ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐತಿಹಾಸಿ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪ ಕಾವಲು ಇದೆಯಂತೆ. ಈ ದೇವಸ್ಥಾನದಲ್ಲಿ ಅಪಾರ ಸಂಪತ್ತು ಇದ್ದು, ಸುತ್ತಲೂ ನಾಗಸರ್ಪ ಕಾವಲಿದೆ. ಇದಕ್ಕೆ ಪೂರಕವೆಂಬಂತೆ ದೇವಸ್ಥಾನ ಗರ್ಭಗುಡಿಯಲ್ಲಿ ನಾಗರ ಹಾವಿನ ಪೊರೆ ಪತ್ತೆಯಾಗಿದೆ.
ಗದಗ (ಫೆಬ್ರವರಿ. 08): ಕಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ (Lakkundi) ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಐತಿಹಾಸಿ ಕೋಡಿ ಬಸವಣ್ಣ ದೇವಸ್ಥಾನಕ್ಕೆ ಸರ್ಪ ಕಾವಲು ಇದೆಯಂತೆ. ಈ ದೇವಸ್ಥಾನದಲ್ಲಿ ಅಪಾರ ಸಂಪತ್ತು ಇದ್ದು, ಸುತ್ತಲೂ ನಾಗಸರ್ಪ ಕಾವಲಿದೆ. ಇದಕ್ಕೆ ಪೂರಕವೆಂಬಂತೆ ದೇವಸ್ಥಾನ ಗರ್ಭಗುಡಿಯಲ್ಲಿ ನಾಗರ ಹಾವಿನ ಪೊರೆ ಪತ್ತೆಯಾಗಿದ್ದು, ಗರ್ಭಗುಡಿಯ ಬಲಭಾಗದಲ್ಲಿ ಹಂಡೆ ಆಕಾರದ ಕಲ್ಲು ಪೊದೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದೆ. ಹೀಗಾಗಿ ಇದೇ ಜಾಗದಲ್ಲಿ ಅಪಾರ ನಿಧಿ ಇದೆ ಎನ್ನಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
