ಕ್ರೆಡಿಟ್ ರಿಪೋರ್ಟ್ ಎಂದರೇನು? ಕ್ರೆಡಿಟ್ ಸ್ಕೋರ್ಗಿಂತ ಅದು ಹೇಗೆ ಭಿನ್ನ? ಇಲ್ಲಿದೆ ಡೀಟೇಲ್ಸ್
Credit Score vs Credit Report: ಕ್ರೆಡಿಟ್ ಸ್ಕೋರ್ ಎಂಬುದು 300ರಿಂದ 900ರವರೆಗಿನ ಮೂರಂಕಿಯ ಸಂಖ್ಯೆಯಾಗಿರುತ್ತದೆ. ಇದು ನಿಮ್ಮ ಸಾಲ ತೀರುವಳಿಯ ಪ್ರತಿಬಿಂಬ. ಕ್ರೆಡಿಟ್ ರಿಪೋರ್ಟ್ ಎಂಬುದು ಮುಂದುವರಿದ ಭಾಗ. ಅಂದರೆ ನಿಮ್ಮ ಇಡೀ ಕ್ರೆಡಿಟ್ ಇತಿಹಾಸ ಈ ರಿಪೋರ್ಟ್ನಲ್ಲಿ ದಾಖಲಾಗಿರುತ್ತದೆ. ನಿಮಗೆ ಸಾಲ ಕೊಡುವ ಮುನ್ನ ಹಣಕಾಸು ಸಂಸ್ಥೆಗಳು ಕ್ರೆಡಿಟ್ ರಿಪೋರ್ಟ್ ಪರಿಶೀಲನೆ ನಡೆಸುತ್ತವೆ.
ಕ್ರೆಡಿಟ್ ರಿಪೋರ್ಟ್ (credit report) ಮತ್ತು ಕ್ರೆಡಿಟ್ ಸ್ಕೋರ್ (credit score) ಒಂದೇ ಎಂದು ಬಹಳ ಮಂದಿ ಭಾವಿಸುವುದುಂಟು. ಎರಡರ ಮಧ್ಯೆ ಅಂಥ ದೊಡ್ಡ ವ್ಯತ್ಯಾಸ ಇಲ್ಲ. ಅಕೌಂಟ್ ಬ್ಯಾಲೆನ್ಸ್ ಮತ್ತು ಅಕೌಂಟ್ ಸ್ಟೇಟ್ಮೆಂಟ್ ಮಧ್ಯೆ ಇರುವಂತಹ ವ್ಯತ್ಯಾಸದ ರೀತಿ ಅದು. ಎರಡೂ ಕೂಡ ಬಹಳ ಮುಖ್ಯ. ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ರಿಪೋರ್ಟ್ನ ಒಂದು ಹೈಲೈಟ್ ಮಾತ್ರವೇ. ಎರಡೂ ಕೂಡ ನಿಮ್ಮ ಸಾಲ ತೀರುವಿಕೆಯ ಇತಿಹಾಸ (credit history) ಮತ್ತು ವರ್ತನೆಯನ್ನು ಬಿಂಬಿಸುತ್ತವೆ.
ಕ್ರೆಡಿಟ್ ಸ್ಕೋರ್ ಎಂಬುದು 300ರಿಂದ 900ರವರೆಗಿನ ಮೂರಂಕಿಯ ಸಂಖ್ಯೆಯಾಗಿರುತ್ತದೆ. ಇದು ನಿಮ್ಮ ಸಾಲ ತೀರುವಳಿಯ ಪ್ರತಿಬಿಂಬ. ವಿವಿಧ ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಮಗೆ ನೀಡಿರುವ ಅಂಕಿಗಳ ಸರಾಸರಿ ಸಂಖ್ಯೆ ಇದು. 300ರಿಂದ ಪ್ರಾರಂಭವಾಗಿ 900 ರವರೆಗೆ ಕ್ರೆಡಿಟ್ ಸ್ಕೋರ್ ಇರಬಹುದು. ಕ್ರೆಡಿಟ್ ಸ್ಕೋರ್ 300 ಇದ್ದರೆ ಅದು ಅತ್ಯಂತ ಕಳಪೆ ಸಾಲ ನಿರ್ವಹಣೆಯನ್ನು ತೋರಿಸುತ್ತದೆ. 900 ಸ್ಕೋರ್ ಗರಿಷ್ಠ. ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 750ಕ್ಕಿಂತ ಮೇಲಿದ್ದರೆ ನಿಮ್ಮನ್ನು ಸುರಕ್ಷಿತ ಸಾಲಗಾರನೆಂದು ಪರಿಗಣಿಸಲಾಗುತ್ತದೆ. ಸುಲಭವಾಗಿ ಸಾಲ ಸಿಗುತ್ತದೆ.
ಇದನ್ನೂ ಓದಿ: Home Loan Interest Rates: ಎಸ್ಬಿಐ, ಎಚ್ಡಿಎಫ್ಸಿ ಸೇರಿದಂತೆ ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಕ್ಕೆ ಬಡ್ಡಿದರ ಎಷ್ಟು?
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ 5 ಮಾನದಂಡಗಳು
- ಸಾಲ ಮರುಪಾವತಿ ಇತಿಹಾಸ
- ಸಾಲ ಬಳಕೆ
- ಎಷ್ಟು ವರ್ಷಗಳಿಂದ ಸಾಲ ನಿರ್ವಹಣೆ
- ಮಿಶ್ರ ಸಾಲಗಳು
- ಇತ್ತೀಚೆಗೆ ತೆರೆಯಲಾದ ಕ್ರೆಡಿಟ್ ಅಥವಾ ಸಾಲದ ಖಾತೆಗಳು
ಕ್ರೆಡಿಟ್ ರಿಪೋರ್ಟ್ ಎಂದರೇನು?
ಕ್ರೆಡಿಟ್ ರಿಪೋರ್ಟ್ ಅಥವಾ ಕ್ರೆಡಿಟ್ ಇನ್ಫಾರ್ಮೇಶನ್ ರಿಪೋರ್ಟ್ (ಸಿಐಆರ್) ಎಂಬುದು ನಿಮ್ಮ ಸಾಲಗಳ ಸಂಪೂರ್ಣ ವಿವರವಾಗಿರುತ್ತದೆ. ನೀವು ಎಷ್ಟು ವರ್ಷಗಳಿಂದ ಎಷ್ಟೆಷ್ಟು ಸಾಲ ಪಡೆದಿದ್ದೀರಿ. ಅದರಲ್ಲಿ ಸರಿಯಾದ ಸಮಯಕ್ಕೆ ಎಷ್ಟು ಸಾಲ ಮರುಪಾವತಿ ಮಾಡಿದ್ದೀರಿ. ಕಂತುಗಳನ್ನು ಸಕಾಲಕ್ಕೆ ಕಟ್ಟಿದ್ದೀರಾ ಇತ್ಯಾದಿ ಎಲ್ಲಾ ವಿವರಗಳು ಕ್ರೆಡಿಟ್ ರಿಪೋರ್ಟ್ನಲ್ಲಿ ಇರುತ್ತವೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದಿನಕ್ಕೆ 100 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತದೆ ಮೊತ್ತ?
ಬ್ಯಾಂಕುಗಳು ನಿಮಗೆ ಸಾಲ ಕೊಡುವ ಮುನ್ನ ಕ್ರೆಡಿಟ್ ರಿಪೋರ್ಟ್ ಅನ್ನು ಪರಿಶೀಲಿಸುತ್ತವೆ. ನಿಮ್ಮ ಆದಾಯ, ವೆಚ್ಚ, ವಿಳಾಸ, ಉದ್ಯೋಗಸ್ಥಳ ಇವೇ ಮುಂತಾದ ಮಾಹಿತಿ ಈ ರಿಪೋರ್ಟ್ನಲ್ಲಿ ಅಡಗಿರುತ್ತದೆ. ನೀವು ಎಷ್ಟು ಸಾಲ ಪಡೆಯಲು ಸಮರ್ಥರಿದ್ದೀರಿ ಎಂಬುದನ್ನು ಬ್ಯಾಂಕುಗಳು ನಿರ್ಧರಿಸಲು ಈ ರಿಪೋರ್ಟ್ ಅನುವು ಮಾಡಿಕೊಡುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ