AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

Meta brings new algo features in Instagram and Threads: ಮೆಟಾ ಸಂಸ್ಥೆ ತನ್ನ ಎರಡು ಸೋಷಿಯಲ್ ಮೀಡಿಯಾಗಳಾದ ಇನ್​ಸ್ಟಾಗ್ರಾಮ್ ಮತ್ತು ಥ್ರೆಡ್ಸ್ ಆ್ಯಪ್​ಗಳಲ್ಲಿ ಬಳಕೆದಾರರಿಗೆ ಅನುಕೂಲವಾಗುವ ಹೊಸ ಬದಲಾವಣೆ ಮಾಡಿದೆ. ಆ ಆ್ಯಪ್​ಗಗಳಲ್ಲಿ ಅಲ್ಗಾರಿದಂನಲ್ಲಿ ಬದಲಾವಣೆ ಮಾಡಿದೆ. ಥ್ರೆಡ್​ನಲ್ಲಿ ಯುವರ್ ಆಲ್ಗೋ, ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಯುವರ್ ಆಲ್ಗೋರಿದಂ ಫೀಚರ್ ತರುತ್ತದೆ. ಇದರಲ್ಲಿ ಬಳಕೆದಾರರು ಇಚ್ಛಿಸುವ ರೀತಿಯ ವಿಡಿಯೋ, ಪೋಸ್ಟ್ಗಳೇ ಫೀಡ್​ನಲ್ಲಿ ಕಾಣುತ್ತವೆ.

ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್
ಇನ್​​ಸ್ಟಾಗ್ರಾಮ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2026 | 11:57 AM

Share

ನವದೆಹಲಿ, ಜೂನ್ 19: ಮೆಟಾ ಕಂಪನಿಯು ತನ್ನ ಇನ್‌ಸ್ಟಾಗ್ರಾಮ್ (Instagram) ಮತ್ತು ಥ್ರೆಡ್ಸ್ ಆಪ್‌ಗಳಲ್ಲಿ (Threads app) ಬಳಕೆದಾರರಿಗೆ ತಮ್ಮ ಫೀಡ್‌ಗಳನ್ನು ನಿಯಂತ್ರಿಸಲು ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದರಿಂದ ನೀವು ಇನ್​ಸ್ಟಾ ಸ್ಕ್ರೋಲ್ ಮಾಡುವಾಗ ನೀವು ಆಯ್ದುಕೊಂಡ ರೀತಿಯ ಕಂಟೆಂಟ್​ಗಳೇ ಬರುತ್ತಿರುತ್ತವೆ.

ಥ್ರೆಡ್ಸ್‌ನಲ್ಲಿ “ಯುವರ್ ಆಲ್ಗೋ”: ಥ್ರೆಡ್ಸ್ ಆಪ್‌ನಲ್ಲಿ ಯುವರ್ ಆಲ್ಗೋ (Your Algo) ಮೂಲಕ ಬಳಕೆದಾರರು ತಮಗೆ ಯಾವ ವಿಷಯಗಳು ಹೆಚ್ಚು ಬೇಕು ಅಥವಾ ಬೇಡ ಎಂಬುದನ್ನು ಖಾಸಗಿಯಾಗಿ ವಿನಂತಿಸಬಹುದು. ಉದಾಹರಣೆಗೆ, ಕ್ರೀಡೆಗೆ ಸಂಬಂಧಿಸಿದ ಪೋಸ್ಟ್‌ಗಳು ಹೆಚ್ಚು ಬರಲಿ ಮತ್ತು ಒತ್ತಡ ತರುವ ಸುದ್ದಿಗಳು ಕಡಿಮೆಯಾಗಲಿ ಎಂದು ಸೆಟ್ ಮಾಡಬಹುದು. ಈ ಆಯ್ಕೆಯು ಒಂದು ದಿನದಿಂದ ಒಂದು ವಾರದವರೆಗೆ ಸಕ್ರಿಯವಾಗಿರುತ್ತದೆ.

ಇದನ್ನೂ ಓದಿ: ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ

ಇನ್‌ಸ್ಟಾಗ್ರಾಮ್‌ನಲ್ಲಿ “ಯುವರ್ ಆಲ್ಗಾರಿದಮ್”: ಇನ್‌ಸ್ಟಾಗ್ರಾಮ್ ಯಾವ ವಿಷಯಗಳ ಆಧಾರದ ಮೇಲೆ ನಿಮಗೆ ಪೋಸ್ಟ್‌ಗಳನ್ನು ತೋರಿಸುತ್ತಿದೆ ಎಂಬುದನ್ನು ಯುವರ್ ಆಲ್ಗಾರಿದಮ್ (Your Algorithm) ಈ ವೈಶಿಷ್ಟ್ಯದ ಮೂಲಕ ನೀವು ನೋಡಬಹುದು. ಆಸಕ್ತಿ ಇಲ್ಲದ ವಿಭಾಗಗಳನ್ನು ನೀವೇ ನೇರವಾಗಿ ಬದಲಾಯಿಸಬಹುದು. ಇದು ಫೀಡ್, ಎಕ್ಸ್‌ಪ್ಲೋರ್ ಮತ್ತು ರೀಲ್ಸ್ ಮೂರಕ್ಕೂ ಅನ್ವಯಿಸುತ್ತದೆ.

ಇದುವರೆಗೆ ಸೋಶಿಯಲ್ ಮೀಡಿಯಾ ಆಪ್‌ಗಳು ನೀವು ಲೈಕ್ ಮಾಡಿದ ಅಥವಾ ನೋಡಿದ ಹಳೆಯ ಡೇಟಾವನ್ನು ಇಟ್ಟುಕೊಂಡು ತಾವೇ ಪೋಸ್ಟ್‌ಗಳನ್ನು ಶಿಫಾರಸು ಮಾಡುತ್ತಿದ್ದವು. ಆದರೆ ಇನ್ನು ಮುಂದೆ ಬಳಕೆದಾರರು ನೇರವಾಗಿ ತಮಗೆ ಬೇಕಾದ ಆಸಕ್ತಿಗಳನ್ನು ನಿರ್ಧರಿಸಬಹುದು.

ಇದನ್ನೂ ಓದಿ: ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ

ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ (Adam Mosseri) ಹೇಳುವಂತೆ, ಈ ಎಐ ತಂತ್ರಜ್ಞಾನದಿಂದಾಗಿ ಆಲ್ಗಾರಿದಮ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಗೊಂದಲಗಳು ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ, ನಿಮ್ಮ ಸೋಶಿಯಲ್ ಮೀಡಿಯಾ ಫೀಡ್‌ನಲ್ಲಿ ಏನು ಬರಬೇಕು ಎಂಬುದನ್ನು ಇನ್ನು ಮುಂದೆ ನೀವೇ ನಿರ್ಧರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ