ತಂತ್ರಜ್ಞಾನ ಹೆಚ್ಚಿದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರ ತಂತ್ರಗಾರಿಕೆಗಳೂ ಹಲವಿರುತ್ತವೆ. ಆರ್ಥಿಕ ವ್ಯವಸ್ಥೆಗೆ ಅನಿವಾರ್ಯದಂತೆಯೇ ಆಗಿ ಹೋಗಿರುವ ಆಧಾರ್ ಕಾರ್ಡ್ ಅನ್ನು ದುರುಳರು ದುರುಪಯೋಗ ಮಾಡಿಕೊಳ್ಳುತ್ತಿರುವ ಹಲವು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇವೆ. 12 ಅಂಕಿಗಳಿರುವ ಆಧಾರ್ ನಂಬರ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಯುಐಡಿಎಐನಿಂದ ಮಾಸ್ಕ್ಡ್ ಆಧಾರ್ (Masked Aadhaar) ಸೌಲಭ್ಯ ಒದಗಿಸಲಾಗಿದೆ. ಮಾಸ್ಕ್ಡ್ ಆಧಾರ್ ಎಂದರೆ ಆಧಾರ್ ನಂಬರ್ನ ಕೆಲ ಅಂಕಿಗಳನ್ನು ಮಸುಕು ಮಾಡಲಾಗಿರುತ್ತದೆ. ಇದರಿಂದ ಪೂರ್ಣ ಸಂಖ್ಯೆ ಬಹಿರಂಗವಾಗಿ ಕಾಣುವುದಿಲ್ಲ.
ಮಾಸ್ಕ್ಡ್ ಆಧಾರ್ ಅಥವಾ ಮಸುಕು ಮಾಡಿದ ಆಧಾರ್ನಲ್ಲಿ ಕೊನೆ ನಾಲ್ಕಂಕಿ ಬಿಟ್ಟು ಉಳಿದ ಅಂಕಿಗಳು ಮುಚ್ಚಿರುತ್ತವೆ. ಆದರೆ, ಹೆಸರು, ಫೋಟೋ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿ ಕಾಣುತ್ತದೆ. ಆಧಾರ್ ಸಂಖ್ಯೆ ದುರ್ಬಳಕೆ ಆಗದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: FD Rates: ಎಚ್ಡಿಎಫ್ಸಿ, ಎಸ್ಬಿಐ, ಐಸಿಐಸಿಐ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಎಷ್ಟಿದೆ? ಇಲ್ಲಿದೆ ತುಲನೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ