AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ

List of India's Biggest Debtors: ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ದೇಶದ ಅತಿದೊಡ್ಡ ಸಾಲಗಾರ ಸಂಸ್ಥೆಗಳ ಟಾಪ್10 ಪಟ್ಟಿಯಲ್ಲಿ ಅದಾನಿ ಗ್ರೂಪ್ ಇಲ್ಲ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಅತಿಹೆಚ್ಚು ಸಾಲ ಹೊಂದಿದೆ. ಟಾಟಾ ಮತ್ತು ಬಿರ್ಲಾ ಒಡೆತನದ ಕಂಪನಿಗಳು ಈ ಪಟ್ಟಿಯಲ್ಲಿವೆ. ಒಟ್ಟು ಆರು ಖಾಸಗಿ ಸಂಸ್ಥೆಗಳು ಅತಿಹೆಚ್ಚು ಸಾಲ ಹೊಂದಿದವುಗಳ ಪಟ್ಟಿಯಲ್ಲಿವೆ.

ಟಾಟಾನಾ, ಬಿರ್ಲಾನಾ?; ದೇಶದ ಅತಿದೊಡ್ಡ ಸಾಲಗಾರರು ಯಾರು? ಇಲ್ಲಿದೆ ಟಾಪ್-10 ಪಟ್ಟಿ
ಉದ್ಯಮಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2023 | 4:57 PM

Share

ನವದೆಹಲಿ, ನವೆಂಬರ್ 25: ಸಾಲ ಮಾಡದೇ ಮನೆ ಕಟ್ಟುವುದೇ ಕಷ್ಟ, ಇನ್ನು ಉದ್ದಿಮೆಗಳನ್ನು ಸಾಲರಹಿತವಾಗಿ ಬೆಳೆಸಲು ಆಗುವುದೇ? ಇವತ್ತಿನ ದಿನಮಾನದಲ್ಲಿ ಯಾವುದೇ ಉದ್ಯಮವನ್ನು ಸಾಲವಿಲ್ಲದೇ ನಡೆಸಲು ಸಾಧ್ಯವಾಗುವುದಿಲ್ಲ. ಅಂತೆಯೇ, ಇವತ್ತು ಬ್ಯಾಂಕುಗಳಲ್ಲಿ ಅತಿಹೆಚ್ಚು ಸಾಲ ಮಾಡಿರುವುದು ಸಾಮಾನ್ಯ ಜನರಲ್ಲ, ಉದ್ಯಮಿಗಳು. ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯೊಂದರಲ್ಲಿ ಭಾರತದ ಅತಿದೊಡ್ಡ ಸಾಲಗಾರರನ್ನು (biggest debtors) ಹೆಸರಿಸಲಾಗಿದೆ. ಅದರ ಪ್ರಕಾರ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಅತಿಹೆಚ್ಚು ಸಾಲ ಹೊಂದಿದೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಗೊಂಡ ಬಳಿಕ ಲಕ್ಷಾಂತರ ಕೋಟಿ ರೂನಷ್ಟು ಷೇರುಸಂಪತ್ತು ನಷ್ಟ ಮಾಡಿಕೊಂಡ ಗೌತಮ್ ಅದಾನಿ ಅತಿಹೆಚ್ಚು ಸಾಲ ಹೊಂದಿದ್ದಾರೆ ಎಂಬ ಹಲವರ ಊಹೆ ತಪ್ಪಾಗಿರಬಹುದು. ಅವರು ಟಾಪ್10 ಸಾಲಗಾರರ ಪಟ್ಟಿಯಲ್ಲಿ ಇಲ್ಲ.

ಅತಿ ಹೆಚ್ಚು ಸಾಲ ಹೊಂದಿರುವ 10 ಸಂಸ್ಥೆಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 3.13 ಲಕ್ಷ ಕೋಟಿ ರೂ
  2. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (ಎನ್​ಟಿಪಿಸಿ): 2.20 ಲಕ್ಷ ಕೋಟಿ ರೂ
  3. ವೊಡಾಫೋನ್ ಐಡಿಯಾ: 2.01 ಲಕ್ಷ ಕೋಟಿ ರೂ
  4. ಭಾರ್ತಿ ಏರ್ಟೆಲ್: 1.65 ಲಕ್ಷ ಕೋಟಿ ರೂ
  5. ಇಂಡಿಯನ್ ಆಯಿಲ್ ಕಾರ್ಪೊರೆಶನ್: 1.40 ಲಕ್ಷ ಕೋಟಿ ರೂ
  6. ಒಎನ್​ಜಿಸಿ: 1.29 ಲಕ್ಷ ಕೋಟಿ ರೂ
  7. ಪವರ್ ಗ್ರಿಡ್ ಕಾರ್ಪೊರೇಶನ್: 1.26 ಲಕ್ಷ ಕೋಟಿ ರೂ
  8. ಟಾಟಾ ಮೋಟಾರ್ಸ್: 1.25 ಲಕ್ಷ ಕೋಟಿ ರೂ
  9. ಎಲ್ ಅಂಡ್ ಟಿ: 1.18 ಲಕ್ಷ ಕೋಟಿ ರೂ
  10. ಗ್ರಾಸಿಮ್ ಇಂಡಸ್ಟ್ರೀಸ್: 1.01 ಲಕ್ಷ ಕೋಟಿ ರೂ

ಇದನ್ನೂ ಓದಿ: ಇಸ್ರೋ ಬಿಟ್ಟು ಹೊಸ ಕಂಪನಿ ಕಟ್ಟಿದ ಐಐಟಿ ಪದವೀಧರರು; ಇಲಾನ್ ಮಸ್ಕ್ ಹಾದಿಯಲ್ಲಿ ಇಬ್ಬರು ಭಾರತೀಯರು

ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳಾಗಿದ್ದು 5ಜಿ ನೆಟ್ವರ್ಕ್ ಅಳವಡಿಕೆಗೆ ಸಾಕಷ್ಟು ಹೂಡಿಕೆ ಮಾಡಿವೆ. ಈ ಕಾರಣಕ್ಕೆ ಸಾಲ ಹೆಚ್ಚಾಗಿರಬಹುದು. ಇನ್ನು, ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ಜಿಯೋ ಕೂಡ 5ಜಿಗೆ ಬಹಳಷ್ಟು ಹೂಡಿಕೆ ಮಾಡಿದೆ.

ಈ ಮೇಲಿನ ಟಾಪ್ 10 ಸಾಲಗಾರ ಸಂಸ್ಥೆಗಳ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ (public sector companies) ನಾಲ್ಕು ಸಂಸ್ಥೆಗಳಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ