ಗಣಿಗಾರಿಕೆ (Mining) ಕ್ಷೇತ್ರದಲ್ಲಿ ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ, ಹೈದರಾಬಾದ್ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಜುಪಲ್ಲಿ ರಂಜಿತ್ ರಾವ್ ಅವರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸನ್ಮಾನಿಸಿದ್ದಾರೆ. ಇದು ಸತತವಾಗಿ ಮೂರನೇ ವರ್ಷ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಈ ಪ್ರಶಸ್ತಿಯನ್ನು ಮಂಗಳವಾರದಂದು (ಜುಲೈ 12, 2022) ಪಡೆದಿದೆ. ಹೈದರಾಬಾದ್ ಮೂಲದ ಮೈ ಹೋಮ್ ಗ್ರೂಪ್‌ಗೆ
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ 5 ಸ್ಟಾರ್ ರೇಟಿಂಗ್ ಪ್ರಶಸ್ತಿ ಬಂದಿದೆ. ದೆಹಲಿಯಲ್ಲಿ ನಡೆದ ಗಣಿ ಮತ್ತು ಖನಿಜ ಸಂಪತ್ತಿನ 6ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಇದು ನೀಡಲಾಯಿತು.
ಮೈ ಹೋಮ್ ಗ್ರೂಪ್‌ಗೂ ಪ್ರಶಸ್ತಿ ಈ ಹಿಂದೆ 2018-19 ಹಾಗೂ 2019-20ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜುಲೈ 12ನೇ ತಾರೀಕಿನಂದು 2020-21ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿದೆ. ಐಬಿಎಂ 2021ರಲ್ಲಿ (2019-20) ಐದನೇ ಫೈವ್ ಸ್ಟಾರ್ ರೇಟಿಂಗ್ ಎಂಎಲ್ಎಂಗಾಗಿ ಭಾರತ ಸರ್ಕಾರದ ಗಣಿಗಾರಿಕೆ ಸಚಿವಾಲಯದಿಂದ ಮೈ ಹೋಮ್ ಇಂಡಸ್ಟ್ರೀಸ್ ಪ್ರಶಸ್ತಿ ಪಡೆದುಕೊಂಡಿದೆ. ಐದನೇ ಫೈವ್ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ವೈಎಲ್ಎಂಗಾಗಿ ಕೇಂದ್ರ ಸರ್ಕಾರದ ಗಣಿಗಾರಿಕೆ ಸಚಿವಾಲಯಿಂದ ಐಬಿಎಂ 2021 (2018-19)ರಲ್ಲಿ ನೀಡಲಾಗಿದೆ.
ಪ್ರಶಸ್ತಿ ವಿವರ ಇಲ್ಲಿದೆ:
ಕ್ರಶರ್ ಮತ್ತು ಎಲೆಕ್ಟ್ರಿಕಲ್ ಅಳವಡಿಕೆ- ಮೊದಲ ಬಹುಮಾನ
ಗುತ್ತಿಗೆ ಕೆಲಸದ ಸುರಕ್ಷತೆ ಮತ್ತು ಸುರಕ್ಷತೆ ನನ್ನ ಜವಾಬ್ದಾರಿ ರಿಪೋರ್ಟ್ ಕಾರ್ಡ್- ಎರಡನೇ ಬಹುಮಾನ
ಸುರಕ್ಷತಾ ನಿರ್ವಹಣೆ ವ್ಯವಸ್ಥೆ- ಎರಡನೇ ಬಹುಮಾನ
ಮಿನರಲ್ ಬೆನಿಫಿಕೇಷನ್- ಮೂರನೇ ಬಹುಮಾನ
2021ನೇ ಸಾಲಿಗೆ 22ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಇಂಧನ ನಿರ್ವಹಣೆಯಲ್ಲಿನ ಸಾಧನೆ ಗುರುತಿಸಿ, ಹೋಮ್ ಇಂಡಸ್ಸ್ರೀಸ್ ಲಿಮಿಟೆಡ್ (ಮೆಲ್ಲಚೆರುವು)ಗಾಗಿ ನೀಡಲಾಗಿದೆ. ಇದೊಂದು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಆಗಿದೆ. ಟಿಎಸ್ ಎನರ್ಜಿ ಕನ್ಸರ್ವೇಷನ್ ಪ್ರಶಸ್ತಿ- 2019 ಅನ್ನು ತೆಲಂಗಾಣ ಸರ್ಕಾರ ನೀಡಿದೆ. ಟಿಎಸ್ ಎನರ್ಜಿ ಕನ್ಸರ್ವೇಷನ್ ಪ್ರಶಸ್ತಿಯನ್ನು ಅಲ್ಲಿನ ಸಚಿವರಿಂದ ಪಡೆಯಲಾಗಿದೆ. 2018ರ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದ್ನಲ್ಲಿ ನಡೆದ ಕ್ಯೂಸಿಎಫ್ಐ ಹಾಗೂ ಸಿಎಂಎ ಎರಡನೇ ಸಿಮೆಂಟ್ ಸಮಾವೇಶದಲ್ಲಿ ಎರಡನೇ ಅತ್ಯುತ್ತಮ ಸುರಕ್ಷತಾ ಎಕ್ಸಲೆನ್ಸ್, ಎರಡನೇ ಅತ್ಯುತ್ತಮ ಎನರ್ಜಿ ಎಕ್ಸಲೆನ್ಸ್ ಮತ್ತು ಪ್ರಥಮ ಅತ್ಯುತ್ತಮ ಜೀವ ವೈವಿಧ್ಯ ಮತ್ತು ಸುಸ್ಥಿರ ಗಣಿಗಾರಿಕೆ ಪ್ರಶಸ್ತಿಯನ್ನು ಹೋಮ್ ಇಂಡಸ್ಟ್ರೀಸ್ ಪಡೆದಿತ್ತು.
2017ರ ಸೆಪ್ಟೆಂಬರ್ 13ಕ್ಕೆ ಹೈದರಾಬಾದ್ ಚಾಪ್ಟರ್ನಿಂದ ಕ್ವಾಲಿಟಿ ಸರ್ಕಲ್ ಅವಾರ್ಡ್ಸ್ 4 ಗೋಲ್ಡ್ ರೇಟಿಂಗ್ ಪಡೆದಿದೆ. 2017ರ ಸೆಪ್ಟೆಂಬರ್ 1ರಂದು ಸಿಐಐನಿಂದ ರಾಷ್ಟ್ರೀಯ ಎನರ್ಜಿ ಮ್ಯಾನೇಜ್ಮೆಂಟ್ ಪ್ರಶಸ್ತಿ ಪಡೆದಿದೆ. ಅಕ್ಟೋಬರ್ 26ರ 2017ರಲ್ಲಿ ಲಂಡನ್ ಜಾಗತಿಕ ಸಮಾವೇಶದಲ್ಲಿ ಸುಸ್ಥಿರತೆಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ ಬಂದಿದೆ. 2016ರಲ್ಲಿ ಮೈ ಡೇ ಅವಾರ್ಡ್- ಅತ್ಯುತ್ತಮ ಮ್ಯಾನೇಜ್ಮೆಂಟ್ ಪ್ರಶಸ್ತಿ ಬಂದಿದೆ. ತೂತ್ತುಕೂಡಿಯಲ್ಲಿ ಇರುವ ಹೋಮ್ ಇಂಡಸ್ಟ್ರೀಸ್ನ ಗ್ರೈಡಿಂಗ್ ಘಟಕಕ್ಕೆ ಬಂದಿರುವ 2016-22ರ ಮಧ್ಯದ ಪ್ರಶಸ್ತಿಗಳನ್ನು ಗಮನಿಸುವುದಾದರೆ, ಸಿಐಐ ದಕ್ಷಿಣ ಪ್ರಾದೇಶಿಕ ಇಎಚ್ಎಸ್ ಎಕ್ಸಲೆನ್ಸ್ ಪ್ರಶಸ್ತಿ 3 ಸ್ಟಾರ್ಸ್ ರೇಟಿಂಗ್ ಅಸೆಸ್ಮೆಂಟ್ ವರ್ಷ 2020-21ಕ್ಕೆ ಬಂದಿದ್ದು, 25 ಮಾರ್ಚ್ 2021ರಲ್ಲಿ ಅದನ್ನು ನೀಡಲಾಯಿತು. ಇನ್ನು ಸಿಐಐ ದಕ್ಷಿಣ ಪ್ರಾದೇಶಿ ಇಎಚ್ಎಸ್ ಎಕ್ಸಲೆನ್ಸ್ ಪ್ರಶಸ್ತಿ- ಸಿಲ್ವರ್ (ಬೆಳ್ಳಿ) ಅಸೆಸ್ಮೆಂಟ್ ವರ್ಷ 2021-22ನೇ ಸಾಲಿಗೆ ಬಂದಿದ್ದು, ಮಾರ್ಚ್ 29, 2022ರಲ್ಲಿ ನೀಡಲಾಯಿತು.
Published On - 6:12 pm, Tue, 12 July 22