HDFC Bank: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.

ಬ್ಯಾಂಕ್ ಗ್ರಾಹಕರ ಖಾತೆಗೆ ತಪ್ಪಾಗಿ 1300 ಕೋಟಿ ರೂಪಾಯಿಯನ್ನು ಎಚ್​ಡಿಎಫ್​ಸಿ ಬ್ಯಾಂಕ್​ನ ಟಿ ನಗರ್​ ಶಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಈ ವಿಚಿತ್ರ ಘಟನೆ ವಿವರ ಇಲ್ಲಿದೆ.

HDFC Bank: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 01, 2022 | 1:54 PM

ನಿಮ್ಮ ಸಂಬಳ ಬಂದಿದೆಯಾ ಅಂತ ಬ್ಯಾಂಕ್​ ಅಕೌಂಟ್​ ಬ್ಯಾಲೆನ್ಸ್​ ಹಾಗೇ ಸುಮ್ಮನೆ ಚೆಕ್ ಮಾಡಿಕೊಳ್ಳುವಾಗ 13 ಕೋಟಿ ರೂಪಾಯಿ ಅಂತ ಹಾಗೇ ಕಂಡರೆ ಏನು ಮಾಡ್ತೀರಾ? ಉತ್ತರವನ್ನು ನೀವೇ ಮನಸ್ಸಿನಲ್ಲಿ ಹೇಳಿಕೊಂಡು ಸಂತೋಷ ಪಡಿ. ಚೆನ್ನೈನ ಎಚ್​ಡಿಎಫ್​ಸಿ ಬ್ಯಾಂಕ್​ನ (HDFC Bank) 100 ಗ್ರಾಹಕರ ಖಾತೆಗಳಿಗೆ ಭಾನುವಾರದಂದು ಈ ರೀತಿ ತಪ್ಪಾಗಿ ಜಮೆ ಆಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಟಿ. ನಗರ್ ಶಾಖೆಯ 100 ಖಾತೆಗಳಿಗೆ 1 ಸಾವಿರ ರೂಪಾಯಿಯಿಂದ ತಲಾ 13 ಕೋಟಿ ರೂಪಾಯಿ ತನಕ ಮೊತ್ತ ಬಂದಿದೆ. ಹೀಗೆ ಬಂದಿರುವುದೇ ಒಟ್ಟು ಮೊತ್ತ 1300 ಕೋಟಿ ರೂಪಾಯಿ ಆಗಿದೆ. ಮಾರನೇ ದಿನ ಅದೇ ರೀತಿ 23.8 ಕೋಟಿ ರೂಪಾಯಿ ಮೊತ್ತ ಹೋಗಿದೆ. ಅದರಲ್ಲಿ 18 ಕೋಟಿ ರೂಪಾಯಿ ಒಬ್ಬ ವ್ಯಕ್ತಿಯ ಖಾತೆಗೆ ಜಮೆ ಆಗಿದೆ.

ಈ ಅನುಮಾನಾಸ್ಪದ ವಹಿವಾಟಿನಲ್ಲಿ ಸಿಬ್ಬಂದಿ ಒಳಗೊಂಡಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಮೇ 28ನೇ ತಾರೀಕಿನ, ಅಂದರೆ ಶನಿವಾರ ರಾತ್ರಿ ಮಾಮೂಲಿಯಾದ ಸಾಫ್ಟ್​ವೇರ್​ ಅಪ್​ಡೇಟ್​ ಮಾಡಿದ ಮೇಲೆ ಬ್ಯಾಂಕ್​ ಗ್ರಾಹಕರಿಗೆ ತಪ್ಪಿನ ಸಂದೇಶ ಬಂದಿದೆ. ಈ ಘಟನೆ ಬಗ್ಗೆ ತನಿಖೆ ನಡೆಯಬೇಕು ಎಂದು ಆಲ್​ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು ಎಂದು ಆದಾಯ ತೆರಿಗೆ ಇಲಾಖೆಯಿಂದ ವಿವರಣೆ ಕೇಳಿದರೆ ಉತ್ತರ ಹೇಳುವುದು ಕಷ್ಟವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕಂಪ್ಯೂಟರೈಸ್ಡ್ ಸಿಸ್ಟಮ್​ ಭದ್ರತೆ ಉತ್ತಮವಾಗಿರಬೇಕು ಎಂದು ವೆಂಕಟಾಚಲಂ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬ್ಯಾಂಕ್ ಹೇಳಿರುವ ಪ್ರಕಾರ, 100 ಖಾತೆಗಳಿಗೆ ತಪ್ಪಾದ ವಹಿವಾಟು ಆಗಿರುವುದು ಕಂಡುಬಂದಿದೆ. ಆದರೆ ನಿಖರವಾಗಿ ಎಷ್ಟು ಮೊತ್ತ ಎಂಬುದು ತಿಳಿದುಬಂದಿಲ್ಲ. ಎಚ್​ಡಿಎಫ್​ಸಿ ವಕ್ತಾರರು ಹೇಳಿದಂತೆ, ಪೂರ್ವಭಾವಿ ಪತ್ತೆ ನಂತರ ನಿರ್ದಿಷ್ಟ ಖಾತೆಗಳಲ್ಲಿ ಡೆಬಿಟ್ ಬ್ಲಾಕ್ ಅನ್ನು ಇರಿಸಲಾಗಿದೆ. ಈ ಬ್ಲಾಕ್‌ಗಳಲ್ಲಿ ಹೆಚ್ಚಿನವುಗಳನ್ನು ತೆಗೆದುಹಾಕಲಾಗಿದೆ ಮತ್ತು ಉಳಿದವುಗಳನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Money Sent to Wrong Account: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಹೀಗೆ ಮಾಡಿದ್ರೆ ತಕ್ಷಣ ಹಣ ವಾಪಾಸ್