ನವದೆಹಲಿ, ಡಿಸೆಂಬರ್ 9: ಹರ್ಯಾಣದ ಪಾಣಿಪತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಐಸಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದ್ದಾರೆ. ಹತ್ತನೇ ತರಗತಿ ಓದಿದ ಕನಿಷ್ಠ ವಿದ್ಯಾರ್ಹತೆ ಇರುವ 18 ವರ್ಷದಿಂದ 70 ವರ್ಷ ವಯೋಮಾನದ ಎಲ್ಲಾ ಮಹಿಳೆಯರಿಗೂ ವಿಮಾ ಸಖಿಯರಾಗಲು (ಇನ್ಷೂರೆನ್ಸ್ ಏಜೆಂಟ್) ಅವಕಾಶ ಸಿಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಆದ್ಯತೆ ಇರುತ್ತದೆ.
ಗ್ರಾಮೀಣ ಭಾಗದಲ್ಲಿ ಇನ್ಷೂರೆನ್ಸ್ ಹೆಚ್ಚು ಜನರನ್ನು ತಲುಪಿಲ್ಲ. ಈ ಕಾರಣಕ್ಕೆ ಈ ಭಾಗದ ಮಹಿಳೆಯರಿಗೆ ವಿಮಾ ತರಬೇತಿ ನೀಡಿ ಅವರನ್ನು ಎಲ್ಐಸಿ ಏಜೆಂಟ್ಗಳಾಗಿ ಮಾಡಿ, ಆ ಮೂಲಕ ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಿಸುವ ಗುರಿ ಸರ್ಕಾರದ್ದಾಗಿದೆ. ಈ ಯೋಜನೆಯಲ್ಲಿ ಮಹಿಳೆಯರಿಗೆ ವಿಮಾ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಆ ಬಳಿಕ ಅವರನ್ನು ಎಲ್ಐಸಿ ಏಜೆಂಟ್ಗಳನ್ನಾಗಿ ಮಾಡಲಾಗುತ್ತದೆ.
ಈ ಯೋಜನೆಯ ಲಿಂಕ್ ಇಲ್ಲಿದೆ: licindia.in/lic-s-bima-sakhi
ಎನ್ಐಸಿ ಬಿಮಾ ಸಖಿ ಅಥವಾ ಮಹಿಳಾ ಕರಿಯರ್ ಏಜೆಂಟ್ ಆಗಲು ಬಯಸುವ ಮಹಿಳೆಯರ ವಯಸ್ಸು 18ರಿಂದ 70 ವರ್ಷದೊಳಗೆ ಇರಬೇಕು. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬೇಕು.
ಇದನ್ನೂ ಓದಿ: ಆಯುಷ್ಮಾನ್ ಭಾರತ್: ಕೇವಲ 40 ದಿನದಲ್ಲಿ 25 ಲಕ್ಷ ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
ತರಬೇತಿ ಅವಧಿ ಮೂರು ವರ್ಷ ಇರುತ್ತದೆ. ಮೊದಲ ವರ್ಷದಂದು ತಿಂಗಳಿಗೆ 7,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಎರಡನೇ ವರ್ಷದಲ್ಲಿ 6,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಮೂರನೇ ವರ್ಷದಲ್ಲಿ 5,000 ರೂ ಮಾಸಿಕ ಸ್ಟೈಪೆಂಡ್ ನಿಡಲಾಗುತ್ತದೆ.
ಇಲ್ಲಿ ಮೊದಲ ವರ್ಷದಲ್ಲಿ ಹೇಳಿಕೊಡಲಾಗುವ ಪಾಲಿಸಿಗಳಲ್ಲಿ ಶೇ. 65ಕ್ಕೂ ಹೆಚ್ಚು ಭಾಗವನ್ನು ಅಭ್ಯರ್ಥಿಗಳು ಕಲಿತಿದ್ದರೆ ಎರಡನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ. ಹಾಗೆಯೇ, ಎರಡನೇ ವರ್ಷದಲ್ಲಿ ಶೇ. 65ಕ್ಕೂ ಹೆಚ್ಚು ಪಾಲಿಸಿಗಳ ಬಗ್ಗೆ ತಿಳಿದಿದ್ದರೆ ಮಾತ್ರ ಮೂರನೇ ವರ್ಷದಲ್ಲಿ ಸ್ಟೈಪೆಂಡ್ ಸಿಗುತ್ತದೆ.
ಮೂರನೇ ವರ್ಷದ ತರಬೇತಿ ವೇಳೆ ನಿಗದಿತ ಗುರಿಯಷ್ಟು ಪಾಲಿಸಿಗಳನ್ನು ಮಾರುವ ಅಭ್ಯರ್ಥಿಗಳಿಗೆ ಕಮಿಷನ್ ಕೂಡ ಸಿಗುತ್ತದೆ.
ಇದನ್ನೂ ಓದಿ: ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ; ಎಐ, ಡ್ರೋನ್ ಇತ್ಯಾದಿ ವಿದ್ಯೆ ಕಲಿಯುತ್ತಿರುವ ಹಿರಿಯ ನಾಗರಿಕರು
ಈ ಯೋಜನೆಯ ಮೊದಲ ಹಂತದಲ್ಲಿ 35,000 ಮಹಿಳೆಯರನ್ನು ಬಿಮಾ ಸಖಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು 50,000 ಮಹಿಳೆಯರನ್ನು ಬಿಮಾ ಸಖಿಗಳಾಗಿ ನೇಮಿಸಿಕೊಳ್ಳುವ ಉದ್ದೇಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ