GST Compensation: ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ 86,912 ಕೋಟಿ ರೂಪಾಯಿ ಜಿಎಸ್​ಟಿ ಪರಿಹಾರ ವಿತರಣೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಜಿಎಸ್​ಟಿ ಪರಿಹಾರ ಮೊತ್ತ 86,912 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

GST Compensation: ಕೇಂದ್ರದಿಂದ ರಾಜ್ಯ ಸರ್ಕಾರಗಳಿಗೆ 86,912 ಕೋಟಿ ರೂಪಾಯಿ ಜಿಎಸ್​ಟಿ ಪರಿಹಾರ ವಿತರಣೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:May 31, 2022 | 11:03 PM

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ 86,912 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಅವರಿಗೆ ಪಾವತಿಸಬೇಕಾದ ಎಲ್ಲ ಸರಕು ಮತ್ತು ಸೇವಾ ತೆರಿಗೆ (GST) ಪರಿಹಾರವನ್ನು ವಿಲೇವಾರಿ ಮಾಡಿದೆ. “ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡಲು ಮತ್ತು ತಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಕೇಂದ್ರವು ಮೇ 31ರಂದು ಹೇಳಿಕೆಯಲ್ಲಿ ತಿಳಿಸಿದೆ. ಜಿಎಸ್‌ಟಿ ಪರಿಹಾರ ನಿಧಿಯಲ್ಲಿ ಕೇವಲ 25,000 ಕೋಟಿ ರೂಪಾಯಿ ಲಭ್ಯವಿದ್ದರೂ ಕೇಂದ್ರವು ಸಂಪೂರ್ಣ ಪಾವತಿ ಮಾಡಿದೆ. ಬಾಕಿ ಹಣವನ್ನು ಕೇಂದ್ರದ ಸ್ವಂತ ಸಂಪನ್ಮೂಲಗಳ ಸೆಸ್ ಸಂಗ್ರಹ ಬಾಕಿಯಿಂದ ಪಾವತಿಸಲಾಗಿದೆ.

ರಾಜ್ಯಗಳಿಗೆ ಬಿಡುಗಡೆಯಾದ 86,912 ಕೋಟಿ ರೂಪಾಯಿಗಳಲ್ಲಿ 47,617 ಕೋಟಿ ರೂಪಾಯಿ ಮೌಲ್ಯದ ಪರಿಹಾರ ಜನವರಿವರೆಗೆ ಬಾಕಿಯಿತ್ತು. 21,322 ಕೋಟಿ ರೂಪಾಯಿ ಫೆಬ್ರವರಿ-ಮಾರ್ಚ್‌ಗೆ ಮತ್ತು 17,973 ಕೋಟಿ ರೂಪಾಯಿ ಏಪ್ರಿಲ್-ಮೇ ತಿಂಗಳಿಗೆ ಬಾಕಿ ಇದೆ. ಸದ್ಯದ ನಿಯಮಗಳ ಪ್ರಕಾರ, ಜಿಎಸ್‌ಟಿ ಅಡಿಯಲ್ಲಿನ ಆದಾಯದಲ್ಲಿನ ಯಾವುದೇ ನಷ್ಟಕ್ಕೆ ಜೂನ್ 30ರ ವರೆಗೆ ರಾಜ್ಯಗಳನ್ನು ಸರಿದೂಗಿಸಲು ಕಡ್ಡಾಯಗೊಳಿಸಲಾಗಿದೆ. ಜುಲೈ 1, 2017ರಂದು ಅದರ ಅನುಷ್ಠಾನದ ನಂತರ ಸರ್ಕಾರವು ಶೇ 14ರ ವಾರ್ಷಿಕ ಜಿಎಸ್​ಟಿ ಆದಾಯದ ಬೆಳವಣಿಗೆಯನ್ನು ಊಹಿಸಿತ್ತು. ಆದಾಯ ನಷ್ಟವನ್ನು ರಾಜ್ಯಗಳಿಗೆ ಸರಿದೂಗಿಸಲು, ಸಂಪನ್ಮೂಲಗಳನ್ನು ಸಂಗ್ರಹಿಸಲು ಹಲವಾರು ಐಷಾರಾಮಿ ವಸ್ತುಗಳು ಮತ್ತು ಪಾಪದ ಸರಕುಗಳ (sin products) ಮೇಲೆ ಸೆಸ್ ವಿಧಿಸಲಾಯಿತು.

ಆದರೆ, ನಿಧಾನಗತಿಯ ಆರ್ಥಿಕತೆ ಮತ್ತು ಕೊವಿಡ್-19 ಸಾಂಕ್ರಾಮಿಕವು ಸೆಸ್ ಸಂಗ್ರಹಗಳನ್ನು ಕಡಿಮೆ ಆಗುವಂತೆ ಮಾಡಿತು, ಪರಿಹಾರ ನಿಧಿಯಲ್ಲಿ ಲಭ್ಯವಿರುವ ಹಣ ಮತ್ತು ಬಾಕಿಯ ನಡುವಿನ ಅಂತರವನ್ನು ಹೆಚ್ಚಿಸಿತು. ರಾಜ್ಯಗಳಿಗೆ ಜಿಎಸ್​ಟಿ ಪರಿಹಾರದಲ್ಲಿನ ಕೊರತೆಯನ್ನು ಭರಿಸಲು ಕೇಂದ್ರ ಸರ್ಕಾರವು ಹಣಕಾಸು ವರ್ಷ 2022ರಲ್ಲಿ ರೂ. 1.59 ಲಕ್ಷ ಕೋಟಿ ಮತ್ತು ಹಣಕಾಸು ವರ್ಷ 2021ರಲ್ಲಿ ರೂ. 1.1 ಲಕ್ಷ ಕೋಟಿಗಳನ್ನು ಮಾರುಕಟ್ಟೆಯಿಂದ ಎರವಲು ಪಡೆದುಕೊಂಡಿತು ಮತ್ತು ಅವುಗಳನ್ನು ರಾಜ್ಯಗಳಿಗೆ ವರ್ಗಾಯಿಸಿತು. ಪರಿಹಾರ ಸೆಸ್ 2026ರವರೆಗೆ ಮುಂದುವರಿಯುತ್ತದೆ, ಇದನ್ನು ಸಾಲದ ಬಾಧ್ಯತೆಗಳಿಗೆ ನಿಧಿಗೆ ಬಳಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ; ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದು ₹1.68 ಲಕ್ಷ ಕೋಟಿ: ಹಣಕಾಸು ಸಚಿವಾಲಯ

Published On - 11:03 pm, Tue, 31 May 22

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ