AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fertilizer Subsidy: ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿದರೆ ರಾಜ್ಯಗಳಿಗೆ ಲಾಭ; ಕೇಂದ್ರದಿಂದ ಮಾಸ್ಟರ್​ಪ್ಲಾನ್

Center Master Plan To Cut Fertilizer Subsidy: ಜೈವಿಕ ಮತ್ತು ಸಾವಯವ ಕೃಷಿಗಾರಿಕೆ ಹೆಚ್ಚಾಗಿ ರಾಸಾಯನಿಕ ರಸಬ್ಬರ ಬಳಕೆ ಕಡಿಮೆ ಆದಲ್ಲಿ ಸಬ್ಸಿಡಿಯಿಂದ ಮಿಗುವ ಶೇ. 50ರಷ್ಟು ಹಣವನ್ನು ರಾಜ್ಯಕ್ಕೆ ಹಂಚಲಾಗುವುದು ಎಂದು ಕೇಂದ್ರ ತಿಳಿಸಿದೆ.

Fertilizer Subsidy: ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿದರೆ ರಾಜ್ಯಗಳಿಗೆ ಲಾಭ; ಕೇಂದ್ರದಿಂದ ಮಾಸ್ಟರ್​ಪ್ಲಾನ್
ರಾಸಾಯನಿಕ ರಸಗೊಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 19, 2023 | 4:32 PM

Share

ನವದೆಹಲಿ: ಮಣ್ಣು ಮತ್ತು ಪರಿಸರಕ್ಕೆ ಹಾನಿ ತರುವ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಪಿಎಂ ಪ್ರಣಾಮ್ (PM PRANAM) ಮತ್ತು ಹೊಸ ಎಂಡಿಎ (MDA) ಸೇರಿದಂತೆ ಮೂರು ಯೋಜನೆಗಳಿಗೆ ಕೇಂದ್ರ ಸಂಪುಟ ಈ ವಾರ ಅನುಮೋದನೆ ಕೊಡಲಿದೆ. ಈ ಮೂರು ಯೋಜನೆಗಳಿಂದ ದೇಶದಲ್ಲಿ ರಾಸಾಯನಿಕ ರಸಗೊಬ್ಬರಕ್ಕೆ ಬಳಕೆ ಕಡಿಮೆ ಆಗುವ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ ಇದೆ. ಈ ಮಧ್ಯೆ, ರಾಸಾಯನಿಕರ ರಸಗೊಬ್ಬರಕ್ಕೆ ಹಿಂದಿನಿಂದಲೂ ಕೊಡುತ್ತಾ ಬರಲಾಗುತ್ತಿರುವ ಸಬ್ಸಿಡಿ ಮುಂದೆಯೂ ಇರಲಿದೆ. ಆದರೆ, ಸಬ್ಸಿಡಿ ಮೊತ್ತವನ್ನು ಕಡಿಮೆಗೊಳಿಸುವ ಗುರಿ ಇಟ್ಟುಕೊಂಡಿದೆ ಸರ್ಕಾರ. ಪಿಎಂ ಪ್ರಣಾಮ್, ಎಂಡಿಎ ಮತ್ತು ಯೂರಿಯಾ ಗೋಲ್ಡ್ ಸ್ಕೀಮ್ ಮೂಲಕ ರಸಗೊಬ್ಬರ ಬಳಕೆ ಕಡಿಮೆ ಮಾಡುವುದು ಮತ್ತು ಆ ಮೂಲಕ ಸಬ್ಸಿಡಿ ನೀಡುವಿಕೆ ತಗ್ಗಿಸುವುದು ಸರ್ಕಾರದ ಪ್ಲಾನ್ ಎಂಬುದು Moneycontrol ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯಿಂದ ತಿಳಿಯಲಾಗಿದೆ.

ಅಂದರೆ ರೈತರು ಖರೀದಿಸುವ ರಸಗೊಬ್ಬರಕ್ಕೆ ಸಬ್ಸಿಡಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ. ರಾಸಾಯನಿಕ ರಸಗೊಬ್ಬರ ಬಳಕೆಯನ್ನೇ ಕಡಿಮೆಗೊಳಿಸುವುದು ಸರ್ಕಾರದ ಗುರಿ. 2024ರಿಂದ 2026ರವರೆಗಿನ 3 ಹಣಕಾಸು ವರ್ಷದಲ್ಲಿ 3.7 ಲಕ್ಷ ಕೋಟಿ ರೂನಷ್ಟು ಸಬ್ಸಿಡಿ ಮೊತ್ತಕ್ಕೆ ಸರ್ಕಾರ ಗುರಿ ಇಟ್ಟಿದೆ. ಈ ಹಣಕಾಸು ವರ್ಷದಲ್ಲಿ (2023-24) 1.75 ಲಕ್ಷ ಕೋಟಿ ಹಾಗೂ ಮುಂದಿನೆರಡು ವರ್ಷದಲ್ಲಿ ತಲಾ 1 ಲಕ್ಷ ಕೋಟಿ ರೂ ಅನ್ನು ಮಾತ್ರ ಸಬ್ಸಿಡಿಗೆ ವಿನಿಯೋಗಿಸಲಾಗುವಂತೆ ಗುರಿ ಹಾಕಿದೆ.

ಇದನ್ನೂ ಓದಿCoal India: ಕೋಲ್ ಇಂಡಿಯಾದ 92 ಲಕ್ಷ ಷೇರುಗಳ ಮಾರಾಟ; ಉದ್ಯೋಗಿಗಳಿಗೆ ಆಫರ್; ಇಲ್ಲಿದೆ ಡೀಟೇಲ್ಸ್

ರಾಜ್ಯ ಸರ್ಕಾರಗಳಿಗೆ ಸಬ್ಸಿಡಿಯಲ್ಲಿ ಪಾಲು

ಒಂದು ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ರಾಸಾಯನಿಕ ರಸಗೊಬ್ಬರದ ಸರಾಸರಿಗಿಂತ ಕಡಿಮೆ ಬಳಸಿ ಉಳಿಯುವ ಸಬ್ಸಿಡಿ ಹಣದಲ್ಲಿ ಶೇ. 50ರಷ್ಟು ಭಾಗವನ್ನು ಆ ರಾಜ್ಯ ಸರ್ಕಾರಕ್ಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಮಳೆ, ಬರ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪ ಪರಿಸ್ಥಿತಿಯಿಂದ ರಾಸಾಯನಿಕ ರಸಗೊಬ್ಬರ ಬಳಕೆ ಕಡಿಮೆ ಆಗಿದ್ದರೆ ಅದಕ್ಕೆ ರಾಜ್ಯ ಸರ್ಕಾರಕ್ಕೆ ಸಬ್ಸಿಡಿ ಪಾಲು ಸಿಗುವುದಿಲ್ಲ. ಸಹಜ ಕೃಷಿಯಲ್ಲಿ ರೈತರು ರಾಸಾಯನಿಕ ರಸಗೊಬ್ಬರ ಬಳಕೆ ಕಡಿಮೆ ಮಾಡಿ ಜೈವಿಕ ಮತ್ತು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ರೈತರಿಗೆ ಉತ್ತೇಜನ ಕೊಡಬೇಕು.

ಇನ್ನು ಪಿಎಂ ಪ್ರಣಾಮ್ ಯೋಜನೆ, ಮಾರ್ಪಾಡುಗೊಂಡ ಮಾರ್ಕೆಟ್ ಡೆವಲಪ್ಮೆಂಟ್ ಅಸಿಸ್ಟೆಂಟ್ ಸ್ಕೀಮ್ ಮತ್ತು ಯೂರಿಯ ಗೋಲ್ಡ್ ಯೋಜನೆಗಳು ಜೈವಿಕ ಮತ್ತು ಸಾವಯವ ಕೃಷಿಗಾರಿಕೆಗೆ ಅನುಕೂಲ ಮಾಡಿಕೊಡುತ್ತವೆ. ಕೇಂದ್ರದಿಂದ ಸಿಗುವ ಸಬ್ಸಿಡಿ ಪಾಲಿನ ಹಣವನ್ನು ಈ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರಗಳು ಉಪಯೋಗಿಸಬಹುದು ಎಂದು ಸರ್ಕಾರ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ