Tech Tips: ಶಾಕಿಂಗ್: ನೀವು ಸ್ಮಾರ್ಟ್‌ಫೋನ್‌ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತಿದ್ದರೆ ಇಂದೇ ನಿಲ್ಲಿಸಿ

ಇಂದು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿಯ ಚಿತ್ರಗಳನ್ನು ನೋಡುವುದು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ಅನೇಕ ಜನರು ಇದನ್ನು ರಹಸ್ಯವಾಗಿ ವೀಕ್ಷಿಸುತ್ತಾರೆ.

Tech Tips: ಶಾಕಿಂಗ್: ನೀವು ಸ್ಮಾರ್ಟ್‌ಫೋನ್‌ನಲ್ಲಿ 'ಈ' ವಿಡಿಯೋಗಳನ್ನು ನೋಡುತ್ತಿದ್ದರೆ ಇಂದೇ ನಿಲ್ಲಿಸಿ
Smartphone
Follow us
TV9 Web
| Updated By: Vinay Bhat

Updated on:Dec 08, 2022 | 2:44 PM

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಉಪಯೋಗಿಸದ ವ್ಯಕ್ತಿಯೇ ಇಲ್ಲ ಎಂದರೆ ತಪ್ಪಾಗಲಾರದು. ಸಮೀಕ್ಷೆಯೊಂದರ ಪ್ರಕಾರ, ಇಡೀ ಜಗತ್ತಿನಲ್ಲಿ ಇಂದು ಶೇ. 91 ರಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರಂತೆ. ಈ ಹಿಂದೆ ಫೋನ್​ಗಳನ್ನು ಸಂವಹನಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಸ್ಮಾರ್ಟ್​ಫೋನ್ ಎಂಬುದು ಮನರಂಜನೆಯ ಪ್ರಮುಖ ಮಾಧ್ಯಮವಾಗಿ ಬಿಟ್ಟಿದೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಡಿಜಿಟಲ್ ಕೆಲಸವನ್ನು ಕೂಡ ಸುಲಭವಾಗಿ ಮಾಡಬಹುದು. ಇಂದು ಇಂಟರ್ನೆಟ್ ಕೂಡ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದರಿಂದ ಸ್ಮಾರ್ಟ್​ಫೋನ್ ಮೂಲಕ ಜನರು ವಿಡಿಯೋಗಳನ್ನು (Video) ನೋಡುವುದು, ಡೌನ್​ಲೋಡ್ ಮಾಡುವುದು ಅತ್ಯಂತ ಸುಲಭವಾಗಿದೆ. ಹೀಗಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ರೀತಿಯ ಚಿತ್ರಗಳನ್ನು ನೋಡುವುದು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ (Ban). ಆದರೂ ಅನೇಕ ಜನರು ಇದನ್ನು ರಹಸ್ಯವಾಗಿ ವೀಕ್ಷಿಸುತ್ತಾರೆ.

ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸಿದರೆ, ಅದರಿಂದ ಉಂಟಾಗುವ ತೊಂದರೆ ಬಗ್ಗೆ ತಿಳಿದರೆ ಅಚ್ಚರಿಗೊಳ್ಳುತ್ತೀರಿ. ಇಂತಹ ವಿಡಿಯೋಗಳನ್ನು ವೀಕ್ಷಿಸುವುದು ಕೆಲವು ಜನರಿಗೆ ಚಟ ಆಗಿರುತ್ತದೆ. ಅವರು ಇದನ್ನು ನೋಡಲು ಹಣವನ್ನು ಕೂಡ ಪಾವತಿಸಲು ಸಿದ್ಧರಿರುತ್ತಾರೆ. ಆದರೆ ಇದೊಂದು ದೊಡ್ಡ ಸ್ಕ್ಯಾಮ್ ಎಂಬುದು ನೆನಪಿರಲಿ. ಯಾಕೆಂದರೆ ಈರೀತಿ ಹಣ ಕೇಳಿ ಅಶ್ಲೀಲ ಚಿತ್ರವನ್ನು ವೀಕ್ಷಿಸುವಂತೆ ಮಾಡುವವರು ನಿಮ್ಮ ಸ್ಮಾರ್ಟ್​ಫೋನ್​ ಒಳಗೆ ಸುಲಭವಾಗಿ ಕಾಲಿಡಬಹುದು. ನಿಮ್ಮ ಮೊಬೈಲ್​ಗೆ ಮಾಲ್‌ವೇರ್ ಅನ್ನು ಸೇರಿಸಬಹುದು, ಎಲ್ಲಾ ಮಾಹಿತಿಯನ್ನು ಕದಿಯಬಹುದು. ಇದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಆಗಬಹುದು. ದೇಶದಲ್ಲಿ ಈರೀತಿಯ ಅನೇಕ ಪ್ರಕರಣಗಳು ನಡೆಯುತ್ತಲೇ ಇದೆ.

Vivo Smartphones: ವಿವೊ ಸ್ಮಾರ್ಟ್​​ಫೋನ್ ರಫ್ತಿಗೆ ಭಾರತ ತಡೆ; ಚೀನಾ ಕಂಪನಿಗೆ ಭಾರೀ ಹಿನ್ನಡೆ

ಇದನ್ನೂ ಓದಿ
Image
Tecno POVA 4: ಕಡಿಮೆ ಬೆಲೆ, 6000mAh ಬಲಿಷ್ಠ ಬ್ಯಾಟರಿ: ಭಾರತದಲ್ಲಿ ಟೆಕ್ನೋದಿಂದ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ
Image
ನಮ್ಮ ಮೆಟ್ರೋ ಬಳಕೆದಾರರಿಗೆ ಗುಡ್ ನ್ಯೂಸ್: Paytm ಮತ್ತು Yaatraದಲ್ಲಿ ಟಿಕೆಟ್ ಸೇವೆ ಆರಂಭ
Image
Year in Search 2022: ಈ ವರ್ಷ ಗೂಗಲ್​ನಲ್ಲಿ ಜನರು ಹುಡುಕಿದ ಟಾಪ್ 10 ವ್ಯಕ್ತಿಗಳ ಪಟ್ಟಿ ಇಲ್ಲಿದೆ
Image
WhatsApp Avatar: ವಾಟ್ಸ್​ಆ್ಯಪ್​ನಲ್ಲಿ ಹೊಸ ‘ಅವತಾರ್’; ಏನಿದು ನೂತನ ವೈಶಿಷ್ಟ್ಯ?

ಇಂಟರ್ನೆಟ್ ಮೂಲಕ ನಾವು ಏನನ್ನು ಬ್ರೌಸ್ ಮಾಡುತ್ತಿದ್ದೇವೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಗೂಗಲ್ ಹೊಂದಿದೆ. ನೀವು ಅಶ್ಲೀಲ ಪದಗಳ ಕುರಿತು ಸರ್ಚ್ ಮಾಡಿದರೆ ಇದರ ಆಧಾರದ ಮೇಲೆ ನೀವು ಯಾವುದೇ ಪೇಜ್ ತೆರೆದರೂ ಅದರಲ್ಲಿ ಅಶ್ಲೀಲ ಚಿತ್ರಗಳ ಕುರಿತು ಜಾಹೀರಾತುಗಳು ಕಾಣಿಸುತ್ತದೆ. ನಿಮ್ಮ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಅಂತೆಯೆ ಅನೇಕ ಬಾರಿ ಜನರು ಅಶ್ಲೀಲ ವೆಬ್‌ಸೈಟ್‌ಗಳಿಂದ ವಿಡಿಯೋಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಇದರ ಜೊತೆಗೆ ನಿಮಗೆ ತಿಳಿಯದೆ ಮತ್ತೊಂದು ಫೈಲ್ ಕೂಡ ಡೌನ್​ಲೋಡ್ ಆಗುತ್ತದೆ. ಅಶ್ಲೀಲ ವಿಡಿಯೋ ಜೊತೆಗೆ ಮಾಲ್‌ವೇರ್ ಫೈಲ್‌ ಕೂಡ ಡೌನ್​ಲೋಡ್ ಆಗಿ ನಿಮ್ಮ ವೈಯಕ್ತಿಕ ಫೋಟೋಗಳನ್ನು ಕದಿಯುತ್ತದೆ. ನಂತರ ಅವರು ನಿಮ್ಮನ್ನ ಬ್ಲ್ಯಾಕ್ ಮೇಲ್ ಮಾಡಬಹುದು. ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಯಾವುದೇ ವಿಷಯದ ಕುರಿತು ಸರ್ಚ್ ಮಾಡಿದರೆ ಅಥವಾ ಅಶ್ಲೀಲ ವಿಡಿಯೋವನ್ನು ವೀಕ್ಷಿಸುತ್ತಿದ್ದರೆ ಅದನ್ನು ಗುಪ್ತಚರ ಏಜೆನ್ಸಿಗಳು ಗಮನಿಸುತ್ತಿವೆ ಎಂಬುದು ನೆನಪಿರಬೇಕು. ಇದರಿಂದ ನಿಮಗೆ ಆಪತ್ತು ಉಂಟಾಗಬಹುದು.

ಅಶ್ಲೀಲ ಚಿತ್ರ ಮತ್ತು ಅಶ್ಲೀಲ ವಿಡಿಯೋಗಳನ್ನು ನೋಡುವುದರಿಂದ ಅನೇಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆರಂಭದಲ್ಲಿ ಕುತೂಹಲಕ್ಕೆ ನೋಡುವ ಕೇಳುವ ಅಶ್ಲೀಲ ವಿಚಾರಗಳು ಬರಬರುತ್ತಾ ವ್ಯಸನವಾಗಿ ತಿರುಗುತ್ತದೆ. ಇದು ವ್ಯಕ್ತಿಯ ಭಾವೋದ್ರೇಕಕ್ಕೆ ಕಾರಣವಾಗುವುದು. ಅದರಲ್ಲೂ ಹದಿ ಹರೆಯದವರಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕರಿಗೆ ಚಹಾ, ಕಾಫೀ, ಮದ್ಯ, ಸಿಗರೇಟ್‍ನಂತಹ ಚಟಗಳಂತೆ ಅಶ್ಲೀಲ ಚಿತ್ರಗಳ ವೀಕ್ಷಣೆಯೂ ಒಂದು ಚಟವಾಗಿ ಪರಿರ್ವನೆಯಾಗುತ್ತದೆ. ಹಾಗಾಗಿ ಈ ಬಗೆಯ ವಿಡಿಯೋಗಳನ್ನು ನೋಡುವುದು ನಿಲ್ಲಿಸಿದರೆ ಉತ್ತಮ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Thu, 8 December 22

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್