ಮೂನ್ಲೈಟಿಂಗ್ ಹಿನ್ನೆಲೆಯಲ್ಲಿ ವಿಪ್ರೋ ತನ್ನ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಕೆಲವು ತಿಂಗಳುಗಳಿಂದ ವಿಪ್ರೋದ 300 ಉದ್ಯೋಗಿಗಳು ತಮ್ಮ ಕಂಪನಿ ಜತೆಗೆ ಇತರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ವಿಪ್ರೋದಲ್ಲಿ ಅಂತಹವರಿಗೆ ಜಾಗವಿಲ್ಲ, ನಂತರ ಆ ಉದ್ಯೋಗಿಗಳನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ರಿಷದ್ ಪ್ರೇಮ್‌ಜಿ ಹೇಳಿದ್ದಾರೆ. ಮೂನ್‌ಲೈಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಸಮಗ್ರತೆಯ ಉಲ್ಲಂಘನೆಯ ಕೃತ್ಯಕ್ಕಾಗಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಪ್ರೇಮ್‌ಜಿ ಹೇಳಿದರುವಾಸ್ತವವೆಂದರೆ ಇಂದು ವಿಪ್ರೋದಲ್ಲಿ ಕೆಲಸ ಮಾಡುವವರು ಮತ್ತು ನಮ್ಮ ಪ್ರತಿಸ್ಪರ್ಧಿಯೊಬ್ಬರಿಗೆ ನೇರವಾಗಿ ಕೆಲಸ ಮಾಡುತ್ತಿದ್ದಾರೆ . ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ ಅದನ್ನು ಮಾಡುತ್ತಿರುವ 300 ಜನರನ್ನು ಕಂಡುಹಿಡಿದಿದೆ.
ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡು ವರ್ಷಗಟ್ಟಲೆ ನಿರುದ್ಯೋಗದ ಸಮಸ್ಯೆ ಎದುರಿಸಿದ್ದರು. ಇನ್ನೂ ಕೆಲವು ಕಂಪನಿಗಳಲ್ಲಿ ಸಂಬಳದ ಕಡಿತ ಮಾಡಲಾಗಿತ್ತು. ಆಗ ಕೆಲವು ಉದ್ಯೋಗಿಗಳು ಪಾರ್ಟ್ ಟೈಂ ಉದ್ಯೋಗಕ್ಕಿಳಿದಿದ್ದರು.
ಇತ್ತೀಚೆಗಷ್ಟೇ ಜಾಗತಿಕ ಮುಂಚೂಣಿಯಲ್ಲಿರುವ ಐಟಿ ಕಂಪನಿಗಳಲ್ಲಿ ಒಂದಾದ ಐಬಿಎಂ ಕೂಡ ಮೂನ್ ಲೈಟಿಂಗ್ ಸಮಸ್ಯೆಗೆ ಸ್ಪಂದಿಸಿದೆ. ಉಭಯ ಉದ್ಯೋಗವನ್ನು ನೈತಿಕವಾಗಿ ಸರಿ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ವಿಷಯಗಳನ್ನು ನಿರ್ಲಕ್ಷಿಸುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಪ್ರೋತ್ಸಾಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಗಿದ ನಂತರ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವುದನ್ನು ಮೂನ್ ಲೈಟಿಂಗ್ ಎಂದು ಹೇಳಿಕೊಳ್ಳುತ್ತಾರೆ. ಕೆಲ ನೌಕರರು ಇದನ್ನು ಮಾಡುತ್ತಿದ್ದಾರೆ. ಕುಟುಂಬ ಬೆಂಬಲ ಮತ್ತು ಹೆಚ್ಚುವರಿ ಆದಾಯಕ್ಕಾಗಿ ನೌಕರರು ಇದನ್ನು ಮಾಡುತ್ತಿರಬಹುದು.
Published On - 6:27 pm, Wed, 21 September 22