ದೆಹಲಿ: ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯು (Commercial LPG Cylinder Price) ಇಂದಿನಿಂದ (ಜೂನ್ 1) ₹ 135 ಕಡಿಮೆಯಾಗಲಿದೆ. ಕಳೆದ ಮೇ 1ರಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ₹ 100 ಹೆಚ್ಚಿಸಲಾಗಿತ್ತು. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಕಡಿತವಾಗುವುದರೊಂದಿಗೆ 19 ಕೆಜಿ ತೂಕದ ಸಿಲಿಂಡರ್ ಬೆಲೆಯು ದೆಹಲಿಯಲ್ಲಿ ಇದೀಗ ₹ 2219ಕ್ಕೆ ಮಾರಾಟವಾಗಲಿದೆ. ಈವರೆಗೆ ವಾಣಿಜ್ಯ ಸಿಲಿಂಡರ್ ಬೆಲೆಯು ₹ 2354 ಇತ್ತು. ಅದೇ ರೀತಿ ಮುಂಬೈನಲ್ಲಿ ₹ 2306ಕ್ಕೆ ಬದಲಾಗಿದೆ ಮುನ್ನು ಮುಂದೆ ₹ 2171.50ಗೆ ವಾಣಿಜ್ಯ ಬಳಕೆ ಸಿಲಿಂಡರ್ ಸಿಗಲಿದೆ. ಕೊಲ್ಕತ್ತಾದಲ್ಲಿ ₹ 2322, ಚೆನ್ನೈನಲ್ಲಿ ₹ 2507ಕ್ಕೆ ವಾಣಿಜ್ಯ ಬಳಕೆ ಸಿಲಿಂಡರ್ ಮಾರಾಟವಾಗುತ್ತಿದೆ.
19 ಕೆಜಿ ತೂಗುವ ವಾಣಿಜ್ಯ ಬಳಕೆ ಸಿಲಿಂಡರ್ಗಳ ಬೆಲೆಯನ್ನು ಏಪ್ರಿಲ್ 1ರಂದು ಪೆಟ್ರೋಲಿಯಂ ಕಂಪನಿಗಳು ₹ 250 ಹೆಚ್ಚಿಸಿತ್ತು. ಅದಕ್ಕೂ ಮೊದಲು ಮಾರ್ಚ್ 1ರಂದು ₹ 105 ಹೆಚ್ಚಿಸಲಾಗಿತ್ತು.
ಈ ನಡುವೆ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳು ದೇಶದ ವಿವಿಧೆಡೆ 5,000 ಎಲ್ಪಿಜಿ ಪಂಚಾಯಿತಿಗಳನ್ನು ಆಯೋಜಿಸುವ ಮೂಲಕ ಉಜ್ವಲ ದಿವಸ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಎಲ್ಪಿಜಿ ಬಳಕೆಯ ಸುಸ್ಥಿರ ಮತ್ತು ಸುರಕ್ಷಿತ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಹೆಚ್ಚು ಜನರು ಎಲ್ಪಿಜಿ ಬಳಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸುವುದು ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಆರ್ಥಿಕ ಉನ್ನತಿಯ ಅನುಕೂಲಗಳನ್ನು ಕಲ್ಪಿಸಿಕೊಡುವುದು ‘ಪ್ರಧಾನ ಮಂತ್ರಿ ಉಜ್ವಲ ಯೋಜನಾ’ದ ಉದ್ದೇಶವಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Wed, 1 June 22