ಹೆಸರುಗಳನ್ನು ಹೊಂದಿದ್ದುದಾಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಶಾಲೆಗೆ ಸೇರುವ ಮುನ್ನ ಇದ್ದ ಅಡ್ಡ ಹೆಸರೇ ಚಾಲ್ತಿಯಲ್ಲಿದ್ದು, ಒಬ್ಬರನ್ನು ಗುರುತಿಸಲು ಕರೆಯುತ್ತಿದ್ದ ಅಡ್ಡ ಹೆಸರು ಶಾಶ್ವತ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್