Tecno POVA 4: ಕಡಿಮೆ ಬೆಲೆ, 6000mAh ಬಲಿಷ್ಠ ಬ್ಯಾಟರಿ: ಭಾರತದಲ್ಲಿ ಟೆಕ್ನೋದಿಂದ ಬಂಪರ್ ಸ್ಮಾರ್ಟ್‌ಫೋನ್ ಬಿಡುಗಡೆ
ಟೆಕ್ನೋ ಕಂಪನಿ ತನ್ನ ಪಾಪ್ ಸರಣಿಯಡಿಯಲ್ಲಿ ಹೊಸ ಟೆಕ್ನೋ ಪಾಪ್ 4 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೆ ಮಾಡಿದೆ. ಇದರಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದರ ನಡುವೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೂತನ ಸ್ಮಾರ್ಟ್‌ಫೋನ್ ಒಂದನ್ನು ಅನಾವರಣ ಮಾಡಿದೆ. ಟೆಕ್ನೋ ಕಂಪನಿ ತನ್ನ ಪಾಪ್ ಸರಣಿಯಡಿಯಲ್ಲಿ ಹೊಸ ಟೆಕ್ನೋ ಪಾಪ್ 4 (Tecno POVA 4) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೆ ಮಾಡಿದೆ. ಇದರಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಈ ಫೋನಿನ ಬೆಲೆ ಕೂಡ ಕಡಿಮೆ ಇದೆ. ಹಾಗಾದರೆ, ಟೆಕ್ನೋ ಪಾಪ್ 4 ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
- ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯ ಬೆಲೆ ಕೇವಲ 11,999ರೂ. ಆಗಿದೆ.
- ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಜಿಯೋ ಮಾರ್ಟ್ ಮೂಲಕ ಇದೇ ಡಿಸೆಂಬರ್ 13 ರಂದು ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ ಮಾರಾಟ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಡಿಸ್ಕೌಂಟ್ ಆಫರ್ ಇರುವ ಸಾಧ್ಯತೆ ಕೂಡ ಇದೆ.
- ಈ ಸ್ಮಾರ್ಟ್‌ಫೋನ್ 720 x 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.66 ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ನಿಂದ ಕೂಡಿದ್ದು, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿದೆ.
- ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ 5nm ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಆಧಾರಿತ HiOSನಲ್ಲಿ ಕಾರ್ಯ ನಿರ್ವಹಿಸಲಿದೆ.
- ಈ ಫೋನ್ನಲ್ಲಿ ಗೇಮಿಂಗ್ ಕಾರ್ಯಕ್ಷಮತೆಗಾಗಿ ಪ್ಯಾಂಥರ್ ಗೇಮ್ ಇಂಜಿನ್ 2.0 ಮತ್ತು ಹೈಪರ್ ಇಂಜಿನ್ 2.0 ಲೈಟ್ ಅನ್ನು ಬೆಂಬಲಿಸಲಿದೆ.
- ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
- ಟೆಕ್ನೋ ಪೊವಾ 4 ಸ್ಮಾರ್ಟ್‌ಫೋನ್ ಪ್ರಮುಖ ಹೈಲೇಟ್ ಇದರ ಬ್ಯಾಟರಿ. ಬರೋಬ್ಬರಿ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 18W ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ.
- ಕಂಪನಿ ಹೇಳುವ ಪ್ರಕಾರ ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಸುಮಾರು 10 ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ.
- ಈ ಫೋನ್ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, NFC, USB ಟೈಪ್-C, 3.5mm ಹೆಡ್‌ಫೋನ್ ಜ್ಯಾಕ್ ಮತ್ತು DTS ಸೌಂಡ್ ಆಯ್ಕೆ ನೀಡಲಾಗಿದೆ.
ಇದನ್ನೂ ಓದಿ
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Thu, 8 December 22