AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orbit Snooping: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್​ಗಳು ಭಾರತದಿಂದ

India develops capability of orbit snooping: ಭೂ ಕಕ್ಷೆಯಲ್ಲಿ ವಸ್ತುಗಳ ಇಮೇಜ್ ಅನ್ನು ಕರಾರುವಾಕ್ಕಾಗಿ ಸೆರೆಹಿಡಿಯಬಲ್ಲಂತಹ ಸಾಮರ್ಥ್ಯವನ್ನು ಭಾರತದ ಖಾಸಗಿ ಕಂಪನಿಯೊಂದು ತೋರ್ಪಡಿಸಿದೆ. ಅಝಿಸ್ಟಾ ಕಂಪನಿಯ ಎಎಫ್​ಆರ್ ಉಪಗ್ರಹವು ಕೆಲ ದಿನಗಳ ಹಿಂದೆ ಬಾಹ್ಯಾಕಾಶ ನಿಲ್ದಾಣದ ಚಿತ್ರಗಳನ್ನು ಯಶಸ್ವಿಯಾಗಿ ಸೆರೆ ಹಿಡಿದಿತ್ತು. ಇದನ್ನು ಆರ್ಬಿಟ್ ಸ್ನೂಪಿಂಗ್ ಎನ್ನುತ್ತಾರೆ. ಭೂ ಕಕ್ಷೆಯಲ್ಲಿರುವ ಸಾವಿರಾರು ಕೋಟಿ ರೂ ಮೌಲ್ಯದ ಹತ್ತಾರು ಭಾರತೀಯ ಸೆಟಿಲೈಟ್​ಗಳ ರಕ್ಷಣೆಗೆ ಇಂಥ ಸಾಮರ್ಥ್ಯ ಅಗತ್ಯ ಇರುತ್ತದೆ.

Orbit Snooping: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್​ಗಳು ಭಾರತದಿಂದ
ಅಝಿಸ್ಟಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2026 | 1:10 PM

Share

ನವದೆಹಲಿ, ಫೆಬ್ರುವರಿ 8: ಬಾಹ್ಯಾಕಾಶದಲ್ಲಿ ಬೇರೊಂದು ಸೆಟಿಲೈಟ್​ಗಳ ಚಲನವಲನ ಗ್ರಹಿಸುವಂತಹ ಬೇಹುಗಾರಿಕೆ ಸಾಮರ್ಥ್ಯವನ್ನು ಭಾರತ ಪಡೆದಿದೆ. ಗುಜರಾತ್​ನ ಅಹ್ಮಾದಾದ್ ಮೂಲದ ಅಝಿಸ್ಟಾ ಇಂಡಸ್ಟ್ರೀಸ್ ಪ್ರೈ ಲಿ ಸಂಸ್ಥೆ (Azista Industries) ಇಂಥದ್ದೊಂದು ಸಾಮರ್ಥ್ಯ ತನಗಿರುವುದನ್ನು ಸಾಬೀತುಪಡಿಸಿದೆ. ಅದರ ಏರೋಸ್ಪೇಸ್ ವಿಭಾಗವು ಒಂದೇ ಕಕ್ಷೆಯಲ್ಲಿರುವ ಇನ್ನೊಂದು ಸೆಟಿಲೈಟ್​ನ ಇಮೇಜ್​ಗಳನ್ನು ಸೆರೆ ಹಿಡಿಯಬಲ್ಲುದು. ಇನ್ನು ಆರ್ಬಿಟ್ ಸ್ನೂಪಿಂಗ್ (Orbit Snooping) ಎಂದು ಕರೆಯಲಾಗುತ್ತದೆ. ಭಾರತದ ಖಾಸಗಿ ಕಂಪನಿಯೊಂದು ಸ್ವಂತವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿ ಈ ಸಾಧನೆ ಮಾಡಿದ್ದು ಇದೇ ಮೊದಲು.

ಅಝಿಸ್ಟಾ ಸಂಸ್ಥೆಯ 80 ಕಿಲೋ ಭಾರದ ಭೂ ಪರಿವೀಕ್ಷಣಾ ಉಪಗ್ರಹವಾದ ಎಎಫ್​ಆರ್ (AFR – earth observing satellite) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಇಮೇಜ್​ಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಫೆಬ್ರುವರಿ 3ರಂದು ಅಝಿಸ್ಟಾ ನಡೆಸಿದ ಎರಡೂ ಪ್ರಯೋಗಗಳು ಯಶಸ್ವಿಯಾಗಿವೆ.

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಕಕ್ಷೆಯಲ್ಲಿ ಸೆಟಿಲೈಟ್​ಗಳು ಗಂಟೆಗೆ ಸುಮಾರು 50,000 ಕಿಮೀ ವೇಗದಲ್ಲಿ ತಿರುಗುತ್ತಿರುತ್ತವೆ. ಕಕ್ಷೆಯಲ್ಲಿ ಇನ್ನೊಂದು ವಸ್ತುವಿನ ದೃಶ್ಯ ಸೆರೆ ಹಿಡಿಯುವುದು ಕಷ್ಟ. ಅದರಲ್ಲೂ ಸೂರ್ಯನ ಪ್ರಖರ ಬಿಸಿಲು ಇರುವಾಗ ಬಹಳ ಕಷ್ಟ. ಅಝಿಸ್ಟಾದ ಸೆಟಿಲೈಟ್​ನಲ್ಲಿರುವ ಬಹಳ ಸುಧಾರಿತ ಸಾಫ್ಟ್​ವೇರ್ ಮತ್ತು ಕ್ಯಾಮೆರಾಗಳು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ. ಐಎಸ್​ಎಸ್ ಅನ್ನು 245-300 ಕಿಮೀ ದೂರದಿಂದ ಫೋಟೋ ಸೆರೆ ಹಿಡಿಯುವ ಕೆಲಸ ಮಾಡಿದೆ.

ಆರ್ಬಿಟ್ ಸ್ನೂಪಿಂಗ್ ಯಾಕೆ ಮುಖ್ಯ?

ಕಕ್ಷೆಯಲ್ಲಿ ಹಾನಿಕಾರಕವಾಗಬಹುದಾದ ವಸ್ತುಗಳು ಹಾಗೂ ಶತ್ರುಗಳ ಸೆಟಿಲೈಟ್​ಗಳನ್ನು ಗುರುತಿಸಲು ಈ ಸ್ನೂಪಿಂಗ್ ಸಹಾಯಕವಾಗುತ್ತದೆ. ಭಾರತದಿಂದ ಹಲವು ಸಾವಿರಾರು ಕೋಟಿ ರೂ ಮೌಲ್ಯದ ಹಲವು ಸೆಟಿಲೈಟ್​ಗಳು ಕಕ್ಷೆಯಲ್ಲಿ ತಿರುಗುತ್ತಿವೆ. ರಕ್ಷಣೆಯಿಂದ ಹಿಡಿದು ಸಂವಹನದವರೆಗೆ ಮಹತ್ವದ ಕಾರ್ಯಗಳಿಗೆ ಈ ಸೆಟಿಲೈಟ್​ಗಳು ಬಳಕೆ ಆಗುತ್ತಿವೆ. ಶತ್ರು ದೇಶಗಳ ದಾಳಿಯಿಂದಲೋ ಅಥವಾ ಮತ್ತೊಂದರಿಂದಲೂ ಇವುಗಳು ಹಾನಿಯಾಗದಂತೆ ನೋಡಿಕೊಳ್ಳಲು ಕಕ್ಷೆಯಲ್ಲಿ ಕಣ್ಣಿಟ್ಟಿರುವುದು ಬಹಳ ಮುಖ್ಯ. ಹೀಗಾಗಿ, ಆರ್ಬಿಟ್ ಸ್ನೂಪಿಂಗ್ ಅಗತ್ಯ ಎನಿಸುತ್ತದೆ.

ಇದನ್ನೂ ಓದಿ: ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್

ಭಾರತದ ಖಾಸಗಿ ಕಂಪನಿಯೊಂದು ಸ್ವಂತವಾಗಿ ಇಂಥದ್ದೊಂದು ಸಾಮರ್ಥ್ಯ ಅಭಿವೃದ್ಧಿಪಡಿಸಿರುವುದು ಗಮನಾರ್ಹ. ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೂ ತೆರೆಯುವ ಸರ್ಕಾರದ ಕ್ರಮ ಮತ್ತು ಉದ್ದೇಶ ಫಲಕೊಡುತ್ತಿರುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ