AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Collection: ಮೇ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಶೇ 16ರಷ್ಟು ಕಡಿಮೆಯಾಗಿ ರೂ. 1.41 ಲಕ್ಷ ಕೋಟಿಗೆ ಕುಸಿತ

2022ರ ಮೇ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1.41 ಲಕ್ಷ ಕೋಟಿ ರೂಪಾಯಿ ಆಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿ ಇದೆ. ಸಂಗ್ರಹ ಶೇ 16ರಷ್ಟು ಕಡಿಮೆಯಾಗಿದೆ.

GST Collection: ಮೇ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ ಶೇ 16ರಷ್ಟು ಕಡಿಮೆಯಾಗಿ ರೂ. 1.41 ಲಕ್ಷ ಕೋಟಿಗೆ ಕುಸಿತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 01, 2022 | 7:12 PM

Share

ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಮೇ ತಿಂಗಳಲ್ಲಿ ರೂ. 1.41 ಲಕ್ಷ ಕೋಟಿಗೆ ಕುಸಿದಿದ್ದು, ಏಪ್ರಿಲ್‌ನ ಸಾರ್ವಕಾಲಿಕ ಗರಿಷ್ಠ ರೂ. 1.68 ಲಕ್ಷ ಕೋಟಿಯಿಂದ ಶೇಕಡಾ 16ರಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯವು ಜೂನ್ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ವರ್ಷದಿಂದ ವರ್ಷಕ್ಕೆ ನೋಡಿದಾಗ ಮೇ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹವು ಶೇ 44ರಷ್ಟು ಹೆಚ್ಚಾಗಿದೆ. “ಆರ್ಥಿಕ ವರ್ಷದ ಮೊದಲ ತಿಂಗಳ ಏಪ್ರಿಲ್‌ನ ಆದಾಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮೇ ತಿಂಗಳ ಸಂಗ್ರಹವು ಯಾವಾಗಲೂ ಏಪ್ರಿಲ್‌ನಲ್ಲಿನ ಆದಾಯಕ್ಕಿಂತ ಕಡಿಮೆಯಿರುತ್ತದೆ. ಇದು ಆರ್ಥಿಕ ವರ್ಷದ ಮುಕ್ತಾಯದ ಮಾರ್ಚ್‌ನ ಆದಾಯಕ್ಕೆ ಸಂಬಂಧಿಸಿದೆ,” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

“ಆದರೆ, 2022ರ ಮೇ ತಿಂಗಳಿನಲ್ಲಿಯೂ ಒಟ್ಟು ಜಿಎಸ್‌ಟಿ ಆದಾಯವು 1.40 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ನೋಡುವುದು ಉತ್ತೇಜನಕಾರಿಯಾಗಿದೆ,” ಎಂದು ಅದು ಸೇರಿಸಿದೆ. ಮೇ ತಿಂಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ 25,036 ಕೋಟಿ, ರಾಜ್ಯ ಜಿಎಸ್‌ಟಿ 32,001 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ 73,345 ಕೋಟಿ, ಪರಿಹಾರ ಸೆಸ್ 10,502 ಕೋಟಿ ಇದೆ.

ಮೇ ತಿಂಗಳಲ್ಲಿ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ ರೂ. 27,924 ಕೋಟಿ ಮತ್ತು ರಾಜ್ಯ ಜಿಎಸ್‌ಟಿಗೆ ರೂ. 23,123 ಕೋಟಿ ವಿಲೇವಾರಿ ಮಾಡಿದೆ. ಪರಿಣಾಮವಾಗಿ, ವಿಲೇವಾರಿ ನಂತರದ ತಿಂಗಳ ಒಟ್ಟು ಆದಾಯವು ಕೇಂದ್ರಕ್ಕೆ 52,960 ಕೋಟಿ ರೂ. ಮತ್ತು ರಾಜ್ಯ ಜಿಎಸ್​ಟಿಗೆ 55,124 ಕೋಟಿ ರೂ. ಇದೆ. ಇದು ಸತತ 11ನೇ ತಿಂಗಳಾಗಿದ್ದು, ಒಟ್ಟು ಜಿಎಸ್‌ಟಿ ಸಂಗ್ರಹ ರೂ. 1 ಲಕ್ಷ ಕೋಟಿಯ ಗಡಿ ದಾಟಿದೆ.

ತಿಂಗಳು              ಮೊತ್ತ (ರೂ. ಕೋಟಿಯಲ್ಲಿ) ಮೇ 2022           1,40,885

ಏಪ್ರಿಲ್ 2022     1,67,540

ಮಾರ್ಚ್ 2022   1,42,095

ಫೆಬ್ರವರಿ 2022     1,33,026

ಜನವರಿ 2022       1,40,986

ಡಿಸೆಂಬರ್ 2021   1,29,780

ನವೆಂಬರ್ 2021   1,31,526

ಅಕ್ಟೋಬರ್ 2021  1,30,127

ಸೆಪ್ಟೆಂಬರ್ 2021   1,17,010

ಆಗಸ್ಟ್ 2021          1,12,020

ಜುಲೈ 2021            1,16,393

ಜೂನ್ 2021             92,800

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್