Fridge Door: ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಈ ಸರಳ ವಿಧಾನದಿಂದ ನಿಮಿಷಗಳಲ್ಲಿ ಕ್ಲೀನ್ ಮಾಡಿ

ಹೆಚ್ಚಿನ ಬಾರಿ ಫ್ರಿಡ್ಜ್​ನಲ್ಲಿರುವ ಈ ರಬ್ಬರ್​ಗೆ ಕೊಳಕು ಹಿಡಿಯುತ್ತಲೇ ಇರುತ್ತದೆ. ಇದನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಅನೇಕ ಮಂದಿ ಈ ಕೊಳಕು ರಬ್ಬರ್ ಅನ್ನು ಸ್ವಚ್ಛಗೊಳಿಸುವುದೇ ಇಲ್ಲ.

Fridge Door: ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಈ ಸರಳ ವಿಧಾನದಿಂದ ನಿಮಿಷಗಳಲ್ಲಿ ಕ್ಲೀನ್ ಮಾಡಿ
Fridge Door
Follow us
Vinay Bhat
|

Updated on:Jun 23, 2023 | 11:29 AM

ಸಾಮಾನ್ಯವಾಗಿ ಇಂದು ಎಲ್ಲರ ಮನೆಯಲ್ಲೂ ರೆಫ್ರಿಜರೇಟರ್ (Refrigerator) ಇದ್ದೇ ಇರುತ್ತದೆ. ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳ ಅನೇಕ ಮನೆಗಳಲ್ಲಿ ಇದು ಕಾಣಸಿಗುತ್ತಿದೆ. ಇದನ್ನು ಅತಿಯಾಗಿ ಬಳಸಿದಾಗ ಅಥವಾ ಇದರ ಬಾಗಿಲನ್ನು ಪದೆಪದೆ ತೆಗೆದು ಹಾಕುವುದರಿಂದ ಫ್ರಿಜ್ ತುಂಬಾ ಕೊಳಕಾಗುತ್ತದೆ. ಮುಖ್ಯವಾಗಿ ಫ್ರಿಡ್ಜ್ (Fridge) ಬಾಗಿಲಿನ ಮೇಲಿನ ರಬ್ಬರ್ ಅನ್ನು ಗಮನಿಸಿದರೆ ಇದು ಬಹುಬೇಗ ಕೊಳೆಯಾಗುತ್ತದೆ. Gasket (ಫ್ರಿಜ್ ಗ್ಯಾಸ್ಕೆಟ್ ಕ್ಲೀನಿಂಗ್) ಅಂದರೆ ರಬ್ಬರ್ ರೆಫ್ರಿಜರೇಟರ್‌ನ ಪ್ರಮುಖ ಭಾಗ. ಇದು ಹಾಳಾದರೆ ಇಡೀ ಫ್ರಿಡ್ಜ್ ಹಾಳಾಗುವ ಸಾಧ್ಯತೆ ಇದೆ. ಇದನ್ನು ನಿಮ್ಮ ರೆಫ್ರಿಜಿರೇಟರ್ ಮತ್ತು ಫ್ರೀಜರ್‌ನ ಹೊರ ಪರಿಧಿಯ ಸುತ್ತಲೂ ಹಾಕಿರುತ್ತಾರೆ.

ಹೆಚ್ಚಿನ ಬಾರಿ ಫ್ರಿಡ್ಜ್​ನಲ್ಲಿರುವ ಈ ರಬ್ಬರ್​ಗೆ ಕೊಳಕು ಹಿಡಿಯುತ್ತಲೇ ಇರುತ್ತದೆ. ಇದನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಅನೇಕ ಮಂದಿ ಈ ಕೊಳಕು ರಬ್ಬರ್ ಅನ್ನು ಸ್ವಚ್ಛಗೊಳಿಸುವುದೇ ಇಲ್ಲ. ಇದರಿಂದಾಗಿ ಕೆಟ್ಟ ವಾಸೆ ಕೂಡ ಬರುತ್ತದೆ ಜೊತೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಫ್ರಿಡ್ಜ್ ಡೋರ್​ನ ರಬ್ಬರ್​ನಲ್ಲಿ ಕೊಳೆ ಇದ್ದರೆ ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

Redmi 12C: ಹೊಸ ವೇರಿಯೆಂಟ್​ನಲ್ಲಿ ರೆಡ್ಮಿ 12C ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 9,999 ರೂ.

ಇದನ್ನೂ ಓದಿ
Image
SnapChat: ಬೆಂಗಳೂರಿನಲ್ಲಿ ಹೆಚ್ಚು ಬಳಕೆಯಾಗುವ ಅಡ್ಡ ಹೆಸರುಗಳನ್ನು ಬಿಡುಗಡೆ ಮಾಡಿದ ಸ್ನ್ಯಾಪ್ ಚಾಟ್
Image
Nothing Phone 2: ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಹೊಸ ನಥಿಂಗ್ ಫೋನ್
Image
Fire-Boltt Ultimate: ಕ್ರೇಜಿ ಫೀಚರ್ಸ್ ಜತೆಗೆ ₹1,999ಕ್ಕೆ ಲಭ್ಯ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್
Image
iQoo Neo 7 Pro: ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಚಾಯ್ಸ್ ಸ್ಮಾರ್ಟ್​ಫೋನ್ ಐಕ್ಯೂ ನಿಯೋ

ವಿನೆಗರ್ ಮತ್ತು ನೀರು: ವಿನೆಗರ್ ಮತ್ತು ನೀರನ್ನು ಬಳಸಿ ನೀವು ಸುಲಭವಾಗಿ ಫ್ರಿಜ್ ಬಾಗಿಲಿನ ರಬ್ಬರ್ ಅನ್ನು ಸ್ವಚ್ಛಗೊಳಿಸಬಹುದು. ಹೆಚ್ಚಿನವರು ಬ್ಲೀಚ್ ಮತ್ತು ಅಮೋನಿಯದಂತಹ ವಸ್ತುಗಳನ್ನು ಉಪಯೋಗಿಸುತ್ತಾರೆ. ಆದರೆ, ಹೀಗೆ ಮಾಡಬೇಡಿ, ಅವುಗಳನ್ನು ಸರಿಯಾಗಿ ಬಳಸದಿದ್ದರೆ ಇವು ಗ್ಯಾಸ್ಕೆಟ್ ವಸ್ತುಗಳನ್ನು ಗಟ್ಟಿಯಾಗಿಸುತ್ತದೆ. ಆದ್ದರಿಂದ ಬ್ಲೀಚ್ ಬದಲಿಗೆ ವಿನೆಗರ್ ದ್ರಾವಣವನ್ನು ಬಳಸಿ. ಇದು ರಬ್ಬರ್‌ಗೆ ಹಾನಿಯಾಗದಂತೆ ಸ್ವಚ್ಚ ಮಾಡುತ್ತದೆ ಅಲ್ಲದೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಗ್ಯಾಸ್ಕೆಟ್​ಗಳನ್ನು ಸ್ವಚ್ಛಗೊಳಿಸಲು ನೀವು ಒಂದು ಬೌಲ್ ನೀರನ್ನು ತೆಗೆದುಕೊಂಡು ಅದರಲ್ಲಿ ಐದರಿಂದ ಆರು ಹನಿ ವಿನೆಗರ್ ಅನ್ನು ಸೇರಿಸಿ. ಬಳಿಕ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನಂತರ ಸ್ಪ್ರೇ ಮಾಡಿ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಅದು ತಕ್ಷಣವೇ ಕ್ಲೀನ್ ಆಗುತ್ತದೆ.

ಹಿಂದಿನ ವಿಧಾನ ಸಾಧ್ಯವಾಗಿಲ್ಲ ಎಂದಾದರೆ ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾವನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ, ಅದನ್ನು ಬಟ್ಟೆಯ ಸಹಾಯದಿಂದ ಫ್ರಿಜ್​ನಲ್ಲಿರುವ ರಬ್ಬರ್ ಮೇಲೆ ಉಜ್ಜಿದರೂ ಸ್ವಚ್ಚವಾಗುತ್ತದೆ. ಅಥವಾ ನೀವು ಟೂತ್ ಬ್ರಷ್ ಮೇಲೆ ಪೇಸ್ಟ್ ಅನ್ನು ಅನ್ವಯಿಸಿ ರಬ್ಬರ್​ಗಳ ಮೇಲೆ ಉಜ್ಜಿಯೂ ಸ್ವಚ್ಛಗೊಳಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Fri, 23 June 23

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ