ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು

Indian First Private Aerospace company: ಅಮೆರಿಕದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಂತೆ ಭಾರತದಲ್ಲೂ ಆಗಬಹುದು ಎಂಬ ಅಂದಾಜು ಗಳಿಸಿದ ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಇಬ್ಬರೂ ತಡಮಾಡದೇ ಕಟ್ಟಿದ ಕಂಪನಿ ಸ್ಕೈರೂಟ್ ಏರೋಸ್ಪೇಸ್. ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಎಂಬಿಬ್ಬರು ಯುವಕರು ಸಂಸ್ಥಾಪಿಸಿದ ಸಂಸ್ಥೆ ಅದು.ಇಬ್ಬರೂ ಕೂಡ ಐಐಟಿ ಪದವೀಧರರು ಮತ್ತು ಇಸ್ರೋ ಸಹೋದ್ಯೋಗಿಗಳು.

ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು
ಸ್ಕೈರೂಟ್ ಏರೋಸ್ಪೇಸ್
Follow us
|

Updated on: Nov 25, 2023 | 3:22 PM

ಹೈದರಾಬಾದ್, ನವೆಂಬರ್ 25: ಕಳೆದ ವರ್ಷ ಶ್ರೀಹರಿಕೋಟಾದಿಂದ ವಿಕ್ರಮ್-ಎಸ್ ಎಂಬ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಅದು ಭಾರತದ ಮೊದಲ ಖಾಸಗಿ ರಾಕೆಟ್ ಆಗಿತ್ತು. ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್ ಏರೋಸ್ಪೇಸ್ (skyroot aerospace) ತಯಾರಿಸಿದ ರಾಕೆಟ್ ಅದು. ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಎಂಬಿಬ್ಬರು ಯುವಕರು ಸಂಸ್ಥಾಪಿಸಿದ ಸಂಸ್ಥೆ ಅದು. ಭಾರತದಲ್ಲಿ ಹೊಸ ಇತಿಹಾಸ ಪುಟ ತೆರೆದವರು ಈ ಯುವಕರು. ಇಬ್ಬರೂ ಕೂಡ ಐಐಟಿ ಪದವೀಧರರು ಮತ್ತು ಇಸ್ರೋ ಸಹೋದ್ಯೋಗಿಗಳು. ಇಸ್ರೋ ಕೆಲಸ ಬಿಟ್ಟು ತಮ್ಮದೇ ಬಾಹ್ಯಾಕಾಶ ಕಂಪನಿ ಹುಟ್ಟುಹಾಕಿದವರು. ಇವರ ಆರಂಭಿಕ ಹೆಜ್ಜೆಗಳು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ (Elon Musk’s SpaceX) ಹೆಜ್ಜೆಗಳನ್ನು ನೆನಪಿಸುತ್ತವೆ.

ಇಲಾನ್ ಮಸ್ಕ್ ಇವತ್ತು ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಳ್ಳಲು ಪ್ರಮುಖವಾಗಿ ಕಾರಣವಾಗಿರುವುದು ಅವರ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಗಳು. ಟೆಸ್ಲಾ ಎಲೆಕ್ಟ್ರಿಕ್ ಕಾರು ತಯಾರಿಸುವ ಕಂಪನಿಯಾದರೆ, ಸ್ಪೇಸ್ ಎಕ್ಸ್ ರಾಕೆಟ್ ಇತ್ಯಾದಿ ಬಾಹ್ಯಾಕಾಶ ಸಾಧನಗಳನ್ನು ತಯಾರಿಸುತ್ತದೆ. ಭವಿಷ್ಯದ ಬೇಡಿಕೆಗಳನ್ನು ಬಹಳ ಮೊದಲೇ ಗುರುತಿಸಿ ಅದನ್ನು ನೆರವೇರಿಸಲು ಎಲ್ಲರಿಗಿಂತ ಮೊದಲು ಅಖಾಡಕ್ಕೆ ಇಳಿದಿದ್ದು ಇಲಾನ್ ಮಸ್ಕ್. ಹೀಗಾಗಿ, ಅವರ ಈ ಎರಡು ಕಂಪನಿಗಳು ಈಗಲೂ ಕೂಡ ಎಲ್ಲರಿಗಿಂತ ಮುಂದಿವೆ. ಭಾರತದ ಸ್ಕೈರೂಟ್ ಏರೋಸ್ಪೇಸ್ ಕೂಡ ಇದೇ ಹಾದಿಯಲ್ಲಿದೆ.

ಇದನ್ನೂ ಓದಿ: Health Infrastructure: ಭಾರತದಲ್ಲಿ ವೈದ್ಯರ ಸಂಖ್ಯೆ ಓಕೆ, ಆದ್ರೆ ಆಸ್ಪತ್ರೆ ಬೆಡ್​ಗಳದ್ದೇ ಕೊರತೆ; ಇನ್ನೂ ಎಷ್ಟು ಬೆಡ್ ಬೇಕು?

ಅಮೆರಿಕದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಂತೆ ಭಾರತದಲ್ಲೂ ಆಗಬಹುದು ಎಂಬ ಅಂದಾಜು ಗಳಿಸಿದ ಪವನ್ ಕುಮಾರ್ ಚಂದನ ಮತ್ತು ನಾಗ ಭರತ್ ಡಾಕಾ ಇಬ್ಬರೂ ತಡಮಾಡದೇ ಕಟ್ಟಿದ ಕಂಪನಿ ಸ್ಕೈರೂಟ್ ಏರೋಸ್ಪೇಸ್. 2018ರಲ್ಲಿ ಈ ಕಂಪನಿ ಸ್ಥಾಪನೆಯಾಗಿದ್ದು. ಬಾಹ್ಯಾಕಾಶ ನೌಕೆಗಳನ್ನು ಸಾಗಿಸಲು ಬೇಕಾದ ರಾಕೆಟ್​ಗಳನ್ನು ತಯಾರಿಸುವುದು ಈ ಕಂಪನಿಯ ಬಿಸಿನೆಸ್. ಭಾರತದ ಬಾಹ್ಯಾಕಾಶ ಕ್ಷೇತ್ರ ಖಾಸಗಿಯವರಿಗೆ ತೆರೆಯುವ ಬಹಳ ಮೊದಲೇ ಇವರ ಕಂಪನಿ ಅಣಿಗೊಂಡಿದೆ.

ವಿಕ್ರಮ್-ಎಸ್ ಎಂಬುದು ಈ ಸಂಸ್ಥೆ ತಯಾರಿಸಿದ ಮೊದಲ ರಾಕೆಟ್. ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಎನ್ನಲಾದ ಡಾ. ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ಅವರ ಹೆಸರನ್ನು ಇದರ ರಾಕೆಟ್​ಗಳಿಗೆ ಇಡಲಾಗಿದೆ. ಕೆಲ ಸೆನ್ಸಾರ್​ಗಳನ್ನು ಆಮದು ಮಾಡಿಕೊಂಡಿದ್ದು ಬಿಟ್ಟರೆ ವಿಕ್ರಮ್ ಎಸ್ ರಾಕೆಟ್ ಸಂಪೂರ್ಣವಾಗಿ ಇಲ್ಲಿಯೇ ತಯಾರಾಗಿದೆ. 2022ರ ನವೆಂಬರ್ 18ರಂದು ಈ ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆಯಿತು. ಮೂರು ಸಣ್ಣ ಸೆಟಿಲೈಟ್​ಗಳನ್ನು ಅಥವಾ ನೌಕೆಗಳನ್ನು ಇದು ಬಾಹ್ಯಾಕಾಶಕ್ಕೆ ಹೊತ್ತೊಯ್ದಿತ್ತು.

ಇದನ್ನೂ ಓದಿ: ರೇಮಂಡ್ ರಾದ್ಧಾಂತ; ಮಕ್ಕಳಿಗೆ ಆಸ್ತಿಕೊಟ್ಟು ಮೂರ್ಖರಾಗಬೇಡಿ: ವಿಜಯ್​ಪತ್ ಸಿಂಘಾನಿಯಾ ಕಣ್ಣೀರು

ಸ್ಕೈರೂಟ್ ಏರೊಸ್ಪೇಸ್ ಕಂಪನಿಗೆ ಸಾಕಷ್ಟು ಫಂಡಿಂಗ್​ಗಳು ಹರಿದುಬರುತ್ತಿವೆ. ಒಂದು ಅಂದಾಜು ಪ್ರಕಾರ ಈ ಕಂಪನಿಯ ಮೌಲ್ಯ ಸದ್ಯಕ್ಕೆ 1,304 ಕೋಟಿ ರೂ ಇದೆ. 2040ರಷ್ಟರಲ್ಲಿ ಭಾರತದ ಖಾಸಗಿ ಬಾಹ್ಯಾಕಾಶ ಮಾರುಕಟ್ಟೆ 100 ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂ) ಆಗುವ ನಿರೀಕ್ಷೆ ಇದೆ. ಭಾರತದ ಅಗ್ರಗಣ್ಯ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿರುವ ಸ್ಕೈರೂಟ್ ಸಂಸ್ಥೆ ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯುವ ಎಲ್ಲಾ ಅವಕಾಶ ಹೊಂದಿದೆ. ಮುಂದೊಂದು ದಿನ ಇದು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್​ಗೆ ಪೈಪೋಟಿ ನೀಡಲು ಹೊರಟರೂ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್