JIO Phone 5G: ಭಾರತದಲ್ಲಿ ಚೊಚ್ಚಲ 5G ಫೋನ್ ಬಿಡುಗಡೆ ಮಾಡಲು ಜಿಯೋ ತಯಾರಿ: ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ರಿಲಯನ್ಸ್ ಒಡೆತನದ ಜಿಯೋ ಕಂಪನಿ ಕೂಡ ತನ್ನ ಚೊಚ್ಚಲ 5ಜಿ ಫೋನ್ ಅನಾವರಣ ಮಾಡಲು ಯೋಜನೆ ಹಾಕಿಕೊಂಡಿದೆ. ಜಿಯೋ ಸದ್ಯದಲ್ಲೇ ಭಾರತದಲ್ಲಿ ಹೊಸ ಜಿಯೋ ಫೋನ್ 5ಜಿ ಬಿಡುಗಡೆ ಆಡಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ 5ಜಿ (5G) ಸೇವೆ ಆರಂಭವಾಗಿದ್ದೇ ತಡ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳು 5ಜಿ ಫೋನ್ ಬಿಡುಗಡೆ ಮಾಡುವುದನ್ನು ಹೆಚ್ಚಿಸಿದೆ. ಅದಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಇವುಗಳ ನಡುವೆ ಇದೀಗ ರಿಲಯನ್ಸ್ (Reliance) ಒಡೆತನದ ಜಿಯೋ ಕಂಪನಿ ಕೂಡ ತನ್ನ ಚೊಚ್ಚಲ 5ಜಿ ಫೋನ್ ಅನಾವರಣ ಮಾಡಲು ಯೋಜನೆ ಹಾಕಿಕೊಂಡಿದೆ. ಜಿಯೋ ಸದ್ಯದಲ್ಲೇ ಭಾರತದಲ್ಲಿ ಹೊಸ ಜಿಯೋ ಫೋನ್ 5ಜಿ (JIO Phone 5G) ಬಿಡುಗಡೆ ಆಡಲಿದೆ ಎಂದು ವರದಿಯಾಗಿದೆ. ಅಚ್ಚರಿ ಎಂದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ 5G ಫೋನ್ಗಳಿಗಿಂತ ಅತ್ಯಂತ ಕಡಿಮೆ ಬೆಲೆಗೆ ಇದು ಸಿಗಲಿದೆಯಂತೆ. ಇದರ ನಿಖರ ಬೆಲೆ ಬಹಿರಂಗಗೊಂಡಿಲ್ಲವಾದರೂ ಜಿಯೋ ಫೋನ್ 5G ಫೀಚರ್ಸ್ ಸೋರಿಕೆ ಆಗಿದೆ.
- ಬೆಂಚ್‌ಮಾರ್ಕಿಂಗ್ ವೆಬ್‌ಸೈಟ್‌ನಲ್ಲಿ ಜಿಯೋ ಫೋನ್ 5G ಫೀಚರ್ಸ್ ಸೋರಿಕೆಯಾಗಿದೆ. ಇದರ ಪ್ರಕಾರ, ಈ ಫೋನ್ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ IPS LCD ಡಿಸ್‌ಪ್ಲೇ ಹೊಂದಿರಲಿದೆ.
- ಈ ಡಿಸ್‌ಪ್ಲೇ 60Hz ಪ್ರಮಾಣಿತ ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480+ SoC ಪ್ರೊಸೆಸರ್ ವೇಗವನ್ನು ಪಡೆಡುಕೊಂಡಿದೆ.
- ಇದಕ್ಕೆ ಪೂರಕವಾಗಿ ಅಡ್ರಿನೋ 619 GPU ಸಪೋರ್ಟ್ ಹೊಂದಿರಲಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಜಿಯೋದ PragatiOS ನಲ್ಲಿ ರನ್ ಆಗುವ ನಿರೀಕ್ಷೆಯಿದೆ.
- ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡದೆ.
- ಎರಡನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
- ಜಿಯೋ ಫೋನ್ 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್ ಅನ್ನು ಬೆಂಬಲಿಸಲಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ.
- ಭಾರತದಲ್ಲಿ ಜಿಯೋ ಫೋನ್ 5G ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆ ಆಗಲದೆ ಎಂಬುದನ್ನು ಹೇಳಲಾಗಿಲ್ಲ. ಆದರೆ, ಮೂಲಗಳ ಪ್ರಕಾರ ಇದು ಮುಂದಿನ ವರ್ಷ ದೇಶಕ್ಕೆ ಲಗ್ಗೆ ಇಡುವ ಸಾಧ್ಯತೆಯಿದೆ.
ಇದನ್ನೂ ಓದಿ
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ