Modinomics: ತಲೆತಲೆಮಾರುಗಳಿಗೆ ಲಾಭ ಕೊಡುವ ದೂರದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವುದು ಮೋದಿನಾಮಿಕ್ಸ್

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jun 19, 2023 | 5:33 PM

Meenakshi Lekhi Article: 2014ರ ಬಳಿಕ ದೇಶದಲ್ಲಿ ವಿಭಿನ್ನ ರೀತಿಯ ಆರ್ಥಿಕತೆ ಕೆಲಸ ಮಾಡಲು ಮೊದಲುಗೊಂಡಿತು. ಪಾಕಿಸ್ತಾನ ಇರುವಂತಹ ಸ್ಥಿತಿಗೆ ನಾವು ಸಿಲುಕದಂತೆ ಉಳಿಯಲು ಮೋದಿನಾಮಿಕ್ಸ್ ಕಾರಣವಾಯಿತು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಈ ಲೇಖನದಲ್ಲಿ ಬರೆದಿದ್ದಾರೆ.

Modinomics: ತಲೆತಲೆಮಾರುಗಳಿಗೆ ಲಾಭ ಕೊಡುವ ದೂರದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವುದು ಮೋದಿನಾಮಿಕ್ಸ್
ಮೀನಾಕ್ಷಿ ಲೇಖಿ
Follow us on

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಬ್ಯಾಂಕ್ ಖಾತೆ ದೊರಕಿಸುವ ಪ್ರಯತ್ನಕ್ಕೆ ಕೈಹಾಕಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ಬಳಿಕ ದೇಶದ 120 ಕೋಟಿ ಜನಸಂಖ್ಯೆಯಲ್ಲಿ ಕೇವಲ 12 ಲಕ್ಷ ಬ್ಯಾಂಕ್ ಖಾತೆಗಳು ಮಾತ್ರ ಇದ್ದವು. ನಾಲ್ಕೇ ತಿಂಗಳಲ್ಲಿ 50-53 ಕೋಟಿ ಬ್ಯಾಂಕ್ ಖಾತೆಗಳನ್ನು ನಾವು ಆರಂಭಿಸಿದ್ದೇವೆ. ಝೀರೋ ಬ್ಯಾಲೆನ್ಸ್​ನ ಜನ್ ಧನ್ ಖಾತೆಗಳೆ 48 ಕೋಟಿಯಷ್ಟು ತೆರೆಯಲ್ಪಟ್ಟವು.

ನಮ್ಮ ಈ ಪ್ರಯತ್ನಕ್ಕೆ ಹಲವರು ಪ್ರತಿರೋಧಿಸಿದರು. ಜನರಿಗೆ ಬ್ಯಾಂಕುಗಳಲ್ಲಿ ಹಣ ಇಡಲು ದುಡ್ಡು ಇಲ್ಲ ಎಂದು ಲೇವಡಿ ಮಾಡಿದರು. ಆದರೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ಹಣ ನೇರವಾಗಿ ವರ್ಗಾವಣೆ (Direct Benefit Transfer) ಆಗಲು ಈ ಬ್ಯಾಂಕ್ ಖಾತೆಗಳು ನೆರವಾದವು. ಪಿಎಂ ಉಜ್ವಲ ಯೋಜನೆಯ ಸಬ್ಸಿಡಿ, ಸ್ಕಾಲರ್​ಶಿಪ್ ಹಣ, ಸ್ಟ್ಯಾಂಡಪ್ ಇಂಡಿಯಾ ಸ್ಕೀಮ್​ನಲ್ಲಿ ಮಹಿಳಾ ಫಲಾನುಭವಿಗಳಿಗೆ ಹಣ ಇವೆಲ್ಲವೂ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆದವು.

ಕೇಂದ್ರ 100 ರೂ ಬಿಡುಗಡೆ ಮಾಡಿದರೆ ಫಲಾನುಭವಿಗಳನ್ನು ತಲುಪುತ್ತಿದ್ದುದು ಕೇವಲ 15 ರೂ ಮಾತ್ರ ಎಂದು ಹಿಂದಿನ ಸರ್ಕಾರದ ಜನರೇ ಹೇಳುತ್ತಿದ್ದರು. ಆದರೆ ಈಗ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಡೀ ನೂರು ರುಪಾಯಿಯು ಫಲಾನುಭವಿಯನ್ನು ತಲುಪುತ್ತಿದೆ.

ಇದನ್ನೂ ಓದಿFertilizer Subsidy: ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿದರೆ ರಾಜ್ಯಗಳಿಗೆ ಲಾಭ; ಕೇಂದ್ರದಿಂದ ಮಾಸ್ಟರ್​ಪ್ಲಾನ್

2010ರಲ್ಲಿ ಡಿಜಿಟಲ್ ಪೇಮೆಂಟ್ ಸಿಸ್ಟಂನಲ್ಲಿ ಚೀನಾ ವಿಶ್ವದ ನಂಬರ್ ಒನ್ ಆಗಿತ್ತು. ಈಗ ಡಿಜಿಟಲ್ ಇಂಡಿಯಾದ ಯಶಸ್ಸು ಕಾರಣಕ್ಕೆ ಭಾರತವು ಮುಂಚೂಣಿಗೆ ಬಂದಿದೆ. ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದಾಗ ನಮ್ಮನ್ನು ಅಣಕಿಸಲಾಗಿತ್ತು. ಇವತ್ತು ಶೇ. 44ರಷ್ಟು ಜನರು ಡಿಜಿಟಲ್ ವಹಿವಾಟು ನಡೆಸುತ್ತಾರೆ. 79 ಕೋಟಿ ಭಾರತೀಯರು ಸ್ಮಾರ್ಟ್​ಫೋನ್ ಬಳಸುತ್ತಾರೆ.

ವಿಶ್ವದಲ್ಲೇ ಅತ್ಯಂತ ಕಡಿಮೆಬೆಲೆಗೆ ಇಂಟರ್ನೆಟ್ ಭಾರತದಲ್ಲಿ ಲಭ್ಯ ಇದೆ. ವಿಶ್ವದ ಇತರೆಡೆ 1 ಜಿಬಿ ಡಾಟಾಗೆ 330 ರೂ ಇದ್ದರೆ ಭಾರತದಲ್ಲಿ 10ರೂಗಿಂತ ಕಡಿಮೆಗೆ ಸಿಕ್ಕುತ್ತದೆ. ಲಕ್ಷಾಂತರ ಪಂಚಾಯಿತಿ ಮತ್ತು ಗ್ರಾಮಗಳನ್ನು ಇಂಟರ್ನೆಟ್ ಮೂಲಕ ಬೆಸೆಯಲಾಗಿದೆ. ಇದೆಲ್ಲವೂ ಮೋದಿನಾಮಿಕ್ಸ್ ಅಥವಾ ಮೋದಿ ಅರ್ಥಶಾಸ್ತ್ರ ದೆಸೆಯಿಂದ ಸಾಧ್ಯವಾಗಿದೆ.

ಆದರೆ ನಮಗೆ ಇರುವ ಅತಿದೊಡ್ಡ ಸವಾಲೆಂದರೆ ಅದು ವ್ಯವಸ್ಥೆಯ ಜಡತ್ವ. ಹೊಸ ಬದಲಾವಣೆಗೆ ಹೊಂದಿಕೊಳ್ಳಲು ಜನರಿಗೆ ಸ್ವಲ್ಪ ಸಮಯ ಬೇಕು. ಅದರಲ್ಲೂ ನಿಮಗಿಂತ ಮುಂಚೆ ಅಧಿಕಾರದಲ್ಲಿ ಇದ್ದ ಜನರಿಗೆ ಇದು ಹೆಚ್ಚು ಅನ್ವಯ ಆಗುತ್ತದೆ. ಅವರಿಗೆ ತಾವು ಹೇಳುವುದೇ ಸತ್ಯ ಎಂದು ಭಾವಿಸಿಬಿಡುತ್ತಾರೆ.

ಇದನ್ನೂ ಓದಿAdani Trainman: ಅದಾನಿಯಿಂದ ಟ್ರೈನ್​ಮ್ಯಾನ್ ಖರೀದಿ; ರೈಲ್ವೆ ಇಲಾಖೆ ಆದಾಯಕ್ಕೆ ಹೊಡೆತ ಬೀಳುತ್ತಾ? ಛೇ ಇಲ್ಲ ಎನ್ನುತ್ತಿದೆ ಐಆರ್​ಸಿಟಿಸಿ

ಇದೂವರೆಗೂ ಮುಟ್ಟದೇ ಇರುವುದನ್ನು ತಲುಪುವುದು, ನಿರ್ಲಕ್ಷಿತ ಜನರನ್ನು ಮುಖ್ಯವಾಹಿನಿಗೆ ತರುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ. ಬಂದರು, ರಸ್ತೆ, ವಿಮಾನ ನಿಲ್ದಾಣಗಳಂತಹ ಸೌಕರ್ಯವ್ಯವಸ್ಥೆಗೆ ಮಾಡಲಾಗುವ ಹೂಡಿಕೆಯು ಆರ್ಥಿಕತೆಗೆ ಪುಷ್ಟಿ ಕೊಡುತ್ತದೆ, ಉದ್ಯೋಗಸೃಷ್ಟಿಸುತ್ತದೆ. ದೀರ್ಘಾವಧಿಯಲ್ಲಿ ಇದು ಜನರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ, ಸೇವೆ ಇತ್ಯಾದಿ ಫಲ ದೊರಕಲು ಸಹಾಯವಾಗುತ್ತದೆ. ಹೀಗಾಗಿ, ತಲೆತಲೆಮಾರುಗಳಿಗೆ ಲಾಭವಾಗುವ ದೂರದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವುದು ಮೋದಿನಾಮಿಕ್ಸ್.

ಪಾಕಿಸ್ತಾನ ಇರುವ ಪರಿಸ್ಥಿತಿಯಲ್ಲಿ ಭಾರತ ಇವತ್ತು ಇರಬೇಕಾಗುತ್ತಿತ್ತು. ಅದೃಷ್ಟಕ್ಕೆ 2014ರ ಬಳಿಕ ವಿಭಿನ್ನ ರೀತಿಯ ಆರ್ಥಿಕತೆಯು ನೆಲಸಿತು. ಕಳಪೆ ಆರ್ಥಿಕತೆ ಹೊಂದಿದ್ದ ನಾವು ಈಗ ವಿಶ್ವದ ಅಗ್ರ 5 ಆರ್ಥಿಕತೆಯಲ್ಲಿ ಒಬ್ಬರಾಗಿದ್ದೇವೆ. ಈ ಜಗತ್ತು ಬಹಳ ಅನಿಶ್ಚಿತ ಕಾಲದಲ್ಲಿ ಸಾಗುತ್ತಿದೆ. ಬಹಳ ಕಠಿಣ ಪರಿಸ್ಥಿತಿಯಲ್ಲೂ ಪರಿಹಾರ ಹುಡುಕಲು ಪಿಎಂ ಮೋದಿಗೆ ಚಾಕಚಕ್ಯತೆ ಇದೆ.

ಈ ವಿಶ್ವವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗ ನಾವು ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಮಟ್ಟದ ಲಸಿಕೆಯನ್ನು ತಯಾರಿಸಿದೆವು. ಔಷಧ ತಯಾರಿಸುವ ಸಾಮರ್ಥ್ಯ ಇಲ್ಲದ ಹಲವು ಸಣ್ಣ ದೇಶಗಳಿಗೆ ನಾವು ಲಸಿಕೆ ಕೊಟ್ಟೆವು. ಇದನ್ನು ನಾವು ಮಾರುಕಟ್ಟೆ ಅವಕಾಶವಾಗಿ ಬಳಸಲು ಪ್ರಯತ್ನಿಸಲಿಲ್ಲ. ನಾವು ಇದನ್ನು ಸಹಾಯ ಎಂದು ಕರೆಯದೆ, ಅಭಿವೃದ್ಧಿಪೂರಕ ಸಹಕಾರ ಎಂದು ಕರೆದೆವು. ನಮಗೆ ಸ್ನೇಹದ ಮೌಲ್ಯ ಏನೆಂದು ಗೊತ್ತು. ನಮ್ಮ ಕೋವಿಡ್-19 ರಾಜತಾಂತ್ರಿತೆಯು ಭಾರತದ ತಿರುಳನ್ನು ತೋರಿಸಿತು.

ಲೇಖನ: ಮೀನಾಕ್ಷಿ ಲೇಖಿ, ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯಖಾತೆ ಸಚಿವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ