ಇಂದು ಮಧ್ಯರಾತ್ರಿ ನಂತರ ಎಸ್ಬಿಐನ ಯುಪಿಐ ಕೆಲಸ ಮಾಡೋದಿಲ್ಲ; ಎಷ್ಟು ಹೊತ್ತು ಸರ್ವಿಸ್ ಡೌನ್ ಆಗಿರುತ್ತೆ, ಏನು ಕಾರಣ, ನೋಡಿ ಮಾಹಿತಿ
SBI UPI Transaction Down: ನವೆಂಬರ್ 26ರಂದು ರಾತ್ರಿ 12:30ರಿಂದ ಮುಂಜಾವು 3ರವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್ಗಳು ಲಭ್ಯ ಇರುತ್ತವೆ ಎಂದು ಎಸ್ಬಿಐ ಶನಿವಾರ ಟ್ವೀಟ್ ಮಾಡಿದೆ.
ನವದೆಹಲಿ, ನವೆಂಬರ್ 25: ನಿಮ್ಮ ಯುಪಿಐ ಆ್ಯಪ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದೀರಾ? ನವೆಂಬರ್ 26, ಅಂದರೆ ನಾಳೆ ಭಾನುವಾರದಂದು ಎಸ್ಬಿಐನ ಯುಪಿಐ ವಹಿವಾಟುಗಳು ಸಾಧ್ಯವಾಗುವುದಿಲ್ಲ. ಎಸ್ಬಿಐನ ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಟೆಕ್ನಾಲಜಿ ಅಪ್ಗ್ರೇಡ್ ಮಾಡಲಾಗುತ್ತಿರುವುದರಿಂದ ಭಾನುವಾರ ಹಲವು ಹೊತ್ತು ಅದರ ವಹಿವಾಟು ಸ್ಥಗಿತಗೊಂಡಿರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಅಲರ್ಟ್ ಮಾಡಿದೆ. ಅದರ ಪ್ರಕಾರ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾವಿನ ಮಧ್ಯೆ ಎರಡೂವರೆ ಗಂಟೆ ಕಾಲ ಸರ್ವಿಸ್ ಡೌನ್ ಅಗಿರುತ್ತದೆ.
‘26-11-2023ರಂದು 00:30ರಿಂದ 3:00 ಗಂಟೆಯವರೆಗೆ ನಾವು ಯುಪಿಐನಲ್ಲಿ ಟೆಕ್ನಾಲಜಿ ಅಪ್ಗ್ರೇಡ್ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಯುಪಿಐ ಹೊರತುಪಡಿಸಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ, ಯೋನೋ ಲೈಟ್ ಮತ್ತು ಎಟಿಎಂ ಮೊದಲಾದ ಡಿಜಿಟಲ್ ಚಾನಲ್ಗಳು ಲಭ್ಯ ಇರುತ್ತವೆ,’ ಎಂದು ಎಸ್ಬಿಐ ಇಂದು ಟ್ವೀಟ್ ಮಾಡಿದೆ.
— State Bank of India (@TheOfficialSBI) November 25, 2023
ಅಂದರೆ, ಶನಿವಾರ ಮಧ್ಯರಾತ್ರಿ 12:30ರಿಂದ ಮುಂಜಾವು 3 ಗಂಟೆಯವರೆಗೆ ಅದರ ಯುಪಿಐ ವಹಿವಾಟು ಕೆಲಸ ಮಾಡುವುದಿಲ್ಲ. ಆ ಸಮಯದಲ್ಲಿ ಹಣದ ವಹಿವಾಟು ಮಾಡಬೇಕೆನ್ನುವವರಿಗೆ ಇತರ ಅವಕಾಶಗಳು ಇದ್ದೇ ಇವೆ. ಎಟಿಎಂ, ಇಂಟರ್ನನೆಟ್ ಬ್ಯಾಂಕಿಂಗ್, ಯೋನೋ ಬ್ಯಾಂಕಿಂಗ್ ಆ್ಯಪ್ ಇತ್ಯಾದಿಯನ್ನು ಬಳಸಬಹುದು. ಫೋನ್ ಬ್ಯಾಂಕಿಂಗ್ ಕೂಡ ನಡೆಯುತ್ತದೆ.
ಇದನ್ನೂ ಓದಿ: ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ
ಭಾರತದಲ್ಲಿ ಯುಪಿಐ ಅತಿಹೆಚ್ಚು ಬಳಸಲಾಗುತ್ತಿರುವ ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯುಪಿಐ ಪ್ಲಾಟ್ಫಾರ್ಮ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ದೂರು ಸಾಕಷ್ಟು ಕೇಳಿಬಂದಿದೆ. 44 ಕೋಟಿ ಗ್ರಾಹಕರ ಬಳಗ ಹೊಂದಿರುವ ಎಸ್ಬಿಐಗೆ ಇದನ್ನು ಸರಿಪಡಿಸುವುದು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ತಂತ್ರಜ್ಞಾನ ಉನ್ನತೀಕರಣ ಮಾಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sat, 25 November 23