AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಾದ್ಯಂತ 74ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಗಿತಗೊಂಡ ಮೈಕ್ರೋಸಾಫ್ಟ್ 365 ಸೇವೆಗಳು: ತಾಂತ್ರಿಕ ದೋಷಕ್ಕೆ ಕಾರಣ ಇತ್ಯಾದಿ ವಿವ

ವಿಶ್ವದಾದ್ಯಂತ ಸುಮಾರು 74 ದೇಶಗಳಲ್ಲಿ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಬಳಕೆದಾರರು ಇಮೇಲ್ ಮತ್ತು ಆಫೀಸ್ ಅಪ್ಲಿಕೇಶನ್‌ಗಳನ್ನು ಬಳಸಲು ಪರದಾಡುವಂತಾಗಿದೆ. 22 ಗಂಟೆಗಳಾದರೂ ಸಮಸ್ಯೆ ಪೂರ್ಣ ಸರಿಹೋಗಿಲ್ಲ. ಮೈಕ್ರೋಸಾಫ್ಟ್ 365 ಸ್ಯೂಟ್ ಅನ್ನು ಅಳವಡಿಸಿಕೊಂಡಿರುವ ಸಿಸ್ಟಂಗಳಿಗೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಆಗಿದೆ. ಬಹಳ ಜನರಿಗೆ ಹೆಚ್ಚಾಗಿ ಔಟ್​ಲುಕ್ ಇಮೇಲ್ ಸಮಸ್ಯೆಯಾಗಿದೆ.

ವಿಶ್ವದಾದ್ಯಂತ 74ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಗಿತಗೊಂಡ ಮೈಕ್ರೋಸಾಫ್ಟ್ 365 ಸೇವೆಗಳು: ತಾಂತ್ರಿಕ ದೋಷಕ್ಕೆ ಕಾರಣ ಇತ್ಯಾದಿ ವಿವ
ಮೈಕ್ರೋಸಾಫ್ಟ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2026 | 7:33 PM

Share

ನವದೆಹಲಿ, ನವೆಂಬರ್ 13: ವಿಶ್ವಾದ್ಯಂತ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿದ್ದು, ಭಾರತ ಸೇರಿದಂತೆ 74ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರು ಬಾಧಿತರಾಗಿದ್ದಾರೆ. ಮೈಕ್ರೋಸಾಫ್ಟ್ 365 ಆಫೀಸ್ ಸ್ಯೂಟ್​ನ ಔಟ್ಲುಕ್ (Outlook), ಟೀಮ್ಸ್ (Teams) ಮತ್ತು ವರ್ಡ್/ಎಕ್ಸೆಲ್ ಸೇರಿದಂತೆ ಪ್ರಮುಖ ಕ್ಲೌಡ್ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸುವಾಗ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.

ಮೈಕ್ರೋಸಾಫ್ಟ್ ಸ್ಥಗಿತವು ಗುರುವಾರ ಸಂಜೆ 6 ಗಂಟೆಗೆ (ಜಿಎಂಟಿ ಸಮಯ) ಆರಂಭವಾಗಿದ್ದು. ಭಾರತೀಯ ಕಾಲಮಾನದಲ್ಲಿ ಗುರುವಾರ ರಾತ್ರಿ 11:30ಕ್ಕೆ ಮೈಕ್ರೋಸಾಫ್ಟ್ ಔಟೇಜ್ ಶುರುವಾಗಿದೆ. 22 ಗಂಟೆಗಳಾದರೂ ಮೈಕ್ರೋಸಾಫ್ಟ್​ಗೆ ಈ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಕೆಲ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಈ ಸಮಸ್ಯೆ ಸರಿಪಡಿಸಲು 48 ಗಂಟೆ ಕಾಲಾವಕಾಶ ಕೋರಿದೆ ಎನ್ನಲಾಗಿದೆ.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ

ಮೈಕ್ರೋಸಾಫ್ಟ್ 365 ಸಮಸ್ಯೆಗೆ ಕಾರಣವೇನು?

ಸರ್ವರ್​ನಲ್ಲಿ ಉಂಟಾದ ಏರಿಳಿತ ಮತ್ತು ನೆಟ್ವರ್ಕ್ ಸಮಸ್ಯೆಯು ಮೈಕ್ರೋಸಾಫ್ಟ್ 365 ಆಫೀಸ್ ಸ್ಯೂಟ್​ನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಒಂದು ಕಾನ್ಫಿಗರೇಶನ್ ಅಪ್​ಡೇಟ್​ನಿಂದಾಗಿ ಈ ವ್ಯತ್ಯಯ ಆಗಿರಬಹುದು ಎನ್ನಲಾಗಿದೆ.

ಯಾವುದೇ ಹ್ಯಾಕಿಂಗ್, ಅಥವಾ ವೈರಸ್ ಸ್ಥಾಪನೆಯು ಈ ಸಮಸ್ಯೆ ಹಿಂದೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಮೈಕ್ರೋಸಾಫ್ಟ್ ಸಂಸ್ಥೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಾಂತ್ರಿಕ ದೋಷವನ್ನು ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದು, ಹಂತ ಹಂತವಾಗಿ ಸೇವೆಗಳನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಟೀಮ್ಸ್ ಮೀಟಿಂಗ್ಸ್, ಚಾಟ್ಸ್ ಸರ್ವಿಸ್​ಗಳು ಸರಿಗೊಂಡಿವೆ. ಔಟ್​ಲುಕ್ ಇಮೇಲ್ ಸರ್ವಿಸ್​ನ ಸಮಸ್ಯೆ ಉಳಿದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಟಾಟಾ ಗ್ರೂಪ್​ನ ಆರು ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್; ಗ್ರೂಪ್​ನಲ್ಲಿ ಅವರ ಹಿಡಿತಕ್ಕೇನು ಆಗಿಲ್ಲ ಧಕ್ಕೆ

ಸರ್ಕಾರಿ ಚಟುವಟಿಕೆಗಳ ಮೇಲೂ ಪರಿಣಾಮ

ಮೈಕ್ರೋಸಾಫ್ಟ್ 365 ಸ್ಯೂಟ್ ಹಾಕಿಸಿಕೊಂಡಿರುವ ಪ್ರತಿಯೊಬ್ಬರೂ ಕೂಡ ಬಾಧಿತರಾಗಿದ್ದಾರೆ. ಆಸ್ಟ್ರೇಲಿಯಾ, ಬ್ರಿಟನ್ ಮೊದಲಾದ ಹಲವು ದೇಶಗಳ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮೊದಲಾದವು ಈ ಆಫೀಸ್ ಸ್ಯೂಟ್ ಹೊಂದಿವೆ. ಇಮೇಲ್ ಸೇರಿದಂತೆ ಸಂವಹನ ಸೇವೆಗಳು ಸ್ಥಗಿತಗೊಂಡು ಸಮಸ್ಯೆಯಾಗಿದೆ.

ಭಾರತದ ಇಂಡಿಗೋ, ಆಕಾಶ ಏರ್​ಲೈನ್ಸ್ ಸಂಸ್ಥೆಗಳ ಇಮೇಲ್ ಸಪೋರ್ಟ್ ಸರ್ವಿಸ್​ಗಳಿಗೆ ತೊಂದರೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ