AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zero Electricity Bill: ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?: ಹಾಗಿದ್ರೆ ಹೀಗೆ ಮಾಡಿ

Tech Tips: ವಿದ್ಯುತ್ ಬಿಲ್‌ ಕಡಿಮೆ ಬರಬೇಕು ಎಂದರೆ ಮೊದಲು ನಿಮ್ಮ ಮನೆಗೆ ಸೋಲಾರ್ ಎಲ್ಇಡಿ ದೀಪಗಳನ್ನು ಅಳವಡಿಸಬೇಕು. ಈ ಲೈಟ್ ಅನ್ನು ಅಳವಡಿಸಿದ ನಂತರ, ನಿಮ್ಮ ವಿದ್ಯುತ್ ಬಿಲ್‌ನ ಟೆನ್ಷನ್ ಅರ್ಧಕ್ಕೆ ಕಡಿಮೆಯಾಗುತ್ತದೆ.

Zero Electricity Bill: ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?: ಹಾಗಿದ್ರೆ ಹೀಗೆ ಮಾಡಿ
electric bill
Vinay Bhat
|

Updated on: Jun 22, 2023 | 1:05 PM

Share

ಮುಖ್ಯಾಂಶಗಳು

  • ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?
  • ಸೋಲಾರ್ ಎಲ್ಇಡಿ ಲೈಟ್ ಅಳವಡಿಸಿ
  • ಹೋಮ್‌ಹಾಪ್ ಸೋಲಾರ್ ಎಲ್‌ಇಡಿ ಲೈಟ್‌ಗಳು

ಬೇಸಿಗೆಯಲ್ಲಿ ಬರುವ ವಿದ್ಯುತ್ ಬಿಲ್‌ (Electricity Bill) ಯಾವುದೇ ವ್ಯಕ್ತಿಯನ್ನಾದರು ನಿದ್ರಾಹೀನಗೊಳಿಸುತ್ತದೆ. ಎಸಿ, ಕೂಲರ್, ಫ್ರೀಜ್ (Fridge) ಜೊತೆಗೆ ಮನೆಯಲ್ಲಿರುವ ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳಿಂದಾಗಿ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಬೇಸಿಗೆ ಸಮಯದಲ್ಲಂತು ಮನೆಯಲ್ಲಿ ಇಡೀ ದಿನ ಫ್ಯಾನ್ ಅಥವಾ ಎಸಿ (AC) ಆನ್ ಇರುವುದರಿಂದ ವಿದ್ಯುತ್ ಬಿಲ್ ಕೂಡ ಅಧಿಕ ಬರುತ್ತದೆ. ಇದು ಬಡ ಮತ್ತು ಮಧ್ಯಮ ಕುಟುಂಬಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಬಿಲ್ ಕಡಿಮೆ ಬರಬೇಕು ಎಂದಾದರೆ ಕೆಲ ಮಾರ್ಗಗಗಳಿದೆ.

ಸೋಲಾರ್ ಎಲ್ಇಡಿ ಲೈಟ್:

ವಿದ್ಯುತ್ ಬಿಲ್‌ ಕಡಿಮೆ ಬರಬೇಕು ಎಂದರೆ ಮೊದಲು ನಿಮ್ಮ ಮನೆಗೆ ಸೋಲಾರ್ ಎಲ್ಇಡಿ ದೀಪಗಳನ್ನು ಅಳವಡಿಸಬೇಕು. ಈ ಲೈಟ್ ಅನ್ನು ಅಳವಡಿಸಿದ ನಂತರ, ನಿಮ್ಮ ವಿದ್ಯುತ್ ಬಿಲ್‌ನ ಟೆನ್ಷನ್ ಅರ್ಧಕ್ಕೆ ಕಡಿಮೆಯಾಗುತ್ತದೆ. ನೀವು ಸೋಲಾರ್ ಎಲ್ಇಡಿ ಲೈಟ್ ಖರೀದಿಸಲು ಬಯಸಿದರೆ, ಆನ್‌ಲೈನ್ ಮತ್ತು ಆಫ್‌ಲೈನ್‌ ಆಯ್ಕೆ ಇದೆ.

ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?

ನೀವು ಆನ್‌ಲೈನ್‌ನಲ್ಲಿ ಖರೀದಿಸಿದರೆ, ಈ ಲೈಟ್​ಗಳ ಮೇಲೆ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಈ ಲೈಟ್​ಗಳ ಮೇಲೆ ಲಭ್ಯವಿರುವ ರಿಯಾಯಿತಿಗಳ ಬಗ್ಗೆ ನಾವು ಇಲ್ಲಿದೆ.

ಹೋಮ್‌ಹಾಪ್ ಸೋಲಾರ್ ಎಲ್‌ಇಡಿ ಲೈಟ್‌ಗಳು: ಈ ಲೈಟ್‌ನ ಮೂಲ ಬೆಲೆ 2,996 ರೂ. ಆಗಿದ್ದರೂ, ನೀವು ಇದನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ 1,699 ರೂ. ಗೆ ಖರೀದಿಸಬಹುದು. ಶೇ. 43 ರಷ್ಟು ರಿಯಾಯಿತಿಯೊಂದಿಗೆ ಪಡೆದುಕೊಳ್ಳಬಹುದು. ಇದರಿಂದ ಯಾವುದೇ ವಿದ್ಯುತ್ ಬಿಲ್ ಬರುವುದಿಲ್ಲ. ಒಮ್ಮೆ ನೀವು ಇದನ್ನು 6-8 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, ಇದು 2 ದಿನಗಳ ಬ್ಯಾಟರಿ ಪ್ಯಾಕ್ ಅನ್ನು ನೀಡುತ್ತದೆ.

ಎಲ್​ಇಡಿ ಸೋಲಾರ್ ಡೆಕ್ ಲೈಟ್ಸ್: ನೀವು ಈ ಲೈಟ್ ಅನ್ನು 1,299 ರೂ. ಗೆ 74 ಪ್ರತಿಶತ ರಿಯಾಯಿತಿಯೊಂದಿಗೆ ಪಡೆಯಬಹುದು. ಗ್ರಾಹಕರ ಅನುಕೂಲಕ್ಕಾಗಿ, ಇಎಂಐ ಆಯ್ಕೆಯೂ ಇದರಲ್ಲಿ ಲಭ್ಯವಿದೆ.

ಸೋಲಾರ್ ಲೈಟ್​ಗಳನ್ನು ಕಡಿಮೆ ವಿದ್ಯುತ್ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯದೊಂದಿಗೆ ಲೈಟ್​ಗಳು ತುರ್ತು ಸಂದರ್ಭಗಳಲ್ಲಿ ಕನಿಷ್ಠ 5 ರಿಂದ 7 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಎಸಿ ಇದ್ದಾಗ ವಿದ್ಯುತ್‌ ಬಿಲ್‌ ಕಡಿಮೆ ಬರಬೇಕೇ?:

ಮನೆಯಲ್ಲಿ ಎಸಿ ಇದ್ದಾಗ ವಿದ್ಯುತ್‌ ಬಿಲ್‌ ಹೆಚ್ಚಾಗಿ ಅಧಿಕ ಬರುತ್ತದೆ. ಇದಕ್ಕೆ ಅಗತ್ಯವಿದ್ದಾಗ ಮಾತ್ರ ಎಸಿಯನ್ನು ಬಳಸಿ. ಬಳಕೆಯಲ್ಲಿಲ್ಲದಿದ್ದಾಗ ಎಸಿ ಆಫ್ ಮಾಡಿದರೆ ಒಳ್ಳೆಯದು. ಗರಿಷ್ಠ ತಾಪಮಾನ 24 ಡಿಗ್ರಿಗಳಲ್ಲಿ AC ಬಳಸಿದರೆ ಉತ್ತಮ. ಅಂತೆಯೆ ಎಸಿ ಆನ್ ಇದ್ದಾಗ ತಂಪಾದ ಗಾಳಿ ಕೋಣೆಯಿಂದ ಹೊರಹೋಗದಂತೆ ನೋಡಿಕೊಳ್ಳಿ. ಜೊತೆಗೆ ಸ್ಲೀಪ್ ಟೈಮರ್ ಬಳಸಿ ವಿಭಿನ್ನ ಎಸಿ ಮೋಡ್‌ಗಳನ್ನು ಬಳಕೆ ಮಾಡಿದರೆ ಹೆಚ್ಚಿನ ವಿದ್ಯುತ್ ಕರ್ಚಾಗುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?