Instagram Reels: ಇನ್‌ಸ್ಟಾಗ್ರಾಮ್​​ನಲ್ಲಿ ಸಾರ್ವಜನಿಕರು ಹಂಚಿಕೊಂಡ ರೀಲ್ಸ್​​ಗಳನ್ನು ಡೌನ್‌ಲೋಡ್ ಮಾಡಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಇನ್‌ಸ್ಟಾಗ್ರಾಮ್ ಬಳಕೆದಾರರು ಈಗ ಇತರರು ಪೋಸ್ಟ್ ಮಾಡಿದ ರೀಲ್ಸ್​​ಗಳನ್ನು ಡೌನ್‌ಲೋಡ್ ಮಾಡಬಹುದು ಎಂದು ಮೆಟಾ ಪ್ಲಾಟ್‌ಫಾರ್ಮ್‌ಗಳ ಒಡೆತನದ ಫೋಟೋ ಮತ್ತು ವೀಡಿಯೊ ಹಂಚಿಕೆ ಸಾಮಾಜಿಕ ನೆಟ್‌ವರ್ಕ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ ತಿಳಿಸಿದ್ದಾರೆ.

Instagram Reels: ಇನ್‌ಸ್ಟಾಗ್ರಾಮ್​​ನಲ್ಲಿ ಸಾರ್ವಜನಿಕರು ಹಂಚಿಕೊಂಡ ರೀಲ್ಸ್​​ಗಳನ್ನು ಡೌನ್‌ಲೋಡ್ ಮಾಡಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 21, 2023 | 3:15 PM

ಇನ್‌ಸ್ಟಾಗ್ರಾಮ್ (Instagram) ದಿನಕ್ಕೊಂದು ಅದ್ಭುತ ಅಪ್ಡೇಡ್​​​ನೀಡುತ್ತಿದೆ. ಹೊಸ ಹೊಸ ಫೀಚರ್​​​ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಈಗ ಇತರರು ಪೋಸ್ಟ್ ಮಾಡಿದ ರೀಲ್ಸ್​​ಗಳನ್ನು ಡೌನ್‌ಲೋಡ್ ಮಾಡಬಹುದು ಎಂದು ಮೆಟಾ ಪ್ಲಾಟ್‌ಫಾರ್ಮ್‌ಗಳ ಒಡೆತನದ ಫೋಟೋ ಮತ್ತು ವೀಡಿಯೊ ಹಂಚಿಕೆ ಸಾಮಾಜಿಕ ನೆಟ್‌ವರ್ಕ್‌ನ ಮುಖ್ಯಸ್ಥ ಆಡಮ್ ಮೊಸ್ಸೆರಿ ತಿಳಿಸಿದ್ದಾರೆ.

ಹೊಸ ಫೀಚರ್​​ಗೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

1.) ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವವರು ಮಾತ್ರ ತಮ್ಮ ಕ್ಯಾಮೆರಾ ರೋಲ್‌ಗೆ ಸಾರ್ವಜನಿಕ ರೀಲ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ ಎಂದು ಮೊಸ್ಸೆರಿ ಹೇಳಿದರು, ಇದನ್ನು ‘ಶೇರ್’ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಮತ್ತು ನಂತರ ‘ಡೌನ್‌ಲೋಡ್’ ಬಟನ್ ಆಯ್ಕೆ ಮಾಡುವ ಮೂಲಕ ಡೌನ್‌ಲೋಡ್ ಮಾಡಬಹುದು.

2.) ಸಾರ್ವಜನಿಕ Instagram ಖಾತೆಗಳಿಂದ ಪೋಸ್ಟ್ ಮಾಡಲಾದ ರೀಲ್‌ಗಳು ಮಾತ್ರ ಡೌನ್‌ಲೋಡ್ ಮಾಡಲು ಸಾಧ್ಯ ಎಂದು ಹೇಳಿದೆ.

3.) ಅಲ್ಲದೆ, ಬಳಕೆದಾರರು ರೀಲ್‌ಗಳನ್ನು ಡೌನ್‌ಲೋಡ್ ಮಾಡಲು ಸ್ವಿಚ್ ಆಫ್ ಬಟ್​​​ಗಳನ್ನು ಬಳಸಲು ಕೂಡ ಅವಕಾಶ ನೀಡಲಾಗಿದೆ.

4.) ಡೌನ್‌ಲೋಡ್ ಮಾಡಿದ ರೀಲ್‌ಗಳು ವಾಟರ್‌ಮಾರ್ಕ್‌ಗಳನ್ನು ಹೊಂದಿದ್ದರೆ ಅದನ್ನು ಡೌನ್​​ಲೋಡ್​​ ಮಾಡುವುದು ಹೇಗೆ? ಆದರೆ ಈ ಬಗ್ಗೆ ಮೊಸ್ಸೆರಿ ತಿಳಿಸಿಲ್ಲ. ಅವರು ಪೋಸ್ಟ್ ಮಾಡಿದ ಫೋಟೋ ವೀಡಿಯೊದಲ್ಲಿ ‘ಇನ್‌ಸ್ಟಾಗ್ರಾಮ್’ ಲೋಗೋ ಮತ್ತು ಹ್ಯಾಂಡಲ್ ಹೆಸರು ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Instagram Down: ಇನ್ಸ್ಟಾಗ್ರಾಮ್ ಡೌನ್​​, ನಿಮ್ಮ ಹೊಸ ನವೀಕರಣ ಇದಕ್ಕೆ ಕಾರಣ

Instagram ರೀಲ್‌ಗಳು ಯಾವುವು?

ಆಗಸ್ಟ್ 5, 2020ರಂದು ರೀಲ್ಸ್​​​ ಮಾಡುವುದನ್ನು ಪರಿಚಯಿಸಲಾಗಿತ್ತು, ಇವುಗಳು ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್‌ನಲ್ಲಿ ಚಿಕ್ಕ ಮನರಂಜನೆಯ ವೀಡಿಯೊಗಳನ್ನು ರಚಿಸಲು ಮತ್ತು ಹುಡುಕುವ ಒಂದು ಮಾರ್ಗವಾಗಿದೆ.

ಇದು ಜನರು ಮಾಡಿದ ವೀಡಿಯೊಗಳನ್ನು ಹಾಗೂ ಆಡಿಯೋಗಳು ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಇದರಲ್ಲೂ ಹೊಸ ಹೊಸ ಫೀಚರ್​​ಗಳನ್ನು ಹೊಂದಿರುತ್ತದೆ. ಇದರಲ್ಲಿ 15-ಸೆಕೆಂಡ್ ಮಲ್ಟಿ-ಕ್ಲಿಪ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು, ಇದರಿಂದ ಹೆಚ್ಚು ಹೆಚ್ಚು ಫಾಲೋವರ್ಸ್​​ಗಳನ್ನು ಪಡೆಯಬಹುದು. ಜತೆಗೆ ಹೆಚ್ಚಿನ ಜನರಿಗೆ ನೀವು ಈ ಮೂಲಕ ತಲುಪಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Wed, 21 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್