AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

GST Revenue Soars to ₹1.94 Lakh Cr in May 2026: ಮೇ 2026 ರಲ್ಲಿ ಭಾರತದ GST ಸಂಗ್ರಹವು ₹1.94 ಲಕ್ಷ ಕೋಟಿ ತಲುಪಿ ಶೇ. 3.2 ರಷ್ಟು ಪ್ರಗತಿ ಕಂಡಿದೆ. ದೇಶೀಯ ವಹಿವಾಟುಗಳ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ. ನಿವ್ವಳ GST ಆದಾಯವೂ ಏರಿಕೆ ಕಂಡಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಒಟ್ಟು ಸಂಗ್ರಹ ₹4.04 ಲಕ್ಷ ಕೋಟಿ ದಾಟಿದೆ. ಇದು ಭಾರತದ ಬಲಿಷ್ಠ ಆರ್ಥಿಕತೆಯನ್ನು ಎತ್ತಿಹಿಡಿಯುತ್ತದೆ.

ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ
ಜಿಎಸ್‌ಟಿImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2026 | 5:05 PM

Share

ನವದೆಹಲಿ, ಜೂನ್ 1: ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಮುನ್ನುಗ್ಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. 2026 ರ ಮೇ ತಿಂಗಳ ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇಕಡಾ 3.2 ರಷ್ಟು ಪ್ರಗತಿ ಸಾಧಿಸಿದ್ದು, ಬರೋಬ್ಬರಿ 1.94 ಲಕ್ಷ ಕೋಟಿ ರೂ ತಲುಪಿದೆ. ದೇಶೀಯ ವಹಿವಾಟುಗಳಲ್ಲಿನ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದು ಈ ದಾಖಲೆಯ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ. ನಿವ್ವಳ ಜಿಎಸ್​ಟಿ (Net GST) ಆದಾಯದಲ್ಲೂ ಏರಿಕೆ ಆಗಿದೆ.

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮೇ 2026 ರ ನಿವ್ವಳ ಆದಾಯ 1.73 ಲಕ್ಷ ಕೋಟಿ ರೂ ಇದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೆಟ್ ಜಿಎಸ್​ಟಿ ಕಲೆಕ್ಷನ್ಸ್​ನಲ್ಲಿ ಶೇಕಡಾ 2.8 ರಷ್ಟು ಹೆಚ್ಚಳ ಆಗಿದೆ.

ಪ್ರಸಕ್ತ ಹಣಕಾಸು ವರ್ಷದ (FY 2026-27) ಒಟ್ಟು ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲಿ (ಏಪ್ರಿಲ್ ಮತ್ತು ಮೇ 2026) ಭಾರತದ ಒಟ್ಟು ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕವಾಗಿದೆ. ಎರಡು ತಿಂಗಳ ಒಟ್ಟು ಗ್ರಾಸ್ ಜಿಎಸ್‌ಟಿ, 4.04 ಲಕ್ಷ ಕೋಟಿ ರೂ ಇದೆ. ಒಟ್ಟು ನಿವ್ವಳ ಜಿಎಸ್‌ಟಿ, 3.54 ಲಕ್ಷ ಕೋಟಿ ರೂ ಇದೆ. ಇವುಗಳಲ್ಲಿ ಕ್ರಮವಾಗಿ ಶೇ. 7.1 ಮತ್ತು 7.2ರಷ್ಟು ಏರಿಕೆ ಆಗಿದೆ.

ಇದನ್ನೂ ಓದಿ: ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?

ಇದಕ್ಕೂ ಮುನ್ನ, ಕಳೆದ ಏಪ್ರಿಲ್ (2026) ತಿಂಗಳಿನಲ್ಲಿ ಭಾರತದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟದ 2.10 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹವಾಗಿ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಆದಾಯದ ವಿಭಜನೆ (Tax Breakdown)

ಮೇ 2026 ರಲ್ಲಿ ಸಂಗ್ರಹವಾದ ಒಟ್ಟು ₹1,94,149 ಕೋಟಿ ಜಿಎಸ್‌ಟಿ ಆದಾಯದ ವಿವಿಧ ವಿಭಾಗಗಳು ಹೀಗಿವೆ:

  • CGST (ಕೇಂದ್ರ ಜಿಎಸ್‌ಟಿ): ₹34,713 ಕೋಟಿ
  • SGST (ರಾಜ್ಯ ಜಿಎಸ್‌ಟಿ): ₹43,001 ಕೋಟಿ
  • IGST (ಸಮಗ್ರ ಜಿಎಸ್‌ಟಿ): ₹1,00,001 ಕೋಟಿ (ಇದರಲ್ಲಿ ಆಮದು ಸರಕುಗಳಿಂದ ಬಂದ ₹45,431 ಕೋಟಿ ಸೇರಿದೆ).
  • Cess (ಸೆಸ್): ₹11,434 ಕೋಟಿ (ಇದರಲ್ಲಿ ಆಮದು ಸರಕುಗಳ ಮೇಲಿನ ₹932 ಕೋಟಿ ಸೆಸ್ ಸೇರಿದೆ).

ಇದನ್ನೂ ಓದಿ: ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ; ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಳ; ನಿಯಮ ಉಲ್ಲಂಘನೆಗೆ ಭಾರಿ ದಂಡ

ಮೇ ತಿಂಗಳ ಈ ಭಾರಿ ಜಿಎಸ್‌ಟಿ ತೆರಿಗೆ ಸಂಗ್ರಹವು ದೇಶದಲ್ಲಿ ವ್ಯಾಪಾರ-ವಹಿವಾಟುಗಳು ಸುಗಮವಾಗಿ ಸಾಗುತ್ತಿರುವುದನ್ನು ಮತ್ತು ತೆರಿಗೆ ಪಾವತಿಯ ನಿಯಮಗಳು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ