ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ; ಎಐ, ಡ್ರೋನ್ ಇತ್ಯಾದಿ ವಿದ್ಯೆ ಕಲಿಯುತ್ತಿರುವ ಹಿರಿಯ ನಾಗರಿಕರು

SIDH offers courses to learn various skills: ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಯೋಜನೆ ಅಡಿ ವಿವಿಧ ಕೌಶಲ್ಯಗಳನ್ನು ಕಲಿಸುವ ಕೋರ್ಸ್​ಗಳನ್ನು ನಡೆಸಲಾಗುತ್ತಿದೆ. 50 ವರ್ಷ ಮೇಲ್ಪಟ್ಟ ವಯಸ್ಸಿನ ನಾಲ್ಕು ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ಒಂದು ವರ್ಷದಲ್ಲಿ ಈ ಕೋರ್ಸ್​ಗಳಿಗೆ ಸೇರ್ಪಡೆಯಾಗಿದ್ದಾರೆ. ಎಐ, ಮೆಷೀನ್ ಲರ್ನಿಂಗ್, ಡ್ರೋನ್ ಆಪರೇಶನ್ ಇತ್ಯಾದಿ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಸುವ ಕೋರ್ಸ್​ಗಳಿವೆ.

ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ; ಎಐ, ಡ್ರೋನ್ ಇತ್ಯಾದಿ ವಿದ್ಯೆ ಕಲಿಯುತ್ತಿರುವ ಹಿರಿಯ ನಾಗರಿಕರು
ಸ್ಕಿಲ್ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 09, 2024 | 1:59 PM

ನವದೆಹಲಿ, ಡಿಸೆಂಬರ್ 9: ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಸಚಿವಾಲಯದಿಂದ ನಡೆಸಲಾಗುವ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH) ಉಪಕ್ರಮ ಸಾಕಷ್ಟು ಪರಿಣಾಮಕಾರಿ ಎನಿಸುತ್ತಿದೆ. ಈ ಉಪಕ್ರಮದ ಅಡಿ ವಿವಿಧ ಕೌಶಲ್ಯಗಳ ಕಲಿಕೆಗೆ ವಿವಿಧ ಕೋರ್ಸ್​ಗಳನ್ನು ಆಫರ್ ಮಾಡಲಾಗುತ್ತಿದೆ. ಸಾಕಷ್ಟು ಹಿರಿಯ ನಾಗರಿಕರು ಈ ಕೋರ್ಸ್ ಕಲಿಯುತ್ತಿರುವುದು ಗಮನ ಸೆಳೆಯುವಂತೆ ಮಾಡಿದೆ. ಮೆಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಸಂಸ್ಕರಣೆ ಮೊದಲಾದ ವಿಷಯಗಳಲ್ಲಿನ ಕೋರ್ಸ್​​ಗಳನ್ನು 4,799 ಹಿರಿಯ ನಾಗರಿಕರು ಕಲಿಯುಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಸಿಇಒ ವೇದ್ ಮಣಿ ತಿವಾರಿ ಅವರು ನೀಡಿದ್ದಾರೆ.

‘50 ವರ್ಷಕ್ಕೂ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಇಂಡಸ್ಟ್ರಿ 4.0 ಕೋರ್ಸ್​ಗಳನ್ನು ಎಸ್​ಐಡಿಎಫ್​ನಿಂದ ನಡೆಸಲಾಗುತ್ತಿದೆ. ವೆಬ್ ಡಿಸೈನ್, ಸೈಬರ್ ಸೆಕ್ಯೂರಿಟಿ, ಕಿಸಾನ್ ಡ್ರೋನ್ ನಿರ್ವಹಣೆಯ ಕೋರ್ಸ್​ಗಳು ಈ ವಯಸ್ಕರಲ್ಲಿ ಜನಪ್ರಿಯವಾಗುತ್ತಿವೆ’ ಎಂದು ಎನ್​ಎಸ್​ಡಿಸಿ ಇಂಟರ್ನ್ಯಾಷನಲ್​ನ ಎಂಡಿಯೂ ಆಗಿರುವ ಅವರು ಹೇಳಿದ್ದಾರೆ.

‘ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತವನ್ನು ನಿರ್ಮಿಸಲು ಎಲ್ಲರೂ ಕೂಡ ಜೀವನಪರ್ಯಂತ ಕಲಿಕೆಯಲ್ಲಿ ಇರುವುದು ಅವಶ್ಯಕ’ ಎಂದು ಹೇಳಿದ ವೇದ್ ಮಣಿ ತಿವಾರಿ ಅವರು ಮೂವರು ಸಾಮಾನ್ಯ ಹಿರಿಯ ನಾಗರಿಕರ ನಿದರ್ಶನಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದಿಂದ ಹಾರ್ಡ್​ವೇರ್ ರಫ್ತು ಗಣನೀಯ ಹೆಚ್ಚಳ: ಎಫ್​ಐಇಒ ನಿರೀಕ್ಷೆ

ಅಸ್ಸಾಮ್​ನ ಪಾರ್ಥ ಬರುವಾ ಅವರಿಂದ ಡ್ರೋನ್ ಕಲಿಕೆ…

ಅಸ್ಸಾಮ್​ನ ಜೋರ್ಹತ್​ನಲ್ಲಿ ಕೃಷಿಕನಾಗಿರುವ ಮತ್ತು ಟ್ರಾವಲ್ ಏಜೆನ್ಸಿ ಇಟ್ಟುಕೊಂಡಿರುವ ಪಾರ್ಥ ಬರುವಾ ಎನ್ನುವ 51 ವರ್ಷದ ವ್ಯಕ್ತಿಯು ಕಿಸಾನ್ ಡ್ರೋನ್ ಕೋರ್ಸ್​ ಕಲಿತಿದ್ದಾರೆ. ಇದರಿಂದ ಕೃಷಿ ಕಾರ್ಯದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗಿದೆ. ಹಾಗೆಯೇ, ಅಸ್ಸಾಮ್​ನ ಸೌಂದರ್ಯವನ್ನು ಡ್ರೋನ್​ನಲ್ಲಿ ಸೆರೆ ಹಿಡಿದು ಆ ವಿಡಿಯೋ ತುಣುಗಳನ್ನು ಬಳಸಿ ತಮ್ಮ ಟ್ರಾವೆಲ್ ಏಜೆನ್ಸಿಗೂ ಪುಷ್ಟಿ ನೀಡಲು ಅವರಿಗೆ ಸಾಧ್ಯವಾಗಿದೆ.

ರಾಜಸ್ಥಾನದ 55 ವರ್ಷದ ಪ್ರಫುಲ್ಲಾ ರಾವತ್….

ರಾಜಸ್ಥಾನದ ಝುನಝುನುವಿನಲ್ಲಿ ಐಟಿಐನಲ್ಲಿ ಇನ್ಸ್​ಟ್ರಕ್ಟರ್ ಹಾಗೂ ಫೀಲ್ಡ್ ಟೆಕ್ನೀಶಿಯನ್ ಆಗಿರುವ 55 ವರ್ಷದ ಪ್ರಫುಲ್ಲಾ ರಾವತ್ ಅವರು ಉದ್ದಿಮೆದಾರಿಕೆ ಕೌಶಲ್ಯದ ಕೋರ್ಸ್ ಕಲಿತಿದ್ದಾರೆ. ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವಿಚಾರದಲ್ಲಿ ಅವರಿಗೆ ಸಹಾಯಕವಾಗಿದೆ.

ದಿಲ್ಲಿಯ 54 ವರ್ಷದ ಸಂಜೀವ್ ನಿಗಮ್….

ನವದೆಹಲಿಯ ಅಶೋಕ್ ವಿಹಾರ್​ನಲ್ಲಿ ಹಿರಿಯ ಶಿಕ್ಷಕರಾಗಿರುವ 54 ವರ್ಷದ ಸಂಜೀವ್ ನಿಗಮ್ ಅವರು ಗೂಗಲ್ ಕ್ಲೌಡ್ ಜನರೇಟಿವ್ ಎಐ ಕೋರ್ಸ್ ಕಲಿತಿದ್ದಾರೆ. ಇದರಿಂದ ಅವರ ಪಾಠಗಳಿಗೆ ಸಹಾಯವಾಗುತ್ತಿದೆ.

ಇದನ್ನೂ ಓದಿ: ಭಾರತದ ಸಮಗ್ರ ಬೆಳವಣಿಗೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಿಂದ ಮೆಚ್ಚುಗೆ: ಐಎಂಎಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆವಿ ಸುಬ್ರಮಣಿಯನ್

2023ರ ಸೆಪ್ಟೆಂಬರ್ 13ರಂದು ಆರಂಭವಾದ ಎಸ್​ಐಡಿಎಚ್​ನಿಂದ ಹಿರಿಯ ನಾಗರಿಕರಿಗೆ ಬಹಳ ಅನುಕೂಲವಾಗಿದೆ. ನಿರಂತರ ಕಲಿಕೆ ಇವತ್ತಿನ ದಿನದ ಅನಿವಾರ್ಯ ಮತ್ತು ಅವಶ್ಯಕತೆಯೂ ಹೌದು.

ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಉಪಕ್ರಮದಲ್ಲಿ ಸಾವಿರಾರು ವಿವಿಧ ಕೋರ್ಸ್​ಗಳಿವೆ. ಇಲ್ಲಿಯವರೆಗೆ ಒಂದು ಕೋಟಿಗೂ ಅಧಿಕ ಜನರು ಇದಕ್ಕೆ ನೊಂದಾಯಿಸಿಕೊಂಡಿದ್ದಾರೆ. ಏರೋಸ್ಪೇಸ್, ಕೃಷಿ, ಜವಳಿ, ವಾಹನ, ಬ್ಯಾಂಕಿಂಗ್, ಬ್ಯೂಟಿ, ಕಟ್ಟಡ ನಿರ್ಮಾಣ, ಎಲೆಕ್ಟ್ರಾನಿಕ್ಸ್, ಪ್ಲಂಬಿಂಗ್, ಮೀಡಿಯಾ, ಸೆಕ್ಯೂರಿಟಿ, ಮ್ಯಾನುಫ್ಯಾಕ್ಚರಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕೌಶಲ್ಯಗಳನ್ನು ಕಲಿಸಿಕೊಡುವ ಕೋರ್ಸ್​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ