Redmi 12C: ಹೊಸ ವೇರಿಯೆಂಟ್​ನಲ್ಲಿ ರೆಡ್ಮಿ 12C ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 9,999 ರೂ.

ಆರಂಭದಲ್ಲಿ ರೆಡ್ಮಿ 12C (Redmi 12C) ಕೇವಲ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಅದು 4GB RAM + 64GB ಮತ್ತು 6GB RAM + 128GB ಆಗಿದೆ. ಇದೀಗ ಈಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ.

Redmi 12C: ಹೊಸ ವೇರಿಯೆಂಟ್​ನಲ್ಲಿ ರೆಡ್ಮಿ 12C ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಕೇವಲ 9,999 ರೂ.
Redmi 12C
Follow us
Vinay Bhat
|

Updated on: Jun 22, 2023 | 2:45 PM

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ಈ ವರ್ಷ ಮಾರ್ಚ್​ನಲ್ಲಿ ಭಾರತದಲ್ಲಿ ತನ್ನ ರೆಡ್ಮಿ ಅಡಿಯಲ್ಲಿ ರೆಡ್ಮಿ 12ಸಿ ಎಂಬ ಸ್ಮಾರ್ಟ್​ಫೋನನ್ನು ಅನಾವರಣ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು (Phone) ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಈ ಫೋನ್ 5,000mAh ಬ್ಯಾಟರಿ, ಮೀಡಿಯಾಟೆಕ್ ಪ್ರೊಸೆಸರ್ ಸೇರಿದಂತೆ ಆಕರ್ಷಕ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಆರಂಭದಲ್ಲಿ ರೆಡ್ಮಿ 12C (Redmi 12C) ಕೇವಲ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿತ್ತು. ಅದು 4GB RAM + 64GB ಮತ್ತು 6GB RAM + 128GB ಆಗಿದೆ. ಇದೀಗ ಈಫೋನಿನ ಮೂರನೇ ವೇರಿಯೆಂಟ್ ರಿಲೀಸ್ ಆಗಿದೆ.

ರೆಡ್ಮಿ 12C ಸ್ಮಾರ್ಟ್​ಫೋನ್ ಭಾರತದಲ್ಲಿ ಈಗ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM + 64GB ವೇರಿಯಂಟ್‌ಗೆ 8,999 ರೂ. ಇದೆ. ಅಂತೆಯೆ 6GB RAM + 128GB ಸ್ಟೋರೇಜ್ ಮಾದರಿಗೆ 10,999 ರೂ. ನಿಗದಿ ಮಾಡಲಾಗಿದೆ. ಇದೀಗ ಹೊಸ 4GB RAM + 128GB ಆಯ್ಕೆ ರಿಲೀಸ್ ಆಗಿದ್ದು ಇದಕ್ಕೆ 9,999 ರೂ. ಇದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್, ಅಮೆಜಾನ್ ಸೇರಿದಂತೆ ಎಮ್​ಐ ಅಧಿಕೃತ ವೆಬ್​ಸೈಟ್​ನಲ್ಲಿ ಖರೀದಿಗೆ ಸಿಗುತ್ತಿದೆ. ಮ್ಯಾಟ್ ಬ್ಲಾಕ್, ಮಿಂಟ್ ಗ್ರೀನ್, ರಾಯಲ್ ಬ್ಲೂ ಮತ್ತು ಲ್ಯಾವೆಂಡರ್ ಪರ್ಪಲ್ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

Pebble Cosmos Vogue: ಸ್ಟೈಲಿಶ್ ಆಗಿ ಬರುತ್ತಿದೆ ಹೊಸ ಪೆಬಲ್ ಸ್ಮಾರ್ಟ್​ವಾಚ್

ಇದನ್ನೂ ಓದಿ
Image
Infinix Note 30 5G: ಇಂದಿನಿಂದ 108MP ಕ್ಯಾಮೆರಾದ ಈ ಫೋನ್ ಖರೀದಿಗೆ ಲಭ್ಯ: ಬೆಲೆ ಕೇವಲ 13,999ರೂ.
Image
Zero Electricity Bill: ಮನೆಯ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?: ಹಾಗಿದ್ರೆ ಹೀಗೆ ಮಾಡಿ
Image
WhatsApp Tricks: ವಾಟ್ಸ್​ಆ್ಯಪ್​ನಿಂದ ಫುಲ್ ಆಗುವ ಫೋನ್ ಸ್ಟೋರೇಜ್ ಅನ್ನು ಸರಿಪಡಿಸುವುದು ಹೇಗೆ?: ಈ ಟ್ರಿಕ್ ಫಾಲೋ ಮಾಡಿ
Image
Samsung Galaxy A73: 10 ಸಾವಿರ ರೂ. ಡಿಸ್ಕೌಂಟ್​ನಲ್ಲಿ ಲಭ್ಯ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

ಫೀಚರ್ಸ್ ಏನಿದೆ?:

ರೆಡ್ಮಿ 12C ಸ್ಮಾರ್ಟ್‌ಫೋನ್​ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 1,600*720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.71 ಇಂಚಿನ ಹೆಚ್‌ಡಿ ಪ್ಲಸ್‌ ಎಲ್​ಸಿಡಿ ಡಿಸ್‌ಪ್ಲೇ ಹೊಂದಿದೆ. 60Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಮೀಡಿಯಾಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 1TB ವರೆಗೆ ಮೆಮೋರಿ ಸಾಮರ್ಥ್ಯವನ್ನು ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಡ್ಯುಯೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್​ ಸೆನ್ಸಾರ್​ನಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್​ನಲ್ಲಿದೆ. ಇವುಗಳ ಜೊತಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಈ ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 10W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಸಪೋರ್ಟ್ ಮಾಡುವುದಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್, ಜಿಪಿಎಸ್ ಅನ್ನು ಬೆಂಬಲಿಸುತ್ತದೆ. ರಿಯರ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ನೀವು ಬಜೆಟ್ ಬೆಲೆಗೆ ಒಂದೊಳ್ಳೆ ಫೋನನ್ನು ಖರೀದಿಸುವ ಪ್ಲಾನ್​ನಲ್ಲಿದ್ದರೆ ಇದೊಂದು ಅತ್ಯುತ್ತಮ ಆಯ್ಕೆ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ