Government Asset Sale: ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ

| Updated By: Srinivas Mata

Updated on: Nov 20, 2021 | 8:20 PM

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಸ್​ಎನ್​ಎಲ್​, ಎಂಟಿಎನ್​ಎಲ್​ ರಿಯಲ್ ಎಸ್ಟೇಟ್ ಆಸ್ತಿಗಳನ್ನು 1100 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಕ್ಕೆ ನಿರ್ಧರಿಸಲಾಗಿದೆ.

Government Asset Sale: ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ
ಪ್ರಾತಿನಿಧಿಕ ಚಿತ್ರ
Follow us on

DIPAM ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್​ಎಲ್​ ಮತ್ತು ಬಿಎಸ್​ಎನ್​ಎಲ್​ನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸುಮಾರು 1,100 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ದಾಖಲೆಗಳನ್ನು ಅಪ್​ಲೋಡ್​ ಮಾಡಿದೆ. ಹೈದರಾಬಾದ್, ಚಂಡೀಗಡ, ಭಾವನಗರ ಮತ್ತು ಕೋಲ್ಕತ್ತಾದಲ್ಲಿರುವ ಬಿಎಸ್‌ಎನ್‌ಎಲ್ ಆಸ್ತಿಗಳನ್ನು ಸುಮಾರು 800 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಪೋಸ್ಟ್ ಮಾಡಲಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ವೆಬ್‌ಸೈಟ್ ಮುಂಬೈನ ವಸಾರಿ ಹಿಲ್, ಗೋರೆಗಾಂವ್‌ನಲ್ಲಿರುವ MTNL ಆಸ್ತಿಗಳನ್ನು ಸುಮಾರು 270 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಲಿಸ್ಟ್ ಮಾಡಿದೆ.

ಒಶಿವಾರದಲ್ಲಿ ಇರುವ ಎಂಟಿಎನ್​ಎಲ್​ನ 20 ಫ್ಲ್ಯಾಟ್‌ಗಳನ್ನು ಕಂಪೆನಿಯ ಆಸ್ತಿ ಹಣ ಗಳಿಸುವ ಯೋಜನೆಯ ಭಾಗವಾಗಿ ಮಾರಾಟಕ್ಕೆ ಇಡಲಾಗಿದೆ. ಫ್ಲ್ಯಾಟ್‌ಗಳು 1-ಕೋಣೆಯ ಸೆಟ್‌ನ ಎರಡು ಯೂನಿಟ್, 1 ಮಲಗುವ ಕೋಣೆ ಹಾಲ್ ಮತ್ತು ಅಡುಗೆಮನೆಯ 17 ಘಟಕಗಳು (BHK) ಮತ್ತು 2 ಬಿಎಚ್​ಕೆ ಒಂದು ಘಟಕವನ್ನು ಒಳಗೊಂಡಿವೆ. ಅವುಗಳ ಮೀಸಲು ಬೆಲೆ 52.26 ಲಕ್ಷ ರೂಪಾಯಿಯಿಂದ 1.59 ಕೋಟಿ ರೂಪಾಯಿ ಇದೆ.

ಎಂಟಿಎನ್​ಎಲ್​ನ ಆಸ್ತಿಗಳ ಇ-ಹರಾಜು ಡಿಸೆಂಬರ್ 14ರಂದು ನಡೆಯಲಿದೆ. 2019ರ ಅಕ್ಟೋಬರ್​ನಲ್ಲಿ ಸರ್ಕಾರವು ಅನುಮೋದಿಸಿದ ಎಂಟಿಎನ್ಎಲ್​ ಮತ್ತು ಬಿಎಸ್​ಎನ್​ಎಲ್​ಗಾಗಿ 69,000 ಕೋಟಿ ರೂಪಾಯಿಗಳ ಆಸ್ತಿ ಹಣಗಳಿಕೆ ಪುನಶ್ಚೇತನ ಯೋಜನೆಯ ಭಾಗವಾಗಿದೆ. ಎರಡೂ ಸಾರ್ವಜನಿಕ ವಲಯದ ಸಂಸ್ಥೆಗಳು 2022ರ ವೇಳೆಗೆ 37,500 ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿ, ಹಣ ಗಳಿಸಬೇಕಿದೆ.

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ