HDFC Bank: ಡಿಜಿಟಲ್​ ಆರಂಭವೂ ಸೇರಿದಂತೆ ಎಚ್​ಡಿಎಫ್​ಸಿ ಬ್ಯಾಂಕ್​ ಮೇಲಿನ ಎಲ್ಲ ನಿರ್ಬಂಧ ತೆರವುಗೊಳಿಸಿದ ಆರ್​ಬಿಐ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಚ್​ಡಿಎಫ್​ಸಿ ಬ್ಯಾಂಕ್​ನ ಮೇಲಿನ ಎಲ್ಲ ನಿರ್ಬಂಧವನ್ನು ತೆಗೆದುಹಾಕಿದೆ ಎಂದು ತಿಳಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

HDFC Bank: ಡಿಜಿಟಲ್​ ಆರಂಭವೂ ಸೇರಿದಂತೆ ಎಚ್​ಡಿಎಫ್​ಸಿ ಬ್ಯಾಂಕ್​ ಮೇಲಿನ ಎಲ್ಲ ನಿರ್ಬಂಧ ತೆರವುಗೊಳಿಸಿದ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 13, 2022 | 8:39 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ತನ್ನ ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿ ಬ್ಯಾಂಕ್‌ನ ಹೊಸ ಡಿಜಿಟಲ್ ವ್ಯವಹಾರ-ಸೃಷ್ಟಿಸುವ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆಗೆದಿದೆ ಎಂದು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. “ಆರ್‌ಬಿಐ ಮಾರ್ಚ್ 11, 2022ರ ಪತ್ರವನ್ನು ಬ್ಯಾಂಕ್​ನ ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ಯೋಜಿಸಲಾದ ವ್ಯಾಪಾರ ಸೃಷ್ಟಿಸುವ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆಗೆದಿದೆ. ನಿರ್ದೇಶಕರ ಮಂಡಳಿ ಸದಸ್ಯರು ಆರ್‌ಬಿಐ ಪತ್ರವನ್ನು ಗಮನಿಸಿದ್ದಾರೆ,” ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಹೇಳಿದೆ. ಶುಕ್ರವಾರದಂದು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಎನ್‌ಎಸ್‌ಇಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡು, ರೂ. 1,396ಕ್ಕೆ ತಲುಪಿದವು. ಆರ್‌ಬಿಐ ಶಿಫಾರಸುಗಳ ಅನುಸಾರವಾಗಿಯೇ ಅತ್ಯುನ್ನತ ಮಾನದಂಡಗಳ ನಿರಂತರವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದೆ.

“ಗ್ರಾಹಕರ ಬದಲಾಗುತ್ತಿರುವ ಡಿಜಿಟಲ್ ಅವಶ್ಯಕತೆಗಳನ್ನು ಪೂರೈಸಲು ನಾವು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಯೋಜನೆಗಳನ್ನು ರೂಪಿಸಲು ಈ ಸಮಯವನ್ನು ಬಳಸಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ನಾವು ಈ ಉಪಕ್ರಮಗಳನ್ನು ಹೊರತರುತ್ತೇವೆ. ನಮ್ಮ ಗ್ರಾಹಕರಿಗೆ ಸಂಪೂರ್ಣ ಅತ್ಯುತ್ತಮ ದರ್ಜೆಯ ಸೇವೆಗಳನ್ನು ನೀಡಲು ಮತ್ತೊಮ್ಮೆ ಸಾಧ್ಯವಾಗುತ್ತದೆ ಎಂದು ನಾವು ಸಂತೋಷಪಡುತ್ತೇವೆ. ಮತ್ತು ಅವರಿಗೆ ಸಮರ್ಪಣೆ ಮತ್ತು ನಮ್ರತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ,” ಎಂದು ಅದು ಹೇಳಿದೆ.

2020ರ ಡಿಸೆಂಬರ್​ನಲ್ಲಿ ಆರ್​ಬಿಐನಿಂದ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಸೂಚನೆ ನೀಡಿ, ಮುಂಬರುವ ಡಿಜಿಟಲ್ ವ್ಯಾಪಾರ-ಸೃಷ್ಟಿಸುವ ಚಟುವಟಿಕೆಗಳ ಎಲ್ಲ ಆರಂಭವನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರ ಸೇರ್ಪಡೆಯನ್ನು ನಿಲ್ಲಿಸಲು ತಿಳಿಸಿತ್ತು. ಎಚ್​ಡಿಎಫ್​ಸಿ ಬ್ಯಾಂಕ್‌ನ ಡೇಟಾ ಸೆಂಟರ್‌ನಲ್ಲಿ ಪದೇ ಪದೇ ವ್ಯತ್ಯಯ ಆದ ನಂತರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತು. ಅಲ್ಲದೆ, ಲೋಪದೋಷಗಳನ್ನು ಪರಿಶೀಲಿಸಲು ಮತ್ತು ಉತ್ತರದಾಯಿತ್ವವನ್ನು ಸರಿಪಡಿಸಲು ಆರ್‌ಬಿಐನಿಂದ ಬ್ಯಾಂಕ್ ಮಂಡಳಿಗೆ ಸೂಚಿಸಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್‌ಬಿಐನಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೇಲೆ ಇದ್ದ ನಿರ್ಬಂಧವನ್ನು ಭಾಗಶಃ ತೆಗೆದು, ಹೊಸ ಕ್ರೆಡಿಟ್ ಕಾರ್ಡ್‌ ನೀಡುವುದನ್ನು ಪುನರಾರಂಭಿಸಲು ಅನುಮತಿಸಿತ್ತು. ಈ ರೀತಿ ಭಾಗಶಃ ನಿರ್ಬಂಧಗಳನ್ನು ತೆಗೆದ ಮೇಲೆ ದಾಖಲೆ ಪ್ರಮಾಣದಲ್ಲಿ ಕ್ರೆಡಿಟ್​ ಕಾರ್ಡ್​ಗಳನ್ನು ನೀಡಿರುವುದಾಗಿ ಎಚ್​ಡಿಎಫ್​ಸಿ ಬ್ಯಾಂಕ್ ಹೇಳಿದೆ.

ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರು ಮತ್ತು ಡಿಜಿಟಲ್ ಬಿಡುಗಡೆ ಮೇಲಿನ ನಿರ್ಬಂಧದ ಸಮಯದಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಬಹಳಷ್ಟು ನೆಲೆಯನ್ನು ಕಳೆದುಕೊಂಡಿದೆ. ಆದರೆ ನಿರ್ಬಂಧಗಳನ್ನು ತೆಗೆದ ನಂತರ ಎಚ್​ಡಿಎಫ್​ಸಿ ಬ್ಯಾಂಕ್​ ಹೊಸ ಗ್ರಾಹಕರನ್ನು ಸೆಳೆಯುವ ತನ್ನ ಪ್ರಯತ್ನಗಳನ್ನು ದ್ವಿಗುಣಗೊಳಿಸಿದೆ. ಡಿಜಿಟಲ್ ವ್ಯವಹಾರ-ಸೃಷ್ಟಿಸುವ ನಿರ್ಬಂಧಗಳನ್ನು ತೆಗೆದುಹಾಕುವುದು ಮುಂದಿನ ಕೆಲವು ತಿಂಗಳಲ್ಲಿ ಬ್ಯಾಂಕ್‌ಗೆ ಉತ್ತಮ ಬೆಳವಣಿಗೆ ಆಗಿದೆ ಮತ್ತು ಬ್ಯಾಂಕ್ ಹೊಸ ಡಿಜಿಟಲ್ ಆರಂಭಗಳನ್ನು ಆಕ್ರಮಣಕಾರಿಯಾಗಿ ಮುಂದುವರಿಸಬಹುದು.

ಇದನ್ನೂ ಓದಿ: UPI For Feature Phones: ಫೀಚರ್​ ಫೋನ್​ ಯುಪಿಐಗೆ ಚಾಲನೆ ನೀಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್