layoffs 2022 – 2023: ಕೆಲಸ ಕೆಲಸ… 2022ಕ್ಕಿಂತಲೂ ಈ ವರ್ಷ ಮಹಾಸಂಕಷ್ಟ?
ಅಮೆಜಾನ್ ಮತ್ತು ಸೇಲ್ಸ್ ಫೋರ್ಸ್ ಎನ್ನುವ ಸಂಸ್ಥೆಗಳು 2023ರಲ್ಲಿ ತಲಾ 8 ಸಾವಿರ ಸಿಬ್ಬಂದಿ ಕಡಿತ ಮಾಡುತ್ತಿರುವುದು ವರದಿಯಾಗಿದೆ. ಕಳೆದ ವರ್ಷ ಅಮೆಜಾನ್ 10 ಸಾವಿರ ಉದ್ಯೋಗಿಗಳ ಲೇ ಆಫ್ ಘೋಷಿಸಿತ್ತು. ಇದೀಗ ಮತ್ತೆ 8 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಪಟ್ಟಿ ಮಾಡಲಾಗುತ್ತಿದೆ.
ಕೋವಿಡ್ ಮಹಾಮಾರಿ (Covid-19 Pandemic) ಬಂದ ಬಳಿಕ ಜಗತ್ತು ಅಲುಗಾಡುತ್ತಲೇ ಸಾಗುತ್ತಿದೆ. ಕೋವಿಡ್ ವೇಳೆ ಸ್ತಬ್ಧವಾಗಿದ್ದ ವಿಶ್ವದ ಆರ್ಥಿಕತೆ (World Economic Slowdown) ಬಳಿಕ ಚೇತರಿಸಿಕೊಂಡಿತು ಎನ್ನುವಾಗಲೇ ರಷ್ಯಾ ಉಕ್ರೇನ್ ಯುದ್ಧ, ಚೀನಾ ಕೋವಿಡ್ ಅಲೆ ಇತ್ಯಾದಿ ವಿದ್ಯಮಾನಗಳಿಂದ ನಲುಗಿಹೋಗುತ್ತಿದೆ. ಪರಿಣಾಮವಾಗಿ ಬಹಳಷ್ಟು ಉದ್ಯಮಗಳ ಬೆಳವಣಿಗೆ ಮಂದಗೊಂಡಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗನಷ್ಟವಾಗುತ್ತಿದೆ. 2022ರಲ್ಲಿ ಅತಿಹೆಚ್ಚು ಮಂದಿ ಉದ್ಯೋಗ (Job loss) ಕಳೆದುಕೊಂಡಿದ್ದರು. ಈ ವರ್ಷ, ಅಂದರೆ 2023 ಇನ್ನೂ ಹೀನಾಯವಾಗಲಿದ್ದು, ಅತಿ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಬಹುದು ಎನ್ನುವ ಮುನ್ಸೂಚನೆ ಇದೆ.
ಅದಕ್ಕೆ ಪೂರಕವಾಗಿ ಅಮೆಜಾನ್ ಮತ್ತು ಸೇಲ್ಸ್ ಫೋರ್ಸ್ ಎನ್ನುವ ಸಂಸ್ಥೆಗಳು 2023ರಲ್ಲಿ ತಲಾ 8 ಸಾವಿರ ಸಿಬ್ಬಂದಿ ಕಡಿತ ಮಾಡುತ್ತಿರುವುದು ವರದಿಯಾಗಿದೆ. ಕಳೆದ ವರ್ಷ ಅಮೆಜಾನ್ 10 ಸಾವಿರ ಉದ್ಯೋಗಿಗಳ ಲೇ ಆಫ್ ಘೋಷಿಸಿತ್ತು. ಇದೀಗ ಮತ್ತೆ 8 ಸಾವಿರ ಉದ್ಯೋಗಿಗಳನ್ನು ಮನಗೆ ಕಳುಹಿಸಲು ಪಟ್ಟಿ ಮಾಡಲಾಗುತ್ತಿದೆ. ಲೇ ಆಫ್ಸ್ ಎನ್ನುವ ಸ್ಟಾರ್ಟಪ್ ಕಂಪನಿಯ ವೆಬ್ ಸೈಟಿನಲ್ಲಿರುವ ಟ್ರ್ಯಾಕರ್ ಪ್ರಕಾರ ಈ ವರ್ಷ ಜನವರಿ 1ರಿಂದ 5ರವರೆಗೆ ಜಾಗತಿಕವಾಗಿ ಟೆಕ್ ಕಂಪನಿಗಳ 28 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದಕೊಂಡಿದ್ದಾರೆ.
ಬೆಂಗಳೂರಿನ ಹಲವು ಕಂಪನಿಗಳು
2020ರಿಂದೀಚೆ ಕನಿಷ್ಠ 1 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಟೆಕ್ ಕಂಪನಿಗಳ ಸಂಖ್ಯೆ 47 ಎಂಬ ಮಾಹಿತಿಯನ್ನು ಲೇ ಆಫ್ಸ್ ಜಾಲತಾಣ ನೀಡಿದೆ. ಇದರಲ್ಲಿ ಬೆಂಗಳೂರಿನ ವರ್ಸೆ ಇನೋವೇಶನ್, ಓಲಾ, ಊಬರ್, ಸ್ವಿಗ್ಗಿ, ಕ್ಯೂರ್ ಫಿಟ್, ಎಂಫೈನ್, ಬೈಜೂಸ್, ಅನ್ ಅಕಾಡೆಮಿ, ವೇದಾಂತು, ಮೀಶೋ, ಟ್ರೆಲ್, ಬೌನ್ಸ್, ಬ್ಲ್ಯಾಕ್ ಬಕ್, ನಿಂಜಾಕಾರ್ಟ್ ಮೊದಲಾದ ಕಂಪನಿಗಳೂ ಇವೆ.
ಅಮೆಜಾನ್ ಬರೋಬ್ಬರಿ 18 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡುತ್ತಿದೆ. ಫೇಸ್ಬುಕ್ ಮಾಲೀಕ ಸಂಸ್ಥೆ ಮೆಟಾದ 11 ಸಾವಿರ ಉದ್ಯೋಗಿಗಳು ಮನೆಗೆ ಮರಳಿದ್ದಾರೆ. ಸೇಲ್ಸ್ ಫೋರ್ಸ್ ಕಂಪನಿಯ 8 ಸಾವಿರ ಮಂದಿ ಕೆಲಸ ನಷ್ಟವಾಗಿದೆ. ಅಮೆಜಾನ್ನ್ನು ಭಾರತ ವಿಭಾಗದಿಂದ ಒಂದು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. 2022ರಲ್ಲಿ ವಿಶ್ವಾದ್ಯಂತ ಒಂದೂವರೆ ಲಕ್ಷ ಟೆಕ್ಕಿಗಳು ಕೆಲಸ ಕಳೆದುಕೊಂಡಿರುವುದು ತಿಳಿದುಬಂದಿದೆ. 2022ರ ನವೆಂಬರ್ ಒಂದೇ ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಟೆಕ್ಕಿಗಳನ್ನು ಕೆಲಸದಿಂದ ಬಿಡಿಸಲಾಗಿದೆ.
2023ರಲ್ಲಿ ಗೂಗಲ್ ಸಂಸ್ಥೆಯಿಂದ ಉದ್ಯೋಗಕಡಿತವಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಈ ವರ್ಷ ಗೂಗಲ್ನಲ್ಲಿ 11 ಸಾವಿರ ಉದ್ಯೋಗಿಗಳ ಕೆಲಸ ಹೋಗಲಿದೆ. ಅಂದರೆ ಶೇ. 6ರಷ್ಟು ಉದ್ಯೋಗಕಡಿತವನ್ನು ಗೂಗಲ್ ಮಾಡುತ್ತಿದೆ. ಈಗಾಗಲೇ ಗೂಗಲ್ ಆದಾಯಕ್ಕೆ ಸಹಾಯಕವಾಗಿಲ್ಲ ಉದ್ಯೋಗಿಗಳನ್ನು ಗುರುತಿಸುವ ಕೆಲಸವನ್ನು ಮ್ಯಾನೇಜರುಗಳು ಮಾಡುತ್ತಿದ್ದಾರೆ. ಅದೃಷ್ಟಕ್ಕೆ ಇದೂವರೆಗೆ ಉದ್ಯೋಗಕಡಿತದ ಸಾಧ್ಯತೆಯನ್ನು ಹೊರಗೆ ತೋರಿಸದ ಕೆಲವೇ ಟೆಕ್ ಕಂಪನಿಗಳಲ್ಲಿ ಆಪಲ್ ಒಂದು. ಮುಂದಿನ ದಿನಗಳಲ್ಲಿ ಅದೂ ಆಗಿಹೋಗಬಹುದು ಎಂಬ ಭೀತಿ ಇದೆ.
ಇದನ್ನು ಓದಿ:Google Layoffs: ಗೂಗಲ್ನಲ್ಲಿ ಕೆಲಸ ಮಾಡುತ್ತಿದ್ದೀರಾ? ಮುಂದಿನ ವರ್ಷ ವಜಾಗೊಳಿಸಬಹುದು ಎಚ್ಚರ
ಜನವರಿ ಅಂತ್ಯದಲ್ಲಿ ಹಲವು ಕಂಪನಿಗಳ ತ್ರೈಮಾಸಿಕ ವರದಿಗಳು ಹೊರಬರಲಿದ್ದು, ನಷ್ಟದಲ್ಲಿರುವ ಅಥವಾ ಲಾಭ ಕಡಿಮೆಯಾಗಿರುವ ಕಂಪನಿಗಳು ಮತ್ತೊಂದು ಸುತ್ತಿನ ಲೇ ಆಫ್ಗೆ ಕೈಹಾಕಬಹುದು ಎನ್ನಲಾಗಿದೆ. ಹಲವು ಟೆಕ್ಕಿಗಳ ಎದೆ ಡವ ಡವ ಎಂದು ಹೊಡೆದುಕೊಳ್ಳುತ್ತಿರುವುದು ಹೌದು.
ಲೇ ಆಫ್ಸ್ ತಾಣಕ್ಕೆ ಹೇಗೆ ಮಾಹಿತಿ?
ಇನ್ನು, ಲೇ ಆಫ್ಸ್ ವೆಬ್ ಸೈಟು ಹೇಗೆ ನಿಖರವಾಗಿ ಉದ್ಯೋಗ ಕಡಿತದ ಪತ್ತೆ ಹಚ್ಚುತ್ತದೆ ಎಂಬ ಪ್ರಶ್ನೆ ಏಳಬಹುದು. ಇದು ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿ ಮತ್ತು ವಿವಿಧ ಕಂಪನಿಗಳು ನೀಡಿರುವ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ ಮಾಹಿತಿ ನೀಡುತ್ತಿದೆ. ಈ ವೆಬ್ ಸೈಟಿನಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳ ಹೆಸರು, ಸಂಪರ್ಕ ಮಾಹಿತಿ ಇತ್ಯಾದಿ ಎಲ್ಲವೂ ಇದೆ. ಉದ್ಯೋಗ ಕಳೆದುಕೊಂಡವರು ಈ ವೆಬ್ ಸೈಟಿನಲ್ಲಿ ತಾವೇ ಸ್ವತಃ ಫಾರ್ಮ್ ತುಂಬಬಹುದಾಗಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ