GDP 2021-22ರಲ್ಲಿ ಜಿಡಿಪಿ ದರ ಶೇ.8.7ಕ್ಕೆ ಏರಿಕೆ; 4ನೇ ತ್ರೈಮಾಸಿಕದಲ್ಲಿ ಶೇಕಡಾ 4.1ರಷ್ಟು ಹೆಚ್ಚಳ

TV9 Digital Desk

| Edited By: Rashmi Kallakatta

Updated on:May 31, 2022 | 6:33 PM

ಅಂಕಿಅಂಶಗಳ ಪ್ರಕಾರ ಭಾರತದ  ಆರ್ಥಿಕತೆಯು 2020-21 ರಲ್ಲಿ 6.6 ಶೇಕಡಾ ಕುಸಿದಿದ್ದು, 2021-22 ರಲ್ಲಿ ಶೇ 8.7 ರಷ್ಟು ಏರಿದೆ.

GDP 2021-22ರಲ್ಲಿ ಜಿಡಿಪಿ ದರ ಶೇ.8.7ಕ್ಕೆ ಏರಿಕೆ; 4ನೇ ತ್ರೈಮಾಸಿಕದಲ್ಲಿ ಶೇಕಡಾ 4.1ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ

2021-22 (FY22) ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇಕಡಾ 8.7 ಏರಿಕೆ ಆಗಿದೆ.  ಆದರೆ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ (Q4 FY22) ಜಿಡಿಪಿ ಶೇಕಡಾ 4.1 ರಷ್ಟು ಏರಿಕೆ ಕಂಡಿದೆ.2021-22ರಲ್ಲಿ ಆರ್ಥಿಕತೆಯಲ್ಲಿ ಶೇಕಡಾ 8.9 ರಷ್ಟು ಬೆಳವಣಿಗೆಯಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ 2020-21 (FY21) ನಲ್ಲಿ ಆರ್ಥಿಕತೆಯು -6.6 ಶೇಕಡಾ ಕುಸಿದಿತ್ತು. ಉಕ್ರೇನ್-ರಷ್ಯಾ ಯುದ್ಧದ ಕಾರಣದಿಂದಾಗಿ ಇಂಧನ ದರಗಳು ಮತ್ತು ಖಾದ್ಯ ತೈಲ ಬೆಲೆ ಏರಿಕೆಯ ನಡುವೆ ಜಿಡಿಪಿಯ ಅಂಕಿಅಂಶ ಪ್ರಕಟವಾಗಿದೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧದಿಂದಾಗಿ ಚಿಲ್ಲರೆ ಹಣದುಬ್ಬರ ದರವು ಸತತ ನಾಲ್ಕು ತಿಂಗಳುಗಳವರೆಗೆ ಶೇಕಡಾ 6 ಶೇಕಡಾ ಮಾರ್ಕ್ ದಾಟಿದೆ.

ಅಂಕಿಅಂಶಗಳ ಪ್ರಕಾರ ಭಾರತದ  ಆರ್ಥಿಕತೆಯು 2020-21 ರಲ್ಲಿ 6.6 ಶೇಕಡಾ ಕುಸಿದಿದ್ದು, 2021-22 ರಲ್ಲಿ ಶೇ 8.7 ರಷ್ಟು ಏರಿದೆ. ಎನ್ಎಸ್ಒ ತನ್ನ ಎರಡನೇ ಮುಂಗಡ ಅಂದಾಜಿನಲ್ಲಿ, 2021-22 ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 8.9 ಶೇಕಡಾ ಎಂದು ಅಂದಾಜಿಸಿದೆ. ಚೀನಾ 2022 ರ ಮೊದಲ ಮೂರು ತಿಂಗಳಲ್ಲಿ 4.8 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.

2021-22ರ ಜಿಡಿಪಿಯು ಈ ಡೇಟಾವನ್ನು ಬಿಡುಗಡೆ ಮಾಡುವ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಅಂದಾಜಿಸಿರುವ 8.9 ಶೇಕಡಾ ಬೆಳವಣಿಗೆಗಿಂತ ಕಡಿಮೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೇ 9.5 ಪ್ರತಿಶತ ಜಿಡಿಪಿ ಅಂದಾಜಿಸಿತ್ತು.

ಇದನ್ನೂ ಓದಿ

ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 4.1 ರ ಬೆಳವಣಿಗೆಯು ಈ ಅವಧಿಗೆ ಆರ್​ಬಿಐ ಅಂದಾಜಿಗಿಂತ ಕಡಿಮೆಯಾಗಿದೆ. ಆರ್​​ಬಿಐ  6.1 ಶೇಕಡಾ ಎಂದು ಅಂದಾಜಿಸಿತ್ತು.

ವಾಣಿಜ್ಯ  ವಿಭಾಗದಲ್ಲಿನ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada