Cost Of Living: ಜೀವನ ವೆಚ್ಚದ ಭಾರದಿಂದ ಬುಲ್ಡೋಜರ್​ ಅಡಿಗೆ ಸಿಕ್ಕ ಹಪ್ಪಳದಂತಾದ ಜನರ ಬದುಕು

| Updated By: Srinivas Mata

Updated on: Jul 12, 2022 | 4:35 PM

ಭಾರತದ ದೊಡ್ಡ ಪ್ರಮಾಣದ ಜನಸಂಖ್ಯೆಯು ಏರುತ್ತಿರುವ ಜೀವನ ವೆಚ್ಚದ ಪರಿಣಾಮವನ್ನು ಎದುರಿಸುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Cost Of Living: ಜೀವನ ವೆಚ್ಚದ ಭಾರದಿಂದ ಬುಲ್ಡೋಜರ್​ ಅಡಿಗೆ ಸಿಕ್ಕ ಹಪ್ಪಳದಂತಾದ ಜನರ ಬದುಕು
ಸಾಂದರ್ಭಿಕ ಚಿತ್ರ
Follow us on

2022ನೇ ಇಸವಿಯಲ್ಲಿ ಬಾಕಿ ಉಳಿದಿರುವ ತಿಂಗಳಲ್ಲಂತೂ ಭಾರತದ ಹಣದುಬ್ಬರ ದರವು ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಸಹಿಷ್ಣುತಾ ದರದ (4 = + ಅಥವಾ – 2) ಮೇಲಿರುತ್ತದೆ. ಅಂದರೆ ಶೇ 6ಕ್ಕಿಂತ ಹೆಚ್ಚಿರುತ್ತದೆ. ಮುಂಬರುವ ತಿಂಗಳುಗಳಲ್ಲಿ ಬಡ್ಡಿದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ರಾಯಿಟರ್ಸ್ ಸಮೀಕ್ಷೆ ತೋರಿಸಿದೆ. ಆರ್ಥಿಕ ಸಲಹಾ ಮಂಡಳಿಯ ಇತ್ತೀಚಿನ ಭಾರತದಲ್ಲಿ ಅಸಮಾನತೆ ಸ್ಥಿತಿಯ ವರದಿ ಪ್ರಕಾರ, ದೇಶದ ಹೆಚ್ಚಿನ ಪ್ರಮಾಣದ ಜನಸಂಖ್ಯೆಗೆ ಜೀವನ ವೆಚ್ಚವು ಹೆಚ್ಚಾಗಲಿದೆ ಎಂದು ಸೂಚಿಸುತ್ತದೆ. ಅಲ್ಲಿ ಟಾಪ್ ಶೇ 10ರಷ್ಟು ಮಂದಿ ತಿಂಗಳಿಗೆ ಸರಾಸರಿ ರೂ. 25,000 ಗಳಿಸುತ್ತಾರೆ. ಅಂದಹಾಗೆ ಈ ವರದಿಯನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಯಿತು. ದೇಶದಲ್ಲಿ ಒಂದು ದೊಡ್ಡ ಆದಾಯದ ಹಂಚಿಕೆ ಅಸಮಾನತೆಯನ್ನು ಎತ್ತಿ ತೋರಿಸುತ್ತಾ, ಆ ವರದಿಯು ದೇಶದ ಅಗ್ರ ಶೇಕಡಾ ಒಂದು ಭಾಗವು ರಾಷ್ಟ್ರೀಯ ಆದಾಯದ ಶೇ 5ರಿಂದ 7ರಷ್ಟನ್ನು ಹೊಂದಿದೆ ಎಂದು ತೋರಿಸಿದೆ. ಆದರೆ ಸುಮಾರು ಶೇ 15ರಷ್ಟು ದುಡಿಯುವ ಜನಸಂಖ್ಯೆಯು ಒಂದು ತಿಂಗಳಿಗೆ 5,000 ರೂಪಾಯಿಗಿಂತ ಕಡಿಮೆ (ಸುಮಾರು 64 ಯುಎಸ್​ಡಿ) ಗಳಿಸುತ್ತದೆ.

ಇತ್ತೀಚಿನ ರಾಯಿಟರ್ಸ್ ಸಮೀಕ್ಷೆಯು ತೋರಿಸಿರುವಂತೆ, ಈಗಿನ ಸುತ್ತಿನ ಜಾಗತಿಕ ಹಣಕಾಸು ನೀತಿ ಬಿಗಿಗೊಳಿಸುವಿಕೆ ನಂತರ ಪ್ರವೇಶಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಮೇ ಮತ್ತು ಜೂನ್‌ನಲ್ಲಿ ಒಟ್ಟು 90 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಆದರೆ ಏಪ್ರಿಲ್ ಸಮೀಕ್ಷೆ ನಂತರದಲ್ಲಿ ಹಣದುಬ್ಬರ ದೃಷ್ಟಿಕೋನವು ಹದಗೆಟ್ಟಿದೆ. ಹೆಚ್ಚುತ್ತಿರುವ ಜಾಗತಿಕ ಸರಕುಗಳ ಬೆಲೆಗಳು ಹಣದುಬ್ಬರವನ್ನು ಆರ್‌ಬಿಐನ ಶೇ 6ರ ಸಹಿಷ್ಣುತಾ ದರದ ಮೇಲ್ಮಟ್ಟದಲ್ಲಿಯೇ ವರ್ಷಪೂರ್ತಿ ಇರಿಸಿದೆ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚಗಳಿಗೆ ಇಲ್ಲಿಯವರೆಗೆ ನವದೆಹಲಿಯ ಹಣಕಾಸಿನ ಪ್ರತಿಕ್ರಿಯೆಯು ಸಾಧಾರಣವಾಗಿದೆ.

ವರ್ಷಾಂತ್ಯಕ್ಕೆ ಚೇತರಿಕೆ

ಜುಲೈ 4ರಿಂದ 11ರ ರಾಯಿಟರ್ಸ್ ಸಮೀಕ್ಷೆಯ ಮುನ್ಸೂಚನೆಗಳ ಪ್ರಕಾರ, 2022ರ Q3 ಮತ್ತು Q4 ಹಣದುಬ್ಬರವು ಕ್ರಮವಾಗಿ ಶೇ 7.3 ಮತ್ತು ಶೇ 6.4 ಇರಲಿದೆ. ಈ ಹಿಂದಿನ ಸಮೀಕ್ಷೆಯಲ್ಲಿ ತಿಳಿಸಿರುವ ಪ್ರಕಾರ, ಹಣದುಬ್ಬರವು ವರ್ಷಾಂತ್ಯ ವೇಳೆಗೆ ಆರ್​ಬಿಐನ ಸಹಿಷ್ಣುತೆ ಬ್ಯಾಂಡ್‌ಗೆ ಮರಳುತ್ತದೆ. “ಭಾರತದಲ್ಲಿ ಹಣದುಬ್ಬರವು ಈ ಪ್ರದೇಶದ ಇತರ ಭಾಗಗಳಿಗಿಂತ ಹೆಚ್ಚು ಗಾಢವಾಗಿದೆ. ಪರಿಸ್ಥಿತಿಯು ಉತ್ತಮಗೊಳ್ಳುತ್ತವೆ. ಆದರೆ ಏಷ್ಯಾದ ಇತರ ಭಾಗಗಳಲ್ಲಿ ಅವು ಹೆಚ್ಚು ವೇಗವಾಗಿ ಉತ್ತಮಗೊಳ್ಳುತ್ತವೆ,” ಎಂದು ಅರ್ಥಶಾಸ್ತ್ರಜ್ಞರಾದ ಮಿಗುಯೆಲ್ ಚಾಂಕೊ ಹೇಳಿದ್ದಾರೆ.

42 ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, ಈ ಹಣಕಾಸು ವರ್ಷದ ಸರಾಸರಿ ಹಣದುಬ್ಬರವು ಶೇಕಡಾ 6.8ಕ್ಕೆ ಏರಿದ್ದು, ಏಪ್ರಿಲ್ ಸಮೀಕ್ಷೆಯಲ್ಲಿ ಶೇ 5.5ರಿಂದ ತೀವ್ರವಾಗಿ ಅಪ್‌ಗ್ರೇಡ್ ಆಗಿದೆ. ಆ ನಂತರದ ಎರಡು ವರ್ಷಗಳಲ್ಲಿ ಕ್ರಮವಾಗಿ ಶೇ 5.2 ಮತ್ತು ಶೇ 4.7ಕ್ಕೆ ಇಳಿದಿದೆ. ಆರ್‌ಬಿಐ ರೆಪೊ ದರ ಸದ್ಯಕ್ಕೆ ಶೇ 4.90ರಷ್ಟಿದ್ದು, ವರ್ಷಾಂತ್ಯದ ವೇಳೆಗೆ ಶೇ 5.65ಕ್ಕೆ ಇನ್ನೂ ಶೇ 0.75ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಅದು ಜೂನ್‌ನಲ್ಲಿ ತೆಗೆದುಕೊಂಡ ಪ್ರತ್ಯೇಕ ಸಮೀಕ್ಷೆಗಿಂತ ಸ್ವಲ್ಪ ಹೆಚ್ಚಾಗಿದ್ದು, ಆ ಹೊತ್ತಿಗೆ ದರಗಳನ್ನು ಶೇ 5.50ರಲ್ಲಿ ಅಂದಾಜಿಸಿದೆ.

ಆಗಸ್ಟ್​ ಸಭೆಯ ಮುನ್ಸೂಚನೆ

ಇತ್ತೀಚಿನ ಸಮೀಕ್ಷೆಯಲ್ಲಿ, ಅರ್ಧ ಭಾಗದಷ್ಟು ಅರ್ಥಶಾಸ್ತ್ರಜ್ಞರು, ಅಂದರೆ 48ರಲ್ಲಿ 25 ಮಂದಿ ಈ ತ್ರೈಮಾಸಿಕದ ಅಂತ್ಯದ ವೇಳೆಗೆ ದರಗಳು ಶೇಕಡಾ 5.50 ಅಥವಾ ಅದಕ್ಕಿಂತ ಹೆಚ್ಚಿರಬಹುದು ಎಂದು ಮುನ್ಸೂಚನೆ ನೀಡಿದ್ದಾರೆ. ಆಗಸ್ಟ್ ಸಭೆಯ ಮುನ್ಸೂಚನೆಯನ್ನು ಒದಗಿಸಿದವರಲ್ಲಿ, 35 ರಲ್ಲಿ 10 ತ್ರೈಮಾಸಿಕಕ್ಕಿಂತ ಹೆಚ್ಚು, ಆರ್​ಬಿಐ ಮುಂದಿನ ತಿಂಗಳ ಸಭೆಯಲ್ಲಿ 35 ಮೂಲ ಅಂಕಗಳಿಂದ ಹೆಚ್ಚಳವಾಗಿ, ಶೇ 5.2ಕ್ಕೆ ಏರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ 14 ಸಣ್ಣ ಕ್ವಾರ್ಟರ್ ಪಾಯಿಂಟ್ ಹೆಚ್ಚಳವನ್ನು ನಿರೀಕ್ಷಿಸುತ್ತದೆ. ಆರ್‌ಬಿಐ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಲಿದೆ ಎಂದು ಒಂಬತ್ತು ಮಂದಿ ಹೇಳಿದರೆ, ಒಬ್ಬರು 40 ಹಾಗೂ ಮತ್ತೊಬ್ಬರ 30 ಬೇಸಿಸ್ ಪಾಯಿಂಟ್ ಎಂದಿದ್ದಾರೆ.

ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಉಳಿದಿರುವಾಗ ಈ ಆರ್ಥಿಕ ವರ್ಷದಲ್ಲಿ ಸರಾಸರಿ ಶೇ 7.2 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಈ ಹಿಂದಿನ ರಾಯಿಟರ್ಸ್ ಸಮೀಕ್ಷೆಯಲ್ಲಿ ಅಂದಾಜು ಮಾಡಿದ ಶೇ 7.5ರ ವೇಗಕ್ಕಿಂತ ಸ್ವಲ್ಪ ಕಡಿಮೆ ಮತ್ತು ಆರ್​ಬಿಐ ಅಂದಾಜು ಮಾಡಿದ ಶೇ 7.2ರಷ್ಟಕ್ಕೆ ಅನುಗುಣವಾಗಿ ಇರಲಿದೆ. “ಭಾರತವು ಇನ್ನೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಉಳಿಯುತ್ತದೆ. ಆದರೆ ಭಾರತದ ಬೆಳವಣಿಗೆಯು ದೇಶಕ್ಕೆ ಅಗತ್ಯವಿರುವ ಮಾನದಂಡಗಳಿಂದ ಇನ್ನೂ ಸಾಕಷ್ಟು ದುರ್ಬಲವಾಗಿರುತ್ತದೆ,” ಎಂದು ಸೊಸೈಟಿ ಜನರಲ್‌ನ ಅರ್ಥಶಾಸ್ತ್ರಜ್ಞ ಕುನಾಲ್ ಕುಂದು ಹೇಳಿದ್ದಾರೆ.

ಅರ್ಥಶಾಸ್ತ್ರಜ್ಞರ ಅಂದಾಜು

“ಭಾರತೀಯ ಆರ್ಥಿಕತೆಯಲ್ಲಿ ದೇಶೀಯ ಬೇಡಿಕೆ ದುರ್ಬಲವಾಗಿದೆ. ಏಕೆಂದರೆ ಅವರು ಹೊಂದಿರಬೇಕಾದ ಮಟ್ಟಿಗೆ ಉದ್ಯೋಗಗಳು ಉತ್ಪತ್ತಿಯಾಗುತ್ತಿಲ್ಲ.” ಕಳೆದ ತಿಂಗಳಲ್ಲಿ ಉದ್ಯೋಗದ ಪರಿಸ್ಥಿತಿಯು ಹೇಗೆ ಬದಲಾಗಿದೆ ಎಂದು ಕೇಳಿದಾಗ, 27ರಲ್ಲಿ 15 ಜನರು ಸ್ವಲ್ಪ ಸುಧಾರಿಸಿದೆ ಎಂದು ಹೇಳಿದ್ದರು. ಉಳಿದ 12, ಶೇಕಡಾ 40ಕ್ಕಿಂತ ಹೆಚ್ಚು- ಇದು ಸ್ವಲ್ಪ ಹದಗೆಟ್ಟಿದೆ ಎಂದು ಹೇಳಿದ್ದರು. ಆದರೂ ಕನಿಷ್ಠ ಮುಂದಿನ ವರ್ಷದವರೆಗೆ ಜೀವನ ವೆಚ್ಚದ ಬಿಕ್ಕಟ್ಟು ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿಲ್ಲ. ಹೆಚ್ಚುವರಿ ಪ್ರಶ್ನೆಗೆ ಉತ್ತರಿಸಿದ ಅರ್ಥಶಾಸ್ತ್ರಜ್ಞರ ಪೈಕಿ 26 ರಲ್ಲಿ 20 ಜನರು ಕನಿಷ್ಠ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರೆ, ಉಳಿದ ಆರು ಮಂದಿ ಆರು ತಿಂಗಳೊಳಗಾಗಿ ಎಂದಿದ್ದಾರೆ.

ರೂಪಾಯಿ ದುರ್ಬಲ ಆಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಭಾರತದ ಅತಿದೊಡ್ಡ ಆಮದು ಹೆಚ್ಚಿನ ತೈಲ ಬೆಲೆಗಳಿಂದಾಗಿ ವರ್ಷಕ್ಕೆ ಈಗಾಗಲೇ ಶೇ 6ರಷ್ಟು ಕಡಿಮೆಯಾದ ಕರೆನ್ಸಿ ಸೆಪ್ಟೆಂಬರ್ ವೇಳೆಗೆ ಡಾಲರ್‌ ವಿರುದ್ಧ ರೂಪಾಯಿಯನ್ನು 80ರ ಹೊಸ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿಸಬಹುದು ಎಂದು ಪ್ರತ್ಯೇಕ ರಾಯಿಟರ್ಸ್ ಸಮೀಕ್ಷೆಯು ತಿಳಿಸಿದೆ.

Published On - 4:35 pm, Tue, 12 July 22