ಮುಂದಿನ ದಿನಗಳಲ್ಲಿ ಭಾರತದಿಂದ ಹಾರ್ಡ್ವೇರ್ ರಫ್ತು ಗಣನೀಯ ಹೆಚ್ಚಳ: ಎಫ್ಐಇಒ ನಿರೀಕ್ಷೆ
India's hardware exports: ಭಾರತದಿಂದ ಕಟ್ಟಡ ನಿರ್ಮಾಣ ಸಾಮಗ್ರಿ ಸೇರಿದಂತೆ ಹಾರ್ಡ್ವೇರ್ ಉತ್ಪನ್ನಗಳ ರಫ್ತು ಗಣನೀಯವಾಗಿ ಹೆಚ್ಚುತ್ತಿದೆ ಎಂದು ಎಫ್ಐಇಒ ಅಧ್ಯಕ್ಷ ಅಶ್ವನಿ ಕುಮಾರ್ ಹೇಳಿದ್ದಾರೆ. ಭಾರತದ ಆರ್ಥಿಕತೆಯ ಸ್ಥಿರ ಬೆಳವಣಿಗೆ ಮುಂದುವರಿಯುತ್ತಿರುವುದು ಹಾರ್ಡ್ವೇರ್ ಹಾಗೂ ನಿರ್ಮಾಣ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ ಎಂದು ಅಜಯ್ ಸಹಾಯ್ ಹೇಳಿದ್ದಾರೆ.
ನವದೆಹಲಿ, ಡಿಸೆಂಬರ್ 9: ಹಾರ್ಡ್ವೇರ್ ರಫ್ತು ಕ್ಷೇತ್ರದಲ್ಲಿ ಭಾರತ 2023ರಲ್ಲಿ ಶೇ. 15ರಷ್ಟು ಬೆಳವಣಿಗೆ ಕಂಡಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟವಾದ ಎಫ್ಐಇಒದ ಅಧ್ಯಕ್ಷ ಅಶ್ವನಿ ಕುಮಾರ್ ಹೇಳಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಹಾರ್ಡ್ವೇರ್ ಸಮಾವೇಶದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಎಫ್ಐಇಒ ಸಿಇಒ ಮತ್ತು ಡೈರೆಕ್ಟರ್ ಜನರಲ್ ಆದ ಅಜಯ್ ಸಹಾಯ್ ಅವರು ಕೂಡ ರಫ್ತಿನಲ್ಲಿ ಭಾರತ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿರುವುದನ್ನು ಅಂಕಿ ಅಂಶಗಳ ಸಮೇತ ತೋರಿಸಿದ್ದಾರೆ.
‘478 ಬಿಲಿಯನ್ ಡಾಲರ್ ಇದ್ದ ಭಾರತದ ರಫ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದ್ದು, ಈಗ 778 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ವರ್ಷಕ್ಕೆ ಶೇ. 8ರ ಸಿಎಜಿಆರ್ನಲ್ಲಿ ರಫ್ತು ಹೆಚ್ಚಳ ಆಗುತ್ತಿದೆ. 2030ರೊಳಗೆ 2 ಟ್ರಿಲಿಯನ್ ಡಾಲರ್ ರಫ್ತು ಗುರಿ ಇಟ್ಟಿರುವ ಭಾರತ ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ರಫ್ತು ಹೆಚ್ಚಳ ಕಾಣಲಿದೆ. ಶೇ. 14ರ ಸಿಎಜಿಆರ್ನಲ್ಲಿ ರಫ್ತು ಹೆಚ್ಚುವ ನಿರೀಕ್ಷೆ ಇದೆ’ ಎಂದು ಅಜಯ್ ಸಹಾಯ್ ಅಭಿಪ್ರಾಯಪಟ್ಟಿದ್ದಾರೆ.
2027ರೊಳಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿರುವ ಭಾರತದ ಬೆಳವಣಿಗೆಗೆ ಸರ್ಕಾರದ ನೀತಿಗಳು ಹಾಗೂ ಯುವಜನರ ಶಕ್ತಿಯು ಪುಷ್ಟಿ ನೀಡಿವೆ ಎಂದು ಅಶ್ವನಿ ಕುಮಾರ್ ಹೇಳಿದ್ದಾರೆ.
‘ಭಾರತದ ಆರ್ಥಿಕತೆಯ ಸ್ಥಿರ ಬೆಳವಣಿಗೆ ಮುಂದುವರಿಯುತ್ತಿರುವುದು ಹಾಗೂ ಇನ್ಫ್ರಾಸ್ಟ್ರಕ್ಚರ್ಗೆ ವೆಚ್ಚ ಹೆಚ್ಚುತ್ತಿರುವುದು ಹಾರ್ಡ್ವೇರ್ ಹಾಗೂ ನಿರ್ಮಾಣ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ,’ ಎಂದು ಕೋಲ್ನ್ಮೆಸ್ಸೆ ಸಂಸ್ಥೆಯ ಎಂಡಿ ಮಿಲಿಂದ್ ದೀಕ್ಷಿತ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಗ್ಗದ ವಸತಿ, ಐಷಾರಾಮಿ ಅಪಾರ್ಟ್ಮೆಂಟ್, ಎರಡೂ ಭರ್ಜರಿ ಮಾರಾಟ; ಬೆಂಗಳೂರಿನಲ್ಲೂ ದಾಖಲೆ ಸೇಲ್ಸ್
ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಹಾರ್ಡ್ವೇರ್ ಫೇರ್ ಕಾರ್ಯಕ್ರಮವನ್ನು ಕೋಲ್ನ್ಮೆಸ್ಸೆ ಸಂಸ್ಥೆಯೇ ಆಯೋಜಿಸಿದ್ದು. ಚೀನಾ, ಕೊರಿಯಾ, ಇಟಲಿ, ತೈವಾನ್ ಮೊದಲಾದ ದೇಶಗಳಿಂದ 250 ಪ್ರದರ್ಶಕರು, 35ಕ್ಕೂ ಹೆಚ್ಚು ದೇಶಗಳಿಂದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ