AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರಣಾಸಿ’ ಸಿನಿಮಾ ಶೂಟಿಂಗ್​​ನ ಕಷ್ಟದ ಸನ್ನಿವೇಶ ಯಾವುದು: ವಿವರಿಸಿದ ರಾಜಮೌಳಿ

SS Rajamouli movie: ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಅವರ ಜನಪ್ರಿಯತೆ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಏರಿದೆ. ‘ಆರ್​​ಆರ್​​ಆರ್’ ನೋಡಿದ ಕೆಲ ಹಾಲಿವುಡ್ ದಿಗ್ಗಜರೇ ರಾಜಮೌಳಿಗೆ ತಮ್ಮ ಇಂಡಸ್ಟ್ರಿಗೆ ಬಂದು ಬಿಡುವಂತೆ ಆಫರ್ ನೀಡಿದ್ದಾರೆ. ಆದರೆ ರಾಜಮೌಳಿ, ಭಾರತೀಯ ಚಿತ್ರರಂಗದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ. ಇದೀಗ ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುತ್ತಿರುವ ರಾಜಮೌಳಿ, ಇಡೀ ಸಿನಿಮಾದ ಚಿತ್ರೀಕರಣದಲ್ಲಿ ಯಾವ ದೃಶ್ಯಗಳ ಚಿತ್ರೀಕರಣ ಕಷ್ಟಕರವಾಗಿತ್ತು ಎಂದು ವಿವರಿಸಿದ್ದಾರೆ.

‘ವಾರಣಾಸಿ’ ಸಿನಿಮಾ ಶೂಟಿಂಗ್​​ನ ಕಷ್ಟದ ಸನ್ನಿವೇಶ ಯಾವುದು: ವಿವರಿಸಿದ ರಾಜಮೌಳಿ
Ss Rajamouli
ಮಂಜುನಾಥ ಸಿ.
|

Updated on: Feb 08, 2026 | 10:24 PM

Share

ರಾಜಮೌಳಿ (Rajamouli), ಈಗ ವಿಶ್ವದ ಟಾಪ್ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ರಾಜಮೌಳಿ ಸಿನಿಮಾಕ್ಕಾಗಿ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಅವರ ಜನಪ್ರಿಯತೆ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಏರಿದೆ. ‘ಆರ್​​ಆರ್​​ಆರ್’ ನೋಡಿದ ಕೆಲ ಹಾಲಿವುಡ್ ದಿಗ್ಗಜರೇ ರಾಜಮೌಳಿಗೆ ತಮ್ಮ ಇಂಡಸ್ಟ್ರಿಗೆ ಬಂದು ಬಿಡುವಂತೆ ಆಫರ್ ನೀಡಿದ್ದಾರೆ. ಆದರೆ ರಾಜಮೌಳಿ, ಭಾರತೀಯ ಚಿತ್ರರಂಗದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ. ಇದೀಗ ‘ವಾರಣಾಸಿ’ ಸಿನಿಮಾ ನಿರ್ದೇಶನ ಮಾಡುತ್ತಿರುವ ರಾಜಮೌಳಿ, ಇಡೀ ಸಿನಿಮಾದ ಚಿತ್ರೀಕರಣದಲ್ಲಿ ಯಾವ ದೃಶ್ಯಗಳ ಚಿತ್ರೀಕರಣ ಕಷ್ಟಕರವಾಗಿತ್ತು ಎಂದು ವಿವರಿಸಿದ್ದಾರೆ.

‘ವಾರಣಾಸಿ’ ಸಿನಿಮಾವು ಟ್ರಾವೆಲ್ ಅಡ್ವೇಂಚರ್ ಮಾದರಿಯ ಕತೆ ಹೊಂದಿರುವುದಾಗಿ ಈ ಹಿಂದೆಯೇ ರಾಜಮೌಳಿ ಹೇಳಿದ್ದರು. ಸಿನಿಮಾನಲ್ಲಿ ರಾಮಾಯಣದ ಕತೆಯೂ ಸಹ ಇರಲಿದೆ ಎನ್ನಲಾಗಿತ್ತು, ಇದೀಗ ರಾಜಮೌಳಿ ಇದನ್ನು ಖಾತ್ರಿ ಪಡಿಸಿದ್ದು, ಟೀಸರ್​​ನಲ್ಲಿ ಸಹ ರಾಮಾಯಣಕ್ಕೆ ಸಂಬಂಧಿಸಿದ ಕೆಲ ದೃಶ್ಯದ ತುಣುಕುಗಳು ಇವೆ. ಅಸಲಿಗೆ ರಾಮಾಯಣಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣವೇ ರಾಜಮೌಳಿಗೆ ಬಹಳ ಕಷ್ಟವಾಯ್ತಂತೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ‘ರಾಮಾಯಣಕ್ಕೆ ಸಂಬಂಧಿಸಿದ ದೃಶ್ಯಗಳು ಸಿನಿಮಾನಲ್ಲಿವೆ. ಈ ದೃಶ್ಯಗಳು ಸುಮಾರು 25 ನಿಮಿಷಗಳದ್ದಾಗಿದ್ದು, ಆ ದೃಶ್ಯಗಳ ಚಿತ್ರೀಕರಣವೇ ಬಹಳ ಸವಾಲಿನದ್ದು ಮತ್ತು ಅಷ್ಟೇ ಉತ್ಸಾಹಕಾರಿಯೂ ಆಗಿತ್ತು’ ಎಂದು ರಾಜಮೌಳಿ ಹೇಳಿದ್ದಾರೆ. ‘ಆ 25 ನಿಮಿಷದ ದೃಶ್ಯ, ಸಿನಿಮಾನಲ್ಲಿ ಒಂದೇ ಬಾರಿಗೆ ಬರುವುದಿಲ್ಲ ಬದಲಿಗೆ ಹಲವು ಬಾರಿ ಬಂದು ಹೋಗಿ, ಕೊನೆಗೆ ಒಂದು ಅದ್ಭುತ ಆಕ್ಷನ್ ದೃಶ್ಯವಾಗಿ ಮಾರ್ಪಾಡು ಪಡೆಯುತ್ತದೆ. ಹಾಗಾಗಿ ಆ ದೃಶ್ಯಗಳು ಕತೆಯ ಕಾರಣಕ್ಕೆ, ಸಿನಿಮಾ ಕಾರಣಕ್ಕೆ ಬಹಳ ಮಹತ್ವದ್ದು’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ:ಧರಣಿ ಮಾಡುತ್ತಾರಂತೆ ರಾಜಮೌಳಿ: ಎಲ್ಲಿ? ಯಾವ ಕಾರಣಕ್ಕೆ?

ಕೇವಲ 25 ನಿಮಿಷದ ದೃಶ್ಯವಾದರೂ ಅದನ್ನು ಚಿತ್ರೀಕರಣ ಮಾಡಲು ನಾವು ಬರೋಬ್ಬರಿ 60 ದಿನಗಳನ್ನು ತೆಗೆದುಕೊಂಡಿದ್ದೇವೆ. ಭಾರತದ ಹಲವಾರು ಸಿನಿಮಾಗಳು ಮಹಾಭಾರತ ಮತ್ತು ರಾಮಾಯಣದಿಂದ ಸ್ಪೂರ್ತಿ ಪಡೆದಿವೆ. ಆದರೆ ನಾವು ‘ವಾರಣಾಸಿ’ ಸಿನಿಮಾಕ್ಕಾಗಿ ರಾಮಾಯಣದ ಒಂದು ಭಾಗವನ್ನು ಚಿತ್ರೀಕರಣ ಮಾಡಿದ್ದೇವೆ’ ಎಂದಿದ್ದಾರೆ ರಾಜಮೌಳಿ.

‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಿನಿಮಾದ ನಾಯಕಿ. ಪೃಥ್ವಿರಾಜ್ ಸುಕುಮಾರನ್ ಸಿನಿಮಾದ ವಿಲನ್ ಆಗಿ ನಟಿಸಿದ್ದಾರೆ. ಈ ಸಿನಿಮಾ ಭಾರತದ ಬಹುದೊಡ್ಡ ಬಜೆಟ್​​ನ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್​ನ ಪ್ರಮುಖ ಸ್ಟುಡಿಯೋಗಳು ಸಹ ಕೆಲಸ ಮಾಡಿವೆ. ಹಾಲಿವುಡ್​ನ ಕೆಲವು ಖ್ಯಾತ ನಟರು ಸಹ ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು