Sign In

By signing in or creating an account, you agree with Associated Broadcasting Company's Terms & Conditions and Privacy Policy.

Taxation On Paper Gold: ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ವಿವರಣೆ

ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ವಿವರಣೆ ಈ ಲೇಖನದಲ್ಲಿ ಇದೆ. ಹೂಡಿಕೆ ಮಾಡಿರುವವರು ಹಾಗೂ ಮಾಡಬೇಕೆಂದು ಇರುವವರು ಕಡ್ಡಾಯವಾಗಿ ತಿಳಿಯಬೇಕಾದ ವಿವರ ಇದು.

Taxation On Paper Gold: ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 01, 2022 | 11:11 AM

ಚಿನ್ನ (Gold) ಖರೀದಿಗೂ ಭಾರತೀಯರ ನಂಟಿಗೂ ಹಳೆಯ ನಂಟು. ಹಳದಿ ಲೋಹದ ಮೇಲಿನ ಪ್ರೀತಿಯು ತಲೆಮಾರುಗಳಿಂದ ಕಡಿಮೆ ಆಗಿಲ್ಲ. ಅನೇಕ ಹೂಡಿಕೆದಾರರು ಈಗ ಭೌತಿಕ ಚಿನ್ನಕ್ಕಿಂತ ಕಾಗದ ಅಥವಾ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಕಾರಣ ಪ್ರಾಥಮಿಕವಾಗಿ ಸುರಕ್ಷತೆ ಮತ್ತು ಅನುಕೂಲತೆ. ಚಿನ್ನದಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳಿಗೆ ತೆರಿಗೆ ನಿಯಮಗಳು ಸಹ ವಿಭಿನ್ನವಾಗಿವೆ. ಚಿನ್ನದ ಹೂಡಿಕೆಗಳನ್ನು ಭೌತಿಕ ಚಿನ್ನ, ಡಿಜಿಟಲ್ ಚಿನ್ನ ಮತ್ತು ಕಾಗದದ ಚಿನ್ನ ಎಂದು ವರ್ಗೀಕರಿಸಲಾಗಿದೆ. ಆಭರಣಗಳು, ಬಾರ್‌ಗಳು ಮತ್ತು ನಾಣ್ಯಗಳು ಭೌತಿಕ ಚಿನ್ನದ ವರ್ಗದ ಅಡಿಯಲ್ಲಿ ಬರುತ್ತವೆ. ಡಿಜಿಟಲ್ ಚಿನ್ನವು ಮೊಬೈಲ್ ವ್ಯಾಲೆಟ್‌ಗಳ ಮೂಲಕ ಖರೀದಿಸಿದ ಚಿನ್ನವನ್ನು ಒಳಗೊಂಡಿರುತ್ತದೆ. ಕಾಗದದ ಚಿನ್ನವು ಗೋಲ್ಡ್ ಇಟಿಎಫ್‌ಗಳು, ಗೋಲ್ಡ್ ಮ್ಯೂಚುವಲ್ ಫಂಡ್‌ಗಳು ಮತ್ತು ಸವರನ್ ಗೋಲ್ಡ್ ಬಾಂಡ್​ಗಳನ್ನು (SGB) ಒಳಗೊಂಡಿರುತ್ತದೆ. ವಿಷಯ ತಜ್ಞರು ಕಾಗದದ ಚಿನ್ನದ ಮೇಲಿನ ತೆರಿಗೆ ನಿಯಮಗಳನ್ನು ವಿವರಿಸಿದ್ದು, ನಿಮ್ಮ ಬಳಿ ಇರುವ ಕಾಗದ ಸ್ವರೂಪದ ಚಿನ್ನಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಗೋಲ್ಡ್ ಇಟಿಎಫ್‌ಗಳು ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್‌ಗಳ ಮೇಲಿನ ತೆರಿಗೆ

ಚಿನ್ನದ ಇಟಿಎಫ್‌ಗಳು ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್‌ಗಳಿಗೆ ಭೌತಿಕ ಚಿನ್ನದಂತೆಯೇ ತೆರಿಗೆ ವಿಧಿಸಲಾಗುತ್ತದೆ.

ಸವರನ್ ಗೋಲ್ಡ್ ಬಾಂಡ್‌ಗಳ ಮೇಲಿನ ತೆರಿಗೆ (SGBs)

ಸವರನ್ ಗೋಲ್ಡ್ ಬಾಂಡ್​​​ಗಳು ವಿಭಿನ್ನ ತೆರಿಗೆ ನಿಯಮಗಳನ್ನು ಹೊಂದಿವೆ. ಹೂಡಿಕೆದಾರರು ಗೋಲ್ಡ್​ ಬಾಂಡ್​ಗಳಿಂದ ವಾರ್ಷಿಕ ಶೇ 2.5ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಇದನ್ನು ಹೂಡಿಕೆದಾರರ ತೆರಿಗೆಯ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಅನ್ವಯವಾಗುವ ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಸವರನ್​ ಗೋಲ್ಡ್​ ಬಾಂಡ್​​​ಗಳು ಎಂಟು ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿವೆ. ಸವರನ್​ ಗೋಲ್ಡ್​ ಬಾಂಡ್​​​ಗಳಿಂದ ಗಳಿಸುವ ಬಂಡವಾಳ ಲಾಭಗಳು ಮೆಚ್ಯೂರಿಟಿಯವರೆಗೆ ಇಟ್ಟುಕೊಂಡಿದ್ದರೆ ತೆರಿಗೆ ಮುಕ್ತವಾಗಿರುತ್ತದೆ.

ಆದರೆ, ಹೂಡಿಕೆದಾರರು ಐದು ವರ್ಷಗಳ ನಂತರ ಗೋಲ್ಡ್​ ಬಾಂಡ್​ಗಳನ್ನು ಅವಧಿಪೂರ್ವವಾಗಿಯೇ ಪಡೆದುಕೊಳ್ಳಬಹುದು. ನೀವು ಐದರಿಂದ ಎಂಟು ವರ್ಷಗಳ ಮಧ್ಯೆ ಗೋಲ್ಡ್​ ಬಾಂಡ್​ಗಳನ್ನು ರಿಡೀಮ್ ಮಾಡಿದರೆ ಲಾಭವನ್ನು ದೀರ್ಘಾವಧಿಯ ಬಂಡವಾಳ ಲಾಭಗಳೆಂದು (Long Term Capital Gain) ಪರಿಗಣಿಸಲಾಗುತ್ತದೆ. ಇಂಡೆಕ್ಸೇಷನ್ ಪ್ರಯೋಜನದೊಂದಿಗೆ ಶೇ 20.8ರಷ್ಟು (ಸೆಸ್ ಸೇರಿದಂತೆ) ತೆರಿಗೆ ವಿಧಿಸಲಾಗುತ್ತದೆ.

ಹೂಡಿಕೆದಾರರು ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಸವರನ್ ಗೋಲ್ಡ್ ಬಾಂಡ್​ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಮೂರು ವರ್ಷಗಳ ಮೊದಲು ಗೋಲ್ಡ್​ ಬಾಂಡ್​ಗಳನ್ನು ಮಾರಾಟ ಮಾಡಿದರೆ ಬಂಡವಾಳದ ಲಾಭವನ್ನು ಹೂಡಿಕೆದಾರರ ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಅನ್ವಯವಾಗುವ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೆ, ಮೂರು ವರ್ಷಗಳ ನಂತರ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಸವರನ್​ ಗೋಲ್ಡ್ ಬಾಂಡ್​ಗಳನ್ನು ಮಾರಾಟ ಮಾಡುವ ಮೂಲಕ ಹೂಡಿಕೆದಾರರು ಗಳಿಸಿದ ಬಂಡವಾಳ ಲಾಭಗಳು ದೀರ್ಘಾವಧಿಯದ್ದಾಗಿರುತ್ತವೆ ಮತ್ತು ಇಂಡೆಕ್ಸೇಶನ್ ಪ್ರಯೋಜನದೊಂದಿಗೆ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಭೌತಿಕ ಚಿನ್ನದ ಮೇಲೆ ತೆರಿಗೆ

36 ತಿಂಗಳ ಹೋಲ್ಡಿಂಗ್ ಅವಧಿಯ ನಂತರ ಭೌತಿಕ ಚಿನ್ನವನ್ನು ಮಾರಾಟ ಮಾಡಿದರೆ ಬಂಡವಾಳ ಲಾಭವನ್ನು ದೀರ್ಘಾವಧಿ ಬಂಡವಾಳ ಲಾಭಗಳು (LTCG) ಎಂದು ಕರೆಯಲಾಗುತ್ತದೆ. ಇದು ಇಂಡೆಕ್ಸೇಷನ್ ಪ್ರಯೋಜನದೊಂದಿಗೆ 20.8 ಶೇಕಡಾ (ಸೆಸ್ ಸೇರಿದಂತೆ) ತೆರಿಗೆ ವಿಧಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

Published On - 11:11 am, Wed, 1 June 22

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್