Year in Search 2022: ಈ ವರ್ಷ ಗೂಗಲ್‌ನಲ್ಲಿ ಜನರು ಹುಡುಕಿದ ಟಾಪ್ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ
2022 ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಈ ವರ್ಷದಲ್ಲಿ ಜನರು ಗೂಗಲ್ ನಲ್ಲಿ ಹೆಚ್ಚು ಹುಡುಕಿದ ಅಥವಾ ಸರ್ಚ್ ಮಾಡಿದ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2022ರಲ್ಲಿ ಗೂಗಲ್‌ನಲ್ಲಿ ಜನರು ಯಾವ ವ್ಯಕ್ತಿಯನ್ನು ಹುಡುಕಿದ್ದಾರೆ ಎಂಬ ವರದಿಯು ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಜನರು ಸಿನಿಮಾ ವ್ಯಕ್ತಿಗಳನ್ನು ಅಥವಾ ಆಸಕ್ತಿದಾಯ ವಿಚಾರಗಳನ್ನು, ರಾಜಕೀಯ ಬೆಳವಣಿಗಳನ್ನು ಹುಡುಕುತ್ತಾರೆ. ಇದೀಗ ಈ ವಿಭಾಗದಲ್ಲಿ ಯಾರನ್ನೂ ಹೆಚ್ಚು ಹುಡುಕಿದ್ದಾರೆ ಎಂಬ ವರದಿಯನ್ನು ನೀಡಿದೆ. 2022 ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಈ ವರ್ಷದಲ್ಲಿ ಜನರು ಗೂಗಲ್ ನಲ್ಲಿ ಹೆಚ್ಚು ಹುಡುಕಿದ ಅಥವಾ ಸರ್ಚ್ ಮಾಡಿದ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೂಗಲ್ ಸರ್ಚ್ ಇಂಜಿನ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗೂಗಲ್‌ನಲ್ಲಿ ಈ ವರ್ಷ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟವರು ನಟಿ ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿನ್ನು, ಇವರು ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ರಾಜಕೀಯ ವ್ಯಕ್ತಿಗಳು ಕೂಡ ಟಾಪ್ 10 ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಅದರಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ, ಅಧ್ಯಕ್ಷ ದ್ರೌಪದಿ ಮುರ್ಮು ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮೂರನೇ ಸ್ಥಾನದಲ್ಲಿದ್ದಾರೆ. ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಕ್ರಮವಾಗಿ 4 ಮತ್ತು 5 ನೇ ಸ್ಥಾನದಲ್ಲಿದ್ದಾರೆ.
ಇದನ್ನು ಓದಿ: 2022ರಲ್ಲಿ ಜಗತ್ತಿನಾದ್ಯಂತ ಗೂಗಲಪ್ಪನ ಹೊಟ್ಟೆಯಲ್ಲಿ ಅತೀ ಹೆಚ್ಚು ಹುಡುಕಿದ್ದು ಪನೀರ್ನ ಈ ರೆಸಿಪಿಯನ್ನು!
ಕ್ರೀಡಾ ಜಗತ್ತಿಗೆ ಸಂಬಂಧಿಸಿದಂತೆ ಆಶ್ಚರ್ಯಕರವಾಗಿ ಟಾಪ್ 10 ಪಟ್ಟಿಯಲ್ಲಿರುವುದು ಏಕೈಕ ಕ್ರೀಡಾಪಟುವೆಂದರೆ ನಿವೃತ್ತ ಕ್ರಿಕೆಟಿಗ ಪ್ರವೀಣ್ ತಾಂಬೆ. ತಾಂಬೆಯವರ ಜೀವನಚರಿತ್ರೆಯು ಏಪ್ರಿಲ್‌ನಲ್ಲಿ ಡಿಸ್ನಿ ಪ್ಲಾಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಯಿತು. ಇದು ಸಾಮಾಜಿಕ ಜಾಣತಾಣಗಳಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದ್ದರಿಂದ ಇವರು ಗೂಗಲ್ ನ ಸರ್ಚ್ ಇಂಜಿನ್ ಪ್ರಕಟಿಸಿದ ಟಾಪ್ 10 ರ ಪಟ್ಟಿಯಲ್ಲಿ ಬರಲು ಕಾರಣ ಎಂದು ಹೇಳಲಾಗುತ್ತಿದೆ. ಹಾಲಿವುಡ್ ತಾರೆ ಅಂಬರ್ ಹರ್ಡ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಅಂಬರ್ ಹರ್ಡ್ ಪತಿ ಹಾಗೂ ನಟ ಜಾನಿ ಡೆಪ್ ವಿರುದ್ಧ ಮಾನನಷ್ಟ ವಿಚಾರಣೆಯಿಂದಾಗಿ ಇವರು ಸಾಕಷ್ಟು ಚರ್ಚೆಯಲ್ಲಿದ್ದರು.
ಇಯರ್ ಇನ್ ಸರ್ಚ್ 2022 ನ ಟಾಪ್ 10 ವ್ಯಕ್ತಿಗಳು:
1) ನೂಪುರ್ ಶರ್ಮಾ 2) ದ್ರೌಪದಿ ಮುರ್ಮು 3) ರಿಷಿ ಸುನಕ್ 4) ಲಲಿತ್ ಮೋದಿ 5) ಸುಶ್ಮಿತಾ ಸೇನ್ 6) ಅಂಜಲಿ ಅರೋರಾ 7) ಅಬ್ದು ರೋಝಿಕ್ 8) ಏಕನಾಥ್ ಶಿಂಧೆ 9) ಪ್ರವೀಣ್ ತಾಂಬೆ 10) ಅಂಬರ್ ಹರ್ಡ್
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Wed, 7 December 22