
ಬೆಂಗಳೂರು, ಆಗಸ್ಟ್ 12: ಭಾರತದಲ್ಲಿರುವ ಮೊದಲ ತಲೆಮಾರಿನ ಫ್ಯಾಮಿಲಿ ಬ್ಯುಸಿನೆಸ್ಗಳ ಪೈಕಿ ನಂಬರ್ ಒನ್ ಸ್ಥಾನವನ್ನು ಅದಾನಿ ಫ್ಯಾಮಿಲಿ ಪಡೆದಿದೆ. ಹುರುನ್ ಇಂಡಿಯಾ ಪ್ರಕಟಿಸಿದ ಅತ್ಯಂತ ಮೌಲ್ಯಯುತ ಫ್ಯಾಮಿಲಿ ಬ್ಯುಸಿನೆಸ್ ಲಿಸ್ಟ್ನಲ್ಲಿ (Hurun India Most Valuable First Generation Family Business) ಇದನ್ನು ಗುರುತಿಸಲಾಗಿದೆ. ಈ ಫಸ್ಟ್ ಜನರೇಶನ್ ಫ್ಯಾಮಿಲಿ ಬ್ಯುಸಿನೆಸ್ ಪಟ್ಟಿಯಲ್ಲಿ ಎರಡು ಕನ್ನಡಿಗ ಕುಟುಂಬಗಳೂ ಇವೆ ಎನ್ನುವುದು ವಿಶೇಷ.
ಒಬ್ಬ ವ್ಯಕ್ತಿ ಆರಂಭಿಸಿದ ಬ್ಯುಸಿನೆಸ್ ಅನ್ನು ಆತನ ಮುಂದಿನ ತಲೆಮಾರಿನವರು ಮುಂದುವರಿಸಿಕೊಂಡು ಹೋಗುವುದಕ್ಕೆ ಫ್ಯಾಮಿಲಿ ಬ್ಯುಸಿನೆಸ್ ಎನ್ನುವುದು. ಎರಡನೇ ತಲೆಮಾರಿನವರು ಫ್ಯಾಮಿಲಿ ಬ್ಯುಸಿನೆಸ್ನಲ್ಲಿ ತೊಡಗಿಸಿಕೊಂಡಿದ್ದರೆ ಅದು ಫಸ್ಟ್ ಜನರೇಶನ್ ಫ್ಯಾಮಿಲಿ ಬ್ಯುಸಿನೆಸ್ ಎನಿಸುತ್ತದೆ.
ಇದನ್ನೂ ಓದಿ: ‘ಡಮ್ಮಿ ಆಫೀಸು’, ‘ಡಮ್ಮಿ ಸಹೋದ್ಯೋಗಿಗಳು’; ಚೀನಾದಲ್ಲಿ ಹೊಸ ಟ್ರೆಂಡ್
ಹುರುನ್ ಇಂಡಿಯಾದ ಫಸ್ಟ್ ಜನರೇಶನ್ ಬ್ಯುಸಿನೆಸ್ ಪಟ್ಟಿಯಲ್ಲಿ ಟಾಪ್-20ಯಲ್ಲಿ ಎರಡು ಕನ್ನಡಿಗ ಕುಟುಂಬಗಳಿವೆ. ಒಂದು ಶೆಟ್ಟಿ ಫ್ಯಾಮಿಲಿ, ಮತ್ತೊಂದು ಶಂಕರ್ ಫ್ಯಾಮಿಲಿ.
ನಾರಾಯಣ ಹೃದಯಾಲಯದ ಸಂಸ್ಥಾಪಕರಾದ ಡಾ. ದೇವಿ ಶೆಟ್ಟಿ ಮತ್ತವರ ಕುಟುಂಬ 10ನೇ ಸ್ಥಾನ ಪಡೆದಿದೆ. ಇವರ ಬ್ಯುಸಿನೆಸ್ ಮೌಲ್ಯ 44,000 ಕೋಟಿ ರೂ ಇದೆ.
ಇನ್ನು, ಬ್ರಿಗೇಡ್ ಎಂಟರ್ಪ್ರೈಸಸ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯ ಸ್ಥಾಪಕರಾದ ಎಂಆರ್ ಜೈಶಂಕರ್ ಕುಟುಂಬ 19ನೇ ಸ್ಥಾನ ಪಡೆದಿದೆ. ಚಿಕ್ಕಮಗಳೂರು ಮೂಲದ ಎಂಆರ್ ಜೈಶಂಕರ್ ಅವರ ಬ್ರಿಗೇಡ್ ಎಂಟರ್ಪ್ರೈಸಸ್ ಮೌಲ್ಯ 27,200 ಕೋಟಿ ರೂನಷ್ಟಿದೆ.
ಇದನ್ನೂ ಓದಿ: ತಿಂಗಳಿಗೆ 11,000 ಹೂಡಿಕೆ; 9 ಕೋಟಿ ರೂ ಮೊತ್ತಕ್ಕೆ ಎಷ್ಟು ವರ್ಷ ಬೇಕು?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ