AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Digital Outage: ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ವ್ಯತ್ಯಯ ಬಗ್ಗೆ ಎಸ್‌ಬಿಐನ ಕೆಲವು ಗ್ರಾಹಕರಿಂದ ದೂರು

ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ ಮೊಬೈಲ್​ ಪ್ಲಾಟ್​ಫಾರ್ಮ್​ ಡಿಜಿಟಲ್​ ವ್ಯತ್ಯಯದ ಬಗ್ಗೆ ಗ್ರಾಹಕರು ದೂರನ್ನು ನೀಡಿದ್ದಾರೆ. ಆ ಬಗ್ಗೆ ವಿವರಗಳು ಇಲ್ಲಿವೆ.

SBI Digital Outage: ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್ ವ್ಯತ್ಯಯ ಬಗ್ಗೆ ಎಸ್‌ಬಿಐನ ಕೆಲವು ಗ್ರಾಹಕರಿಂದ ದೂರು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 12, 2022 | 10:45 PM

Share

ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಕೆಲವು ಗ್ರಾಹಕರು ಮಾರ್ಚ್ 12ರಂದು ಬ್ಯಾಂಕ್​ನ ಇಂಟರ್​ನೆಟ್ ಬ್ಯಾಂಕಿಂಗ್ ಚಾನೆಲ್‌ಗಳು ಮತ್ತು ಅದರ ಅಪ್ಲಿಕೇಷನ್‌ಗಳಲ್ಲಿ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 12ರಂದು ತಮ್ಮ ಅಪ್ಲಿಕೇಷನ್‌ಗಳ ತಂತ್ರಜ್ಞಾನ ಅಪ್​ಗ್ರೇಡ್​ ಮಾಡಲಾಗುವುದು ಎಂದು ಎಸ್​ಬಿಐ ಟ್ವೀಟ್ ಮಾಡಿತ್ತು. ಮಾರ್ಚ್ 12ರಂದು ರಾತ್ರಿ 11.30 ಮತ್ತು ಮಾರ್ಚ್ 13ರಂದು ಬೆಳಿಗ್ಗೆ 2ರ ಮಧ್ಯೆ ಪ್ಲಾಟ್​ಫಾರ್ಮ್​ಗಳು ಬ್ಯಾಂಕ್​ನ ಅಪ್ಲಿಕೇಷನ್‌ಗಳಾದ YONO (ಯೋನೋ), YONO ಲೈಟ್, YONO ಬಿಜಿನೆಸ್​ ಮತ್ತು ಯುಪಿಐಗಳಲ್ಲಿ ತಂತ್ರಜ್ಞಾನ ಅಪ್​ಡೇಟ್​ಗಳು ನಡೆಯುವುದರಿಂದ ಅವುಗಳ ಸೇವೆಗಳಿಗೆ ಅಡ್ಡಿ ಆಗಲಿದೆ ಎಂದು ಬ್ಯಾಂಕ್ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

ಟ್ವೀಟ್ ಮಾಡಿದ ತಕ್ಷಣ ಹಲವಾರು ಗ್ರಾಹಕರು ಅಪ್ಲಿಕೇಷನ್‌ಗಳು ಮತ್ತು ಇಂಟರ್​ನೆಟ್ ಬ್ಯಾಂಕಿಂಗ್‌ನಲ್ಲಿನ ದೋಷಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮತ್ತು ಕೆಲವರು ಎಂದಿಗೂ ಮಾಡದೇ ಇರುವ ವಹಿವಾಟುಗಳ ನೋಟಿಫಿಕೇಷನ್ ಪಡೆದ ಬಗ್ಗೆ ದೂರಿದ್ದಾರೆ. ಈ ದೋಷದಿಂದ 30,000 ರೂಪಾಯಿ ನಷ್ಟವಾಗಿದೆ ಎಂದು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದಾರೆ. ಹಲವಾರು ಗ್ರಾಹಕರು ಇಂತಹ ಅನಗತ್ಯ ವಹಿವಾಟುಗಳು ಮತ್ತು ಕಡಿತಗಳ ಬಗ್ಗೆ ದೂರು ನೀಡಿದರೆ, ಕೆಲವರು Yono ಅಪ್ಲಿಕೇಷನ್‌ನಲ್ಲಿ ತಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದರ ಕುರಿತು ಪುನರಾವರ್ತಿತ ನೋಟಿಫಿಕೇಷನ್​ಗಳನ್ನು ಪಡೆಯುವ ಬಗ್ಗೆ ದೂರು ನೀಡಿದ್ದಾರೆ. ಕೆಲವರು ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಶುಲ್ಕವನ್ನು ಕಡಿತಗೊಳಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಅಂತಹ ಟ್ವೀಟ್‌ಗಳಿಗೆ ಎಸ್‌ಬಿಐ ಹೆಚ್ಚಾಗಿ ಉತ್ತರಿಸಿದೆ ಮತ್ತು “ಅನನುಕೂಲಕ್ಕಾಗಿ ನಾವು ವಿಷಾದಿಸುತ್ತೇವೆ. ತಾಂತ್ರಿಕ ಸಮಸ್ಯೆಗಳಿಂದಾಗಿ, ಕೆಲವು ಬಳಕೆದಾರರು ತಮ್ಮ Yono Lite ಅಪ್ಲಿಕೇಷನ್‌ನಲ್ಲಿ ತಪ್ಪಾದ ನೋಟಿಫಿಕೇಷನ್​ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ನಮ್ಮ ತಾಂತ್ರಿಕ ತಂಡವು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ. ದಯವಿಟ್ಟು ನಮ್ಮೊಂದಿಗೆ ಸಹಕರಿಸಿ,” ಎಂದಿದೆ. ತಮ್ಮ ಸಹಾಯವಾಣಿ ಸಂಖ್ಯೆಯಿಂದ ತಪ್ಪಾಗಿ ಡೆಬಿಟ್ ಮಾಡಿದರೆ ಫಿಶಿಂಗ್ ದಾಳಿ ಬಗ್ಗೆ ವರದಿ ಮಾಡಲು ಮತ್ತು ಇಮೇಲ್ ಮೂಲಕ ದೂರು ಸಲ್ಲಿಸಲು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.

ಇತ್ತೀಚೆಗೆ ಎಸ್‌ಬಿಐ ತಮ್ಮ ಮೊಬೈಲ್ ಅಪ್ಲಿಕೇಷನ್ ಅನ್ನು ‘ಓನ್ಲಿ ಯೋನೋ’ ಎಂದು ಮರು ಪ್ರಾರಂಭಿಸುವ ಕುರಿತು ಟ್ವೀಟ್ ಮಾಡಿದ್ದು, ಹೆಚ್ಚಿನ ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸಲು ಕ್ಲೌಡ್ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಮತ್ತು ಉತ್ತಮ ಗ್ರಾಹಕ ಅನುಭವಗಳನ್ನು ಖಾತ್ರಿಪಡಿಸುತ್ತದೆ. ಯೋನೋಗೆ ಮಾತ್ರ ಆರ್ಕಿಟೆಕ್ಚರ್ ಮತ್ತು ವಿನ್ಯಾಸಕ್ಕಾಗಿ ಉತ್ತಮ ತಾಂತ್ರಿಕ ಮಾರ್ಗದರ್ಶನವನ್ನು ಪಡೆಯಲು ಬ್ಯಾಂಕ್ ವಿವಿಧ ಸಲಹೆಗಾರರಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ ನಿತಿನ್ ಚುಗ್ ಅವರನ್ನು ಎಸ್‌ಬಿಐ ನೇಮಿಸಿಕೊಂಡಿದ್ದು, ಅವರು ಮೊದಲು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಜಿಟಲ್ ಬ್ಯಾಂಕಿಂಗ್ ವಿಭಾಗವನ್ನು ಮುನ್ನಡೆಸಿದ್ದರು.

ಇದನ್ನೂ ಓದಿ: State Bank Of India: ಎಸ್​ಬಿಐ ಯೋನೋ ಆ್ಯಪ್​ ಮೂಲಕ ಚೆಕ್​ ಪಾವತಿ ನಿಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ