ಫ್ಲಿಪ್​ಕಾರ್ಟ್​ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ

ಬೆಂಗಳೂರು ಮೂಲದ ಫ್ಲಿಪ್​ಕಾರ್ಟ್ ಕಂಪನಿಯ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ ನೀಡಿದ್ದಾರೆ. ಕಲ್ಯಾಣ್ ಅವರು ನಿರ್ಗಮಿಸುತ್ತಿರುವುದನ್ನು ಫ್ಲಿಪ್​ಕಾರ್ಟ್ ಸಂಸ್ಥೆಯೇ ಅಧಿಕೃತವಾಗಿ ದೃಢಪಡಿಸಿದೆ. ಕಂಪನಿಯಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಆಗಿರುವ ಬಾಲಾಜಿ ತ್ಯಾಗರಾಜನ್ ಅವರು ಮುಂದಿನ ಸಿಇಒ ನೇಮಕಾತಿ ಆಗುವವರೆಗೂ ಹಂಗಾಮಿ ಸಿಇಒ ಆಗಿ ಕಂಪನಿಯನ್ನು ನಡೆಸಲಿದ್ದಾರೆ.

ಫ್ಲಿಪ್​ಕಾರ್ಟ್​ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ
ಫ್ಲಿಪ್​ಕಾರ್ಟ್
Image Credit source: Getty Images

Updated on: Nov 25, 2026 | 4:07 PM

ಬೆಂಗಳೂರು, ನವೆಂಬರ್ 25: ಅಮೆರಿಕದ ವಾಲ್ಮಾರ್ಟ್ ಒಡೆತನದ ಇಕಾಮರ್ಸ್ ಕಂಪನಿಯಾದ ಫ್ಲಿಪ್​ಕಾರ್ಟ್​​ನಲ್ಲಿ 11 ವರ್ಷದ ಬಳಿಕ ನಾಯಕತ್ವ ಬದಲಾವಣೆ ಆಗುತ್ತಿದೆ. ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದ ಕಲ್ಯಾಣ್ ಕೃಷ್ಣಮೂರ್ತಿ ಅವರು ಸಿಇಒ ಸ್ಥಾನದಿಂದ ಹೊರಹೋಗಲಿದ್ದಾರೆ. ಫ್ಲಿಪ್​ಕಾರ್ಟ್​ನಲ್ಲಿ ಹಿರಿಯ ನಾಯಕರನೇಕರು ಕಳೆದ ಒಂದು ವರ್ಷದಲ್ಲಿ ಸಾಲು ಸಾಲಾಗಿ ಹೊರಬಿದ್ದಿರುವುದುಂಟು. ಈ ಸಾಲಿಗೆ ಅಗ್ರಜನಾಗಿ ಸಿಇಒ ಪದತ್ಯಾಗವಾಗಿದೆ.

ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ ನೀಡಿರುವ ವಿಷಯ ಈ ಮುಂಚೆಯೇ ಮಾಧ್ಯಮಗಳಿಗೆ ಗೊತ್ತಾಗಿತ್ತು. ಇದೀಗ ಸಂಸ್ಥೆಯೇ ಅಧಿಕೃತವಾಗಿ ಇದನ್ನು ಪ್ರಕಟಿಸಿದೆ. ಆದರೆ, ಮುಂದಿನ ಸಿಇಒ ಯಾರಾಗುತ್ತಾರೆ ಎಂಬುದು ಗೊತ್ತಾಗಿಲ್ಲ. ಸದ್ಯ ಫ್ಲಿಪ್​ಕಾರ್ಟ್​ನಲ್ಲಿ ಪ್ರಾಡಕ್ಟ್ ಮತ್ತು ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಬಾಲಾಜಿ ತ್ಯಾಗರಾಜನ್ ಅವರು ಸದ್ಯ ಹಂಗಾಮಿ ಸಿಇಒ ಆಗಿ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.

Loading...

ಇದನ್ನೂ ಓದಿ: ಜೆನ್ಸೆನ್ ಹುವಾಂಗ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದು, ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಮಹತ್ವದ ನಿರ್ಧಾರ: ಉದಯ್ ಕೋಟಕ್

‘ಫ್ಲಿಪ್​ಕಾರ್ಟ್​ನ ಪ್ರಯಾಣದ ಒಂದು ಭಾಗವಾಗಿದ್ದುದು ನನಗೆ ಹಿರಿಮೆ ಎನಿಸುತ್ತದೆ. ನಾವು ಬ್ಯುಸಿನೆಸ್ ಅಗಾಧವಾಗಿ ವಿಸ್ತರಿಸಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಇದನ್ನು ನಿರ್ಮಿಸಿದ ರೀತಿಗೂ ಅಷ್ಟೇ ಹೆಮ್ಮೆ ಎನಿಸುತ್ತದೆ. ಫ್ಲಿಪ್​ಕಾರ್ಟ್​ನ ಬೆಳವಣಿಗೆಯಲ್ಲಿ ಬಲವಾದ ನೈತಿಕತೆ, ಪ್ರಾಮಾಣಿಕತೆ ಮತ್ತು ಆಡಳಿತ ಗುಣಮಟ್ಟ ಇವೆಲ್ಲವೂ ಪ್ರಮುಖವಾಗಿವೆ’ ಎಂದು ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

2017ರಲ್ಲಿ ಸಿಇಒ ಆದ ಕಲ್ಯಾಣ್ ಕೃಷ್ಣಮೂರ್ತಿ

ಕಲ್ಯಾಣ್ ಕೃಷ್ಣಮೂರ್ತಿ ಅವರು 2013ರಲ್ಲಿ ಫ್ಲಿಪ್​ಕಾರ್ಟ್ ಸೇರಿದರು. 2017ರಲ್ಲಿ ಸಿಇಒ ಆದರು. 2018ರಲ್ಲಿ ಅವರು ಗ್ರೂಪ್ ಸಿಇಒ ಆಗಿ ಬೆಳೆದರು. ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಅನ್ನು ವಾಲ್ಮಾರ್ಟ್ ಖರೀದಿಸಿದ್ದು ಇವರ ಅವಧಿಯಲ್ಲೇ.

ಇದನ್ನೂ ಓದಿ: ಸೆಬಿ, ಆರ್​ಬಿಐ, ಆಧಾರ್, ಎಸ್​ಬಿಐ ಇತ್ಯಾದಿಯಿಂದ ಹೊಸ ಅಪ್​ಡೇಟ್; ಡಿಸೆಂಬರ್​ನಿಂದ ಆಗುವ ಪ್ರಮುಖ ಹಣಕಾಸು ಕ್ರಮಗಳು

2007ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರಿಂದ ಶುರುವಾದ ಫ್ಲಿಪ್​ಕಾರ್ಟ್ ಭಾರತದ ಅತಿದೊಡ್ಡ ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಒಂದೆನಿಸಿದೆ. ಅಮೇಜಾನ್​ನಂತಹ ಅಮೇಜಾನ್​ಗೆ ತೀವ್ರ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ 50 ಕೋಟಿ ನೊಂದಾಯಿತ ಬಳಕೆದಾರರ ಬಳಗ ಇದೆ. 14 ಲಕ್ಷ ಮಾರಾಟಗಾರರು ನೊಂದಾವಣಿ ಮಾಡಿಕೊಂಡಿದ್ದಾರೆ.

ಆದರೆ, ಇತ್ತೀಚಿನ ದಿನಗಳಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ವಿವಿಧ ವಿವಾದಗಳು ತಲೆ ಎತ್ತಿವೆ. ಒಂದು ವರ್ಷದಿಂದ 14ಕ್ಕೂ ಹೆಚ್ಚು ವೈಸ್ ಪ್ರೆಸಿಡೆಂಟ್ ಮತ್ತು ಸೀನಿಯರ್ ವೈಸ್ ಪ್ರೆಸಿಡೆಂಟ್​ಗಳು ಹೊರಬಿದ್ದಿರುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us