ನವದೆಹಲಿ, ನವೆಂಬರ್ 25: ಸಾಲ ಮಾಡದೇ ಮನೆ ಕಟ್ಟುವುದೇ ಕಷ್ಟ, ಇನ್ನು ಉದ್ದಿಮೆಗಳನ್ನು ಸಾಲರಹಿತವಾಗಿ ಬೆಳೆಸಲು ಆಗುವುದೇ? ಇವತ್ತಿನ ದಿನಮಾನದಲ್ಲಿ ಯಾವುದೇ ಉದ್ಯಮವನ್ನು ಸಾಲವಿಲ್ಲದೇ ನಡೆಸಲು ಸಾಧ್ಯವಾಗುವುದಿಲ್ಲ. ಅಂತೆಯೇ, ಇವತ್ತು ಬ್ಯಾಂಕುಗಳಲ್ಲಿ ಅತಿಹೆಚ್ಚು ಸಾಲ ಮಾಡಿರುವುದು ಸಾಮಾನ್ಯ ಜನರಲ್ಲ, ಉದ್ಯಮಿಗಳು. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯೊಂದರಲ್ಲಿ ಭಾರತದ ಅತಿದೊಡ್ಡ ಸಾಲಗಾರರನ್ನು (biggest debtors) ಹೆಸರಿಸಲಾಗಿದೆ. ಅದರ ಪ್ರಕಾರ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಅತಿಹೆಚ್ಚು ಸಾಲ ಹೊಂದಿದೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಗೊಂಡ ಬಳಿಕ ಲಕ್ಷಾಂತರ ಕೋಟಿ ರೂನಷ್ಟು ಷೇರುಸಂಪತ್ತು ನಷ್ಟ ಮಾಡಿಕೊಂಡ ಗೌತಮ್ ಅದಾನಿ ಅತಿಹೆಚ್ಚು ಸಾಲ ಹೊಂದಿದ್ದಾರೆ ಎಂಬ ಹಲವರ ಊಹೆ ತಪ್ಪಾಗಿರಬಹುದು. ಅವರು ಟಾಪ್10 ಸಾಲಗಾರರ ಪಟ್ಟಿಯಲ್ಲಿ ಇಲ್ಲ.
ಇದನ್ನೂ ಓದಿ: ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು
ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳಾಗಿದ್ದು 5ಜಿ ನೆಟ್ವರ್ಕ್ ಅಳವಡಿಕೆಗೆ ಸಾಕಷ್ಟು ಹೂಡಿಕೆ ಮಾಡಿವೆ. ಈ ಕಾರಣಕ್ಕೆ ಸಾಲ ಹೆಚ್ಚಾಗಿರಬಹುದು. ಇನ್ನು, ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ರಿಲಾಯನ್ಸ್ ಜಿಯೋ ಕೂಡ 5ಜಿಗೆ ಬಹಳಷ್ಟು ಹೂಡಿಕೆ ಮಾಡಿದೆ.
ಈ ಮೇಲಿನ ಟಾಪ್ 10 ಸಾಲಗಾರ ಸಂಸ್ಥೆಗಳ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ (public sector companies) ನಾಲ್ಕು ಸಂಸ್ಥೆಗಳಿರುವುದು ವಿಶೇಷ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ